ದುಬೈ(ಸೆ.11):  ಐಪಿಎಲ್ ಟೂರ್ನಿಗೆ ಅಭ್ಯಾಸ ಮಾಡುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆತ್ಮವಿಶ್ವಾಸ ಡಬಲ್ ಆಗಿದೆ. ಇಷ್ಟೇ ಅಲ್ಲ ಭರ್ಜರಿ ಗೆಲುವಿನೊಂದಿಗೆ ಮುನ್ನಗ್ಗಲು ಕೆಕೆಆರ್ ತಂಡ ಸಜ್ಜಾಗಿದೆ. ಇದಕ್ಕೆ ಮುಖ್ಯ ಕಾರಣ ತಂಡದ ವಿದೇಶಿ ಹಾಗೂ ಪ್ರಮುಖ ಆಟಗಾರರಾದ ಇಯಾನ್ ಮಾರ್ಗನ್ ಹಾಗೂ ವೇಗಿ ಪ್ಯಾಟ್ ಕಮಿನ್ಸ್ ಮೊದಲ