ದುಬೈ(ಸೆ. 29) ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಆರ್ ಸಿಬಿ ಕೊನೆಗೂ ಗೆಲುವಿನ ನಗೆ ಬೀರಿದೆ. ಭರ್ಜರಿ ಸ್ಕೋರಿನ ಪಂದ್ಯದಲ್ಲಿ ಸೂಪರ್ ಓವರ್ ಧಮಾಕಾ ಸಿಕ್ಕಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಓವರ್ ನಲ್ಲಿ ಜಯ ಗಳಿಸಿದ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.   ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಸೋಮವಾರ  ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಸೂಪರ್ ಓವರ್‌ನತ್ತ ಸಾಗಿತ್ತು.

ಫಿಂಚ್; ಪಡಿಕ್ಕಲ್, ಎಬಿಡಿ ಅಬ್ಬರ; ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ದೇವದತ್ ಪಡಿಕ್ಕಲ್ 54 (40 ಎಸೆತ), ಆ್ಯರನ್ ಫಿಂಚ್ 52 (35 ಎಸೆತ), ಎಬಿ ಡಿವಿಲಿಯರ್ಸ್ 55 (24 ಎಸೆತ), ಶಿವಂ ದೂಬೆ 27 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದುಕೊಂಡು 201 ರನ್ ಭರ್ಜರಿ ಮೊತ್ತ ಕಲೆಹಾಕಿತು.  

ಇತಿಹಾಸದಲ್ಲಿ ಉಳಿಯುವ  ರಾಹುಲ್ ತೆವಾಟಿಯಾ ಇನಿಂಗ್ಸ್

ಕಿಶನ್; ಪೊಲಾರ್ಡ್ ರನ್ ಮಳೆ; ಗುರಿ ಬೆನ್ನಟ್ಟಿದ ಮುಂಬೈ ಪರ ರೋಹಿತ್ ಶರ್ಮಾ 8, ಹಾರ್ದಿಕ್ ಪಾಂಡ್ಯ 15, ಇಶಾನ್ ಕಿಶನ್ 99, ಕೀರನ್ ಪೊಲಾರ್ಡ್ 60 ರನ್ ಸೇರಿಸಿದರು. ಮುಂಬೈ ತಂಡ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸಿ ಸಮನಾಗಿ ನಿಂತಿತು. ಕೊನೆಯ ಎಸೆತದಲ್ಲಿ ಐದು ರನ್ ಬೇಕಿದ್ದು ಪೋಲಾರ್ಡ್ ಬೌಂಡರಿ ಬಾರಿಸಿದರು. 

ಕೊನೆಯ ಐದು ಓವರ್ ನಲ್ಲಿ ಗೆಲ್ಲಲು ಮುಂಬೈಗೆ ತೊಂಭತ್ತು ರನ್ ಗಳು ಬೇಕಿದ್ದವು. ಅಬ್ಬರಿಸಿದ ಪೋಲಾರ್ಡ್ ರನ್ ಮಳೆಗೈದರು. ಇನ್ನೊಂದುಕಡೆ ಬ್ಯಾಟ್ ಬೀಸಿದ ಕಿಶನ್ ಕೇವಲ ಒಂದು ರನ್ ನಿಂದ ಶತಕ ತಪ್ಪಿಸಿಕೊಂಡರು.

ಸೂಪರ್ ಓವರ್‌ ಮ್ಯಾಜಿಕ್;  ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ 1 ವಿಕೆಟ್ ಕಳೆದು 7 ರನ್ ಗಳಿಸಿತು.  ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ರನ್ ಗಳಿಸಿ ವಿಜಯದ ನಗೆ ಬೀರಿತು.  ಆರ್‌ಸಿಬಿ ಪರ ಸೈನಿ ಸೂಪರ್ ಓವರ್ ಬೌಲಿಂಗ್ ಮಾಡಿ ಕೇವಲ ಏಳು ರನ್ ನೀಡಿದರು. ಮುಂಬೈ ಪರ ಬುಮ್ರಾ ದಾಳಿಗೆ ಇಳಿದರೂ ಗೆಲುವು ಸಾಧ್ಯವಾಗಲಿಲ್ಲ. ಬುಮ್ರಾ ಈ ಹಿಂದೆ ಎಸೆದ ಸೂಪರ್ ಓವರ್ ಎಲ್ಲದರಲ್ಲಿ ಮುಂಬೈಗೆ ಗೆಲುವು ತಂದುಕೊಟ್ಟಿದ್ದರು.