ಬೆಂಗಳೂರು(ಫೆ.14): 2020ರ ಐಪಿಎಲ್‌ಗೆ ರಾಯಲ್‌ ಚಾಲೆಂಜ​ರ್ಸ್ ತಂಡ ವಿಭಿನ್ನ ರೀತಿಯಲ್ಲಿ ಸಜ್ಜಾಗುತ್ತಿದೆ. ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿರುವ ಆರ್‌ಸಿಬಿ, ಶುಕ್ರವಾರ ತಂಡದ ನೂತನ ಹೆಸರು ಹಾಗೂ ಲಾಂಛನವನ್ನು ಬಿಡುಗಡೆ ಮಾಡಲಿದೆ.

ಕೊಹ್ಲಿಗೆ ಮಾಹಿತಿ ನೀಡದೆ RCB ಪೋಸ್ಟ್ ಡಿಲೀಟ್!

ಈ ಬಗ್ಗೆ ಟ್ವೀಟರ್‌ನಲ್ಲಿ ಸ್ವತಃ ಆರ್‌ಸಿಬಿತಂಡವೇ ಸುಳಿವು ನೀಡಿದೆ. ಸಾಮಾಜಿಕ ತಾಣಗಳ ಖಾತೆಯಲ್ಲಿ ಡಿಸ್‌ಪ್ಲೇ ಪಿಕ್ಚರ್‌ (ಡಿಪಿ) ಹಾಗೂ ಕವರ್‌ ಫೋಟೋಗಳನ್ನು ತೆಗೆದು ಹಾಕಿದ್ದನ್ನು ನೋಡಿ, ನಾಯಕ ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯ​ರ್ಸ್ ಸೇರಿದಂತೆ ತಂಡದ ಎಲ್ಲಾ ಆಟಗಾರರು ಟ್ವೀಟ್‌ ಮೂಲಕ ತಂಡವನ್ನು ವಿಚಾರಿಸಿದ್ದರು. ಇದಕ್ಕೆ ಗುರುವಾರ ಸಂಜೆ ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿ, ಯಾವುದೇ ಗಾಬರಿಯಿಲ್ಲ, ಎಲ್ಲವೂ ಸರಿಯಾಗೇ ಇದೆ. ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳೋಣ ಎಂದು ಟ್ವೀಟಿಸಿದೆ. 

ಇದು ಪ್ರಚಾರಕ್ಕಾಗಿ ಆರ್‌ಸಿಬಿ ತಂಡ ನಡೆಸಿರುವ ಕಸರತ್ತು ಎಂದು ಹಲವರು ವಿಶ್ಲೇಷಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ರಾಯಲ್‌ ಚಾಲೆಂಜ​ರ್ಸ್ ಬ್ಯಾಂಗ್ಲೋರ್‌ ಎಂದಿರುವ ಹೆಸರನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಲಾಗುತ್ತದೆ ಎನ್ನಲಾಗಿದೆ.