ಮುಂಬೈ(ಅ.01): ಐಪಿಎಲ್ ಟೂರ್ನಿ, ವಿಶ್ವಕಪ್ ಸೇರಿದಂತೆ ಹಲವು ಟೂರ್ನಿ ಆರಂಭಕ್ಕೂ ಮುನ್ನವೇ ಹಲವು ಕ್ರಿಕೆಟಿಗರು ಭವಿಷ್ಯ ನುಡಿಯುತ್ತಾರೆ. ಆದರೆ ಟೀಂ ಇಂಡಿಯಾ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ದೀಲಿಪ್ ವೆಂಗಸರ್ಕರ್ ಹೆಚ್ಚಾಗಿ ಭವಿಷ್ಯ ನುಡಿದವರಲ್ಲ. ಕ್ರಿಕೆಟಿಗನ ಪ್ರತಿಭೆಯನ್ನು ಗಮನಿಸಿ, ಮುಂದಿನ ದಿನದಲ್ಲಿ ಈ ಹುಡುಗ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನಾಗುತ್ತಾನೆ ಎಂದಿದ್ದಾರೆ. ಇಷ್ಟೇ ಅಲ್ಲ ಅದು ನಿಜವಾಗಿದೆ. ಇದೀಗ ದೀಲಿಪ್ ವೆಂಗಸರ್ಕರ್, 13ನೇ ಆವೃತ್ತಿ ಐಪಿಎಲ್ ಟ್ರೋಫಿ RCB ಪಾಲಾಗಲಿದೆ ಎಂದಿದ್ದಾರೆ.

ರೋಚಕ ಗೆಲುವಿನ ಬಳಿಕ RCBಗೆ ಲಾಂಗ್ ಲೀವ್, ಖುಷಿಯಲ್ಲಿ ಮಜಾ ಉಡಾಯಿಸ್ತಿದೆ ಕೊಹ್ಲಿ ಪಡೆ!

12 ಆವೃತ್ತಿಗಳಲ್ಲಿ ಟ್ರೋಫಿ ಕೈಚೆಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಟ್ರೋಫಿ ಗೆಲ್ಲಲಿದೆ ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ. RCB ತಂಡದ ಪ್ರಮುಖ ಪಿಲ್ಲರ್‌ಗಳಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಫಾರ್ಮ್‌ನಲ್ಲಿದ್ದಾರೆ. ಕೊಹ್ಲಿ ಅಬ್ಬರಿಸಿದಿದ್ದರೂ ಟಚ್‌ನಲ್ಲಿದ್ದಾರೆ. ಇತ್ತ ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ ಮಾಡಿದ್ದಾರೆ. ಇಷ್ಟೇ ಅಲ್ಲ ನವದೀಪ್ ಸೈನಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು RCB ಟ್ರೋಫಿ ಗೆಲುವಿಗೆ ಸಹಕಾರಿಯಾಗಿದೆ ಎಂದು ವೆಂಗಸರ್ಕರ್ ಹೇಳಿದ್ದಾರೆ.

ಸೂಪರ್ ಓವರ್ ಮ್ಯಾಜಿಕ್; ಕೊನೆಗೂ ಗೆದ್ದು ಬೀಗಿದ ಆರ್‌ಸಿಬಿ...

20 ಮಾದರಿಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂದು ಹೇಳುವುದು ಕಷ್ಟ. ಆದರೆ ಈ ಬಾರಿ RCB ಪ್ರದರ್ಶನ ಗಮನಿಸಿದರೆ ಹಿಂದಿನ ಆವೃತ್ತಿಗಳಿಂದ ಉತ್ತಮ ಪ್ರದರ್ಶನ ನೀಡಿದೆ. ಇಷ್ಟೇ ಅಲ್ಲ ಸೋಲಿನಿಂದ ಬಹುಬೇಗನೆ ಕಮ್‌ಬ್ಯಾಕ್ ಮಾಡಿದೆ. ಹೀಗಾಗಿ RCB ಟ್ರೋಫಿ ಕೊರಗನ್ನು ನೀಗಿಸಲಿದೆ ಎಂದು ದಿಲೀಪ್ ವೆಂಗಸರ್ಕರ್ ಹೇಳಿದ್ದಾರೆ.