IPL 2020: ಇಂದು ಹಾಲಿ ವರ್ಸಸ್ ಮಾಜಿ ಚಾಂಪಿಯನ್ನರ ಕಾದಾಟ
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಬಗೆಗಿನ ಕ್ವಿಕ್ ಲುಕ್ ಇಲ್ಲಿದೆ ನೋಡಿ
ಅಬುಧಾಬಿ(ಸೆ.19): 2019ರ ಫೈನಲ್ಸ್‌ನಲ್ಲಿ ಸೆಣಸಾಡಿದ್ದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಈ ವರ್ಷದ ಐಪಿಎಲ್ ಹಬ್ಬಕ್ಕೆ ಚಾಲನೆ ನೀಡಲಿವೆ. 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮುಂಬೈ, ಭರ್ಜರಿ ಆರಂಭಕ್ಕೆ ಕಾಯುತ್ತಿದ್ದರೆ, ಮುಂಬೈ ಮೇಲೆ ಸೇಡು ತೀರಿಸಿಕೊಳ್ಳುವುದರೊಂದಿಗೆ 4ನೇ ಟ್ರೋಫಿ ಜಯಿಸುವ ಹಾದಿಯಲ್ಲಿ ಶುಭಾರಂಭ ಕಾಣಲು ಧೋನಿ ಪಡೆ ಕಾತರಿಸುತ್ತಿದೆ.
"
ಎರಡೂ ತಂಡಗಳು ಟೂರ್ನಿ ಆರಂಭಕ್ಕೆ ಮೊದಲೇ ಆಘಾತ ಕಂಡಿವೆ. ಪ್ರಮುಖ ವೇಗಿ ಲಸಿತ್ ಮಾಲಿಂಗ ಟೂರ್ನಿಯಿಂದ ಹಿಂದೆ ಸರಿದಿದ್ದು ಮುಂಬೈಗೆ ಹಿನ್ನಡೆ ಉಂಟು ಮಾಡಿತ್ತು. ಅಲ್ಲದೇ 2014ರಲ್ಲಿ ಯುಎಇನಲ್ಲಿ ಆಡಿದ್ದ 5 ಪಂದ್ಯಗಳಲ್ಲೂ ಮುಂಬೈ ಸೋಲುಂಡಿತ್ತು. ಕಳಪೆ ದಾಖಲೆ ಸಹ ನಾಯಕ ರೋಹಿತ್‌ಗೆ ತಲೆಬಿಸಿ ತಂದಿದೆ.
IPL 2020 ಕೊಲ್ಲಿ ರಾಷ್ಟ್ರದಲ್ಲಿ ಚುಟುಕು ಕ್ರಿಕೆಟ್ ಕಲರವ ಶುರು..!
ಇನ್ನು, ಇಬ್ಬರು ಆಟಗಾರರು ಸೇರಿ 13 ಮಂದಿಗೆ ಕೊರೋನಾ, ಸುರೇಶ್ ರೈನಾ ಯುಎಇಯಿಂದ ವಾಪಸಾಗಿದ್ದು, ಹರ್ಭಜನ್ ಸಿಂಗ್ ಯುಎಇಗೆ ತೆರಳದೇ ಇರುವುದು ಚೆನ್ನೈ ತಂಡದಲ್ಲಿ ಗೊಂದಲ ಸೃಷ್ಟಿಸಿತ್ತು. ಆದರೆ ಸಮಸ್ಯೆಗಳಿಗೆ ಉಭಯ ತಂಡಗಳು ಪರಿಹಾರ ಕಂಡುಕೊಂಡಿದ್ದು, ಗೆಲುವಿನ ಆರಂಭಕ್ಕಾಗಿ ಹಾತೊರೆಯುತ್ತಿವೆ.
"
ಒಟ್ಟು ಮುಖಾಮುಖಿ: 28
ಮುಂಬೈ: 17
ಚೆನ್ನೈ: 11
ಸಂಭವನೀಯ ಆಟಗಾರರು
ಮುಂಬೈ: ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಪೊಲ್ಲಾರ್ಡ್/ಕೌಲ್ಟರ್-ನೈಲ್, ಧವಳ್ ಕುಲ್ಕರ್ಣಿ, ರಾಹುಲ್ ಚಹಾರ್, ಮೆಕ್ಲನಾಘನ್/ಬೌಲ್ಟ್, ಜಸ್‌ಪ್ರೀತ್ ಬೂಮ್ರಾ.
ಚೆನ್ನೈ: ಶೇನ್ ವಾಟ್ಸನ್, ಮುರಳಿ ವಿಜಯ್, ಅಂಬಟಿ ರಾಯುಡು, ಎಂ.ಎಸ್.ಧೋನಿ(ನಾಯಕ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ಪೀಯೂಷ್ ಚಾವ್ಲಾ, ದೀಪಕ್ ಚಹರ್, ಲುಂಗಿ ಎನ್‌ಗಿಡಿ/ಇಮ್ರಾನ್ ತಾರ್.
ಪ್ರಾಬಲ್ಯ
ಅತ್ಯಂತ ಬಲಿಷ್ಠ ಮೇಲ್ಕ್ರಮಾಂಕ
ಟಿ20 ಅನುಭವರುವ ಆಲ್ರೌಂಡರ್ಸ್
ವೇಗಿ ಬುಮ್ರಾ ಟ್ರಂಪ್ ಕಾರ್ಡ್
ವಾಟ್ಸನ್, ರಾಯುಡು ಉಪಸ್ಥಿತಿ
ಕ್ಯಾಪ್ಟನ್ ಕೂಲ್ ಧೋನಿ ನಾಯಕತ್ವ
ಅತ್ಯುತ್ತಮ ಸ್ಪಿನ್ನರ್‌ಗಳ ಬಲ
ದೌರ್ಬಲ್ಯ
ಅನುಭವಿ ಮಾಲಿಂಗ ಅನುಪಸ್ಥಿತಿ
ಅನುಭವಿ ಸ್ಪಿನ್ನರ್‌ಗಳ ಕೊರತೆ
ಯುಎಇನಲ್ಲಿ ಕಳಪೆ ದಾಖಲೆ
ಕಾಡಲಿದೆ ರೈನಾ, ಭಜ್ಜಿ ಅನುಪಸ್ಥಿತಿ
ಮಧ್ಯಮ ಕ್ರಮಾಂಕ ಬಲಿಷ್ಠವಾಗಿಲ್ಲ
ದೇಶಿ ವೇಗಿ ಆಯ್ಕೆಯಲ್ಲಿ ಗೊಂದಲ
ಪಿಚ್ ರಿಪೋರ್ಟ್: ಅಬುಧಾಬಿ ಪಿಚ್‌ನಲ್ಲಿ ಸರಾಸರಿ ರನ್‌ರೇಟ್ 7 ಇದ್ದು, ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡುವ ಸಾಧ್ಯತೆ ಹೆಚ್ಚು. ಮೊದಲ ಇನ್ನಿಂಗ್ಸ್‌ನಲ್ಲಿ 160-170 ಮೊತ್ತ ನಿರೀಕ್ಷೆ ಮಾಡಲಾಗಿದೆ. ದೊಡ್ಡ ಕ್ರೀಡಾಂಗಣವಾಗಿರುವ ಕಾರಣ, ಸ್ಪಿನ್ನರ್‌ಗಳ ಪಾತ್ರ ಮಹತ್ವದಾಗಿರಲಿದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್‌ರ್