ಗಂಗೂಲಿ To ಧೋನಿ: ಬಾಲ್ಯದ ಗೆಳೆತಿಯರ ಮದುವೆಯಾದ ಕ್ರಿಕೆಟಿಗರು!
ಭಾರತೀಯರು ಕ್ರಿಕೆಟ್ ಜೊತೆ ಕ್ರಿಕೆಟಿಗರ ವೈಯಕ್ತಿಕ ಜೀವನದ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ. ಆಟಗಾರರ ಫ್ಯಾಮಿಲಿ, ವೈವಾಹಿಕ ಜೀವನದ ಬಗ್ಗೆಯ ಸುದ್ದಿಗಳನ್ನು ಅಭಿಮಾನಿಗಳು ತಿಳಿದು ಕೊಳ್ಳಲು ಇಷ್ಷ ಪಡುತ್ತಾರೆ.ಹಲವು ಕ್ರಿಕೆಟರ್ಸ್ ತಮ್ಮ ಬಾಲ್ಯದ ಗೆಳತಿಯರನ್ನೇ ಮದುವೆಯಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ, ಅವರಲ್ಲಿ ಕೆಲವರು..
ಸಾಕಷ್ಟು ಭಾರತೀಯ ಕ್ರಿಕೆಟಿಗರ ಹೆಸರು ಮಾಡೆಲ್‌ಗಳು ಅಥವಾ ಬಾಲಿವುಡ್ ನಟಿಯರ ಜೊತೆ ಕೇಳಿ ಬಂದಿವೆ. ಆದರೆ ಕೆಲವರು ತಮ್ಮ ಪರ್ಸನಲ್ ಲೈಫ್ ಅನ್ನು ಸಿಂಪಲ್ ಆಗಿ ಇಡಲು ಬಯಸುತ್ತಾರೆ.
ಟೀಮ್ ಇಂಡಿಯಾದ ಕೆಲವು ಆಟಗಾರರು ತಮ್ಮ ಬಾಲ್ಯದ ಗೆಳತಿಯರನ್ನು ಮದುವೆಯಾಗಿದ್ದಾರೆ.ಈ ಪಟ್ಟಿಯಲ್ಲಿ ಧೋನಿಯಿಂದ ಹಿಡಿದು ಗಂಗೂಲಿವರೆಗೆ ಕೆಲವರಿದ್ದಾರೆ.
ಸೌರವ್ ಗಂಗೂಲಿ: ಮಾಜಿ ಕ್ಯಾಪ್ಟನ್ ಗಂಗೂಲಿ 1997ರಲ್ಲಿ ಡೋನಾರನ್ನು ಮದುವೆಯಾದರು. ಇಬ್ಬರು ಬಾಲ್ಯ ಸ್ನೇಹಿತರಾಗಿದ್ದರು. ಆದರೆ ಕುಟುಂಬಗಳ ದ್ವೇಷದ ಕಾರಣದಿಂದ ತಮ್ಮ ಪ್ರೀತಿಯನ್ನು ರಹಸ್ಯವಾಗಿರಿಸಿಟ್ಟಿದ್ದರು. ಅಂತಿಮವಾಗಿ ಕುಟುಂಬಗಳು ರಾಜಿಯಾದರು. ಈ ಜೋಡಿಗೆ ಒಬ್ಬಳು ಮಗಳಿದ್ದಾಳೆ.
ಎಂ.ಎಸ್.ಧೋನಿ: ಕ್ಯಾಪ್ಟನ್ ಕೂಲ್ ಧೋನಿ ಬಾಲಿವುಡ್‌ನ ಅನೇಕ ನಟಿಯರ ಜೊತೆ ಸಂಬಂಧ ಹೊಂದಿದ್ದರು. ಇವರು ರಿಲೆಷನ್‌ಶಿಪ್‌ನಲ್ಲಿದ್ದ ಪ್ರಿಯಾಂಕಾ ಎಂಬ ಹುಡುಗಿ ಅಪಘಾತದಲ್ಲಿ ಮರಣ ಹೊಂದಿದರು. ನಂತರ ಧೋನಿ ಕೋಲ್ಕತ್ತಾದ ಹೋಟೆಲ್‌ನಲ್ಲಿ ಸಾಕ್ಷಿಯನ್ನು ಭೇಟಿಯಾದರು.
