ಅಬುಧಾಬಿ(ಅ.30): : ಸತತ 5 ಪಂದ್ಯ ಗೆದ್ದಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ರಾಜಸ್ಥಾನ ರಾಯಲ್ಸ್‌ ವಿರುದ್ಧ ಇಲ್ಲಿ ಶುಕ್ರವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಎದುರಾಗಲಿದೆ. 13ನೇ ಆವೃತ್ತಿಯಲ್ಲಿ ಪ್ಲೇ ಆಫ್‌ ಹಂತಕ್ಕೇರಲು ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ. 

ಕ್ರಿಸ್ ಗೇಲ್ ಮಡದಿ ನತಾಶಾ ಬೆರಿಡ್ಜ್ ಸೂಪರ್ ಮಾಡೆಲ್‌ಗಿಂತ ಕಡಿಮೆಯಿಲ್ಲ!..

ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಪಂಜಾಬ್‌ ಸತತ ಗೆಲುವು ಪಡೆಯುವ ಮೂಲಕ 4ನೇ ಸ್ಥಾನಕ್ಕೇರಿದೆ. 12 ಪಂದ್ಯಗಳಲ್ಲಿ ಪಂಜಾಬ್‌ 6ರಲ್ಲಿ ಗೆದ್ದಿದ್ದು 12 ಅಂಕಗಳಿಸಿದೆ. ಉಳಿದ 2 ಪಂದ್ಯಗಳಲ್ಲಿ ಪಂಜಾಬ್‌ ಗೆಲುವು ಸಾಧಿಸಲೇಬೇಕಿದೆ. ಇನ್ನೊಂದೆಡೆ ರಾಜಸ್ಥಾನ 12 ಪಂದ್ಯಗಳಿಂದ 7 ಸೋಲು ಅನುಭವಿಸಿದ್ದು, 5ರಲ್ಲಿ ಗೆದ್ದು 10 ಅಂಕಗಳಿಂದ 7ನೇ ಸ್ಥಾನದಲ್ಲಿದೆ. ಇದೀಗ ಪಂಜಾಬ್‌ ವಿರುದ್ಧ ಗೆದ್ದು ಪ್ಲೇ ಆಫ್‌ ರೇಸ್‌ನಲ್ಲಿ ಉಳಿಯುವ ವಿಶ್ವಾಸದಲ್ಲಿ ಸ್ಮಿತ್‌ ಪಡೆ ಇದೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಜಸ್ಥಾನ 8 ವಿಕೆಟ್‌ಗಳಿಂದ ಜಯಿಸಿದ್ದು, ಅದೇ ಲಯವನ್ನು ಮುಂದುವರಿಸುವ ಉತ್ಸಾಹದಲ್ಲಿದೆ.

ಗಂಗೂಲಿ To ಧೋನಿ: ಬಾಲ್ಯದ ಗೆಳೆತಿಯರ ಮದುವೆಯಾದ ಕ್ರಿಕೆಟಿಗರು!.

ಮುಖಾಮುಖಿ: 20
ಪಂಜಾಬ್‌: 09
ರಾಜಸ್ಥಾನ: 11

ಪಿಚ್‌ ರಿಪೋರ್ಟ್‌:
ಅಬುಧಾಬಿ ಪಿಚ್‌ ಸ್ಪರ್ಧಾತ್ಮಕವಾಗಿದೆ. ಮೊದಲು ಬ್ಯಾಟ್‌ ಮಾಡುವ ತಂಡ 170 ರಿಂದ 180 ರನ್‌ ಕಲೆಹಾಕಬೇಕಿದೆ. ಕಳೆದೆರಡು ಪಂದ್ಯಗಳಲ್ಲಿ 2ನೇ ಬ್ಯಾಟಿಂಗ್‌ ನಡೆಸಿದ ತಂಡವೇ ಗೆದ್ದಿದೆ.

ಸ್ಥಳ: ಅಬುಧಾಬಿ, ಆರಂಭ: ರಾತ್ರಿ 7.30ಕ್ಕೆ