ಕೊರೋನಾ ಕಾರಣ ಹಲವು ಬಾರಿ ಮುಂದೂಡಿಕೆ, ಸ್ಥಗಿತಗೊಂಡ ಐಪಿಎಲ್ ಟೂರ್ನಿ ಕೊನೆಗೂ ಆಯೋಜನೆಗೊಳ್ಳುತ್ತಿದೆ. ಇಂದು(ಸೆ.19) 13ನೇ ಆವೃತ್ತಿ ಐಪಿಎಲ್ ಟೂರ್ನಿ UAEನಲ್ಲಿ ಆರಂಭಗೊಳ್ಳುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ನಡೆಸುತ್ತಿದೆ. ಮೊದಲ ಪಂದ್ಯಕ್ಕೆ ಎಂ.ಎಸ್.ಧೋನಿ ನೇತೃತ್ವದ CSK ತಂಡದ ಪ್ಲೇಯಿಂಗ್ 11 ಹೇಗಿರಲಿದೆ?

ಅಬು ಧಾಬಿ(ಸೆ.19):  ಕೊರೋನಾ ವೈರಸ್‌ನಿಂದ ಸ್ಥಗಿತಗೊಂಡಿದ್ದ ಕ್ರಿಕೆಟ್ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಈಗಾಗಲೇ ಇಂಗ್ಲೆಂಡ್-ಆಸ್ಟ್ರೇಲಿಯಾ ಸೇರಿದಂತೆ ಕೆಲ ಟೂರ್ನಿಗಳು ಆರಂಭಗೊಂಡಿದ್ದರೂ, ಕ್ರಿಕೆಟ್ ಹಬ್ಬ ಇಂದಿನಿಂದ ಆರಂಭೊಳ್ಳುತ್ತಿದೆ. UAE 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ನಡೆಸುತ್ತಿದೆ.

"

IPL 2020: ಇಂದು ಹಾಲಿ ವರ್ಸಸ್ ಮಾಜಿ ಚಾಂಪಿಯನ್ನರ ಕಾದಾಟ

ಅಬು ಧಾಬಿಯ ಶೇಕ್ ಝಾಯೆದ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಹಿರಿಯ ನಾಯಕ ಎಂ.ಎಸ್.ಧೋನಿ ನೇತೃತ್ವದ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಇದೀಗ ಧೋನಿ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಸುವರ್ಣನ್ಯೂಸ್.ಕಾಂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಭಾವ್ಯ ತಂಡ ಪ್ರಕಟಿಸಿದೆ.

IPL 2020 ಕೊಲ್ಲಿ ರಾಷ್ಟ್ರದಲ್ಲಿ ಚುಟುಕು ಕ್ರಿಕೆಟ್ ಕಲರವ ಶುರು..!

CSK ಸಂಭಾವ್ಯ ಪ್ಲೇಯಿಂಗ್ XI:
ಶೇನ್ ವ್ಯಾಟ್ಸನ್, ಫಾಫ್ ಡುಪ್ಲೆಸಿಸ್, ಅಂಬಾಟಿ ರಾಯುಡು, ಕೆದಾರ್ ಜಾಧವ್, ಎಂ.ಎಸ್.ಧೋನಿ(ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಪಿಯೂಚ್ ಚಾವ್ಲಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್

"

ಮೆಚೆಲ್ ಸ್ಯಾಂಟ್ನರ್ ಸ್ಥಾನದಲ್ಲಿ ಕೆಲ ಬದಲಾವಣೆಗಳಾದರೂ ಅಚ್ಚರಿಯಿಲ್ಲ. ಕಾರಣ ಈ ಸ್ಥಾನಕ್ಕೆ ಇನ್ನಿಬ್ಬರು ವಿದೇಶಿ ಕ್ರಿಕೆಟಿಗರ ಪೈಪೋಟಿ ಇದೆ. ಲುಂಗಿ ಎನ್‌ಗಿಡಿ ಅಥವಾ ಇಮ್ರಾನ್ ತಾಹೀರ್ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. 

ಸಂಭಾವ್ಯ ಪ್ಲೇಯಿಂಗ್ 11 ಜೊತೆಗೆ ಮೊದಲ ಪಂದ್ಯದಲ್ಲಿ ಗೆಲ್ಲೋ ಕುದುರೆ ಯಾವುದು ಅನ್ನೋ ಚರ್ಚೆಯೂ ಆರಂಭಗೊಂಡಿದೆ. ಬಲಾಬಲದ ಪ್ರಕಾರ ಎರಡೂ ತಂಡ ಸರಿಸಮಾನವಾಗಿದೆ. ಸಂಪ್ರದಾಯದ ಪ್ರಕಾರ ಮುಂಬೈ ಬಹುತೇಕ ಆವೃತ್ತಿಗಳಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದೆ. ಈ ಬಾರಿಯೂ ಮುಂದುವರೆದರೆ ಸಿಎಸ್‌ಕೆ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ. ಇತ್ತ ಸಿಎಸ್‌ಕೆ ಆರಂಭದಿಂದ ಅಂತ್ಯದ ವರೆಗೆ ಪ್ರತಿ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. 

ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.