ಇಬ್ಬರು ಒಂದೇ ಶಾಲೆಯಲ್ಲಿ ಓದುತ್ತಿದ್ದು, ರಾಂಚಿಯಲ್ಲಿ ಬಾಲ್ಯ ಸ್ನೇಹಿತರಾಗಿದ್ದರು. ಸಾಕ್ಷಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಕುಟುಂಬದೊಂದಿಗೆ ಡೆಹ್ರಾಡೂನ್‌ಗೆ ತೆರಳಿದ ಕಾರಣದಿಂದ ಇಬ್ಬರು ಸಂಪರ್ಕವನ್ನು ಕಳೆದುಕೊಂಡಿದ್ದರು. ನಂತರ, ಅದೃಷ್ಟವು ಮತ್ತೆ ಈ ಜೋಡಿಯನ್ನು ಒಂದುಗೂಡಿಸಿತು. ಇಬ್ಬರು 2010ರಲ್ಲಿ ಮದುವೆಯಾಗಿದ್ದು ಈಗ ಐದು ವರ್ಷದ ಮಗಳಿದ್ದಾಳೆ.
ಅಜಿಂಕ್ಯ ರಹಾನೆ: ರಹಾನೆ ಹಾಗೂ ರಾಧಿಕಾ ಇಬ್ಬರೂ ತಮ್ಮ ಬಾಲ್ಯದ ದಿನಗಳಲ್ಲಿ ಸ್ನೇಹಿತರಾಗಿದ್ದರೂ, ಒಬ್ಬರಿಗೊಬ್ಬರು ಭಾವನೆ ವ್ಯಕ್ತಪಡಿಸಲು ತುಂಬಾ ನಾಚಿಕೆ ಪಡುತ್ತಿದ್ದರು, ಅವರ ತಂದೆ ಮದುವೆಗೆ ಒತ್ತಾಯಿಸಿದಾಗ 2014ರಲ್ಲಿ ಮದುವೆಯಾದರು.
ಸುರೇಶ್ ರೈನಾ: ರೈನಾ ಮದುವೆ ಅರೇಂಜ್ ಮ್ಯಾರೇಜ್. ಅವರು ಆಸ್ಟ್ರೇಲಿಯಾದಲ್ಲಿದ್ದಾಗ, ತಾಯಿ ಪ್ರಿಯಾಂಕಾ ಜೊತೆ ವಿವಾಹವನ್ನು ನಿಗದಿಪಡಿಸಿದ್ದಾರೆಂದು ಕಾಲ್ ಮೂಲಕ ಹೇಳಿದ್ದರು. ಪ್ರಿಯಾಂಕಾ ಅವರೊಂದಿಗೆ ಮೊದಲ ಬಾರಿಗೆ ಮಾತನಾಡುತ್ತಿದ್ದಾಗ, ಪ್ರಿಯಾಂಕಾ ಕುಟುಂಬವು ಪಂಜಾಬ್‌ಗೆ ತೆರಳುವ ಮೊದಲು, ಉತ್ತರ ಪ್ರದೇಶದಲ್ಲಿ ಇಬ್ಬರು ಹಳೆಯ ನೆರೆಹೊರೆಯ ಸ್ನೇಹಿತರು ಎಂದು ತಿಳಿದುಬಂದಿದೆ. ಆದರೆ ಸಂಪರ್ಕವನ್ನು ಕಳೆದುಕೊಂಡಿದ್ದರು.
ವೀರೇಂದ್ರ ಸೆಹ್ವಾಗ್: ಭಾರತದ ಫೇಮಸ್ ಓಪನರ್ ಹೆಸರು ಯಾವುದೇ ಮಹಿಳೆಯ ಜೊತೆ ಲಿಂಕ್ ಆಗಿಲ್ಲ . 2004ರಲ್ಲಿ ಸೆಹ್ವಾಗ್ ಆರತಿಗೆ ಔಟ್ ಆದರು. ಇಬ್ಬರು ಬಾಲ್ಯದ ಸ್ನೇಹಿತರು ಮಾತ್ರವಲ್ಲ, ಆದರೆ ದೂರದ ಸಂಬಂಧಿಯೂ ಹೌದು. ಅವರ ಸಂಬಂಧ ಫ್ಯಾಮಿಲಿಗೆ ಇಷ್ಟವಿರಲಿಲ್ಲ. ಕೊನೆಗೆ ಪ್ರೀತಿಯೇ ಗೆದ್ದಿತು. ಈಗ ಇಬ್ಬರು ಗಂಡು ಮಕ್ಕಳ ಪೋಷಕರು ಈ ಕಪಲ್.