ಮುಂಬೈ(ಅ.28): ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಇದೀಗ ಟೂರ್ನಿ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಿದೆ. ನವೆಂಬರ್ 27 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೂರ್ನಿ ಆರಂಭಗೊಳ್ಳಲಿದೆ. ನವೆಂಬರ್ 10 ರಂದು ಐಪಿಎಲ್ ಟೂರ್ನಿ ಅಂತ್ಯಗೊಳ್ಳಲಿದೆ. 

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರಾಹುಲ್‌ಗೆ ಉಪನಾಯಕ ಪಟ್ಟ!

ಐಪಿಎಲ್ ಟೂರ್ನಿ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ದುಬೈನಿಂದ ನೇರವಾಗಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಬಳಿಕ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ. ನವೆಂಬರ್ 12 ರಂದು ಟೀಂ ಇಂಡಿಯಾ ಕ್ರಿಕೆಟಿಗರು ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಚಾರ್ಟೆಡ್ ಫ್ಲೈಟ್ ಮೂಲಕ ಆಸೀಸ್ ಪ್ರಯಾಣ ಮಾಡಲಿದ್ದಾರೆ. 

ಭಾರತ vs ಆಸ್ಟ್ರೇಲಿಯಾ ಬಾಕ್ಸಿಂಡ್ ಡೇ ಟೆಸ್ಟ್; ಅಭಿಮಾನಿಗಳಿಗೆ ಗುಡ್ ನ್ಯೂಸ್!.

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ 2020-21
1ನೇ ಏಕದಿನ: ನವೆಂಬರ್ 27, ಸಿಡ್ನಿ , 9:10 AM IST
2ನೇ ಏಕದಿನ: ನವೆಂಬರ್ 29, ಸಿಡ್ನಿ, 9:10 AM IST
3ನೇ ಏಕದಿನ: ಡಿಸೆಂಬರ್ 2, ಓವಲ್, 9:10 AM IST

ಭಾರತ-ಆಸ್ಟ್ರೇಲಿಯಾ T20I ಸರಣಿ 2020-21
1ನೇ ಟಿ20: ಡಿಸೆಂಬರ್ 4, ಓವಲ್,1:40 PM IST
2ನೇ ಟಿ20: ಡಿಸೆಂಬರ್ 6, ಸಿಡ್ನಿ, 1:40 PM IST
3ನೇ ಟಿ20: ಡಿಸೆಂಬರ್ 8, ಸಿಡ್ನಿ, 1:40 PM IST

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಅಭ್ಯಾಸ ಪಂದ್ಯ 2020-21
ಮೊದಲ ಪ್ರಾಕ್ಟೀಸ್ ಪಂದ್ಯ: ಡಿಸೆಂಬರ್ 6-8, ಓವಲ್, 5:00 AM IST
2ನೇ ಪ್ರಾಕ್ಟೀಸ್ ಪಂದ್ಯ: ಡಿಸೆಂಬರ್, 11-13, ಸಿಡ್ನಿ (day-night), 9:30 AM IST

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ 2020-21
1ನೇ ಟೆಸ್ಟ್: ಡಿಸೆಂಬರ್ 17.21, ಆಡಿಲೇಡ್ ಓವಲ್, (day-night), 9;30 AM IST
2ನೇ ಟೆಸ್ಟ್: ಡಿಸೆಂಬರ್, 26-30, ಮೆಲ್ಬೋರ್ನ್, 5:00 AM IST 
3ನೇ ಟೆಸ್ಟ್: ಜನವರಿ, 7-11, ಸಿಡ್ನಿ, 5:00 AM IST
4ನೇ ಟೆಸ್ಟ್: ಜನವರಿ, 15-19, ಗಬ್ಬಾ, , 5:30 AM IST