ಮೆಲ್ಬೋರ್ನ್(ಅ.26): ಐಪಿಎಲ್ ಟೂರ್ನಿ ಅಂತ್ಯಗೊಂಡ ಬೆನ್ನಲ್ಲೇ ಭಾರತ ಹಾಗೂ ಆಸ್ಟ್ರೇಲಿಯಾ ಸರಣಿ ನಡೆಯಲಿದೆ. ಟೆಸ್ಟ್, ಏಕದಿನ ಹಾಗೂ ಟಿ20 ಸರಣಿ ಹಲವು ಕಾರಣಗಳಿಂದ ಮಹತ್ವ ಪಡೆದಿದೆ. ಈ ಸರಣಿಗೆ ಬಿಸಿಸಿಐ ಈಗಾಗಲೇ ಟೀಂ ಇಂಡಿಯಾ ಪ್ರಕಟಸಿದೆ. ಇದೀಗ ತಂಡ ಪ್ರಕಟಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರಾಹುಲ್‌ಗೆ ಉಪನಾಯಕ ಪಟ್ಟ!.

ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಅಭಿಮಾನಿಗಳಿಗೆ ಅವಕಾಶ ನೀಡಲು ಚಿಂತಿಸಿದೆ.. ಹೌದು ಕೊರೋನಾ ವೈರಸ್ ಕಾರಣ ಸದ್ಯ ನಡೆಯುತ್ತಿರುವ ಎಲ್ಲಾ ಕ್ರಿಕೆಟ್ ಪಂದ್ಯ ಕ್ರೀಡಾಂಗಣದಲ್ಲಿ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶವಿಲ್ಲ. ಆದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ನೀಡುವು ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಚರ್ಚೆ ನಡೆಸಿದೆ. 

ಈ ಭಾರತೀಯ ಕ್ರಿಕೆಟಿಗರು ಹೈಲೀ ಕ್ವಾಲಿಫೈಡ್‌!

ಮುಂದಿನ ವಾರ ಮೆಲ್ಬೋರ್ನ್ ಕಪ್ ಕುದರೆ ರೇಸ್ ನಡೆಯಲಿದೆ. ಇದಕ್ಕೆ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ನಿರ್ಧಾರದ ಬೆನ್ನಲ್ಲೇ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ  ಮೆಲ್ಬೋರ್ನ್ ಪಂದ್ಯಕ್ಕೆ ಅಭಿಮಾನಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.  ಕುದುರೆ ರೇಸ್ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಅಧೀಕೃತ ಪ್ರಕಟಣೆ ಹೊರಡಿಸಲಿದೆ. 

ಕೊರೋನಾ ವೈರಸ್ ಕಾರಣ ಸದ್ಯ ಕ್ರಿಕೆಟ್ ಪಂದ್ಯದ ನಿಯಮಗಳು ಬದಲಾಗಿದೆ. ಕ್ರೀಡಾಂಗಣದಲ್ಲಿ ಉಭಯ ತಂಡದ ಆಟಗಾರರು, ಸಹಾಯಕ ಸಿಬ್ಬಂಧಿ ಸೇರಿದಂತೆ ಇತರ ಸಿ್ಬ್ಬಂದಿಗೆ ಮಾತ್ರ ಅವಕಾಶವಿದೆ. ಇನ್ನು ಕ್ರಿಕೆಟಿಗರು ಚೆಂಡಿಗೆ ಎಂಜಲು ಸವರುವಂತಿಲ್ಲ. ಆಟಗಾರರು ಮೈದಾನ, ಹೊಟೆಲ್ ಬಿಟ್ಟು ಇತರೆಡೆ ತೆರಳುವಂತಿಲ್ಲ. ಆಟಗಾರರಿಗೆ ಕ್ವಾರಂಟೈನ್ ಕಡ್ಡಾಯವಾಗಿದೆ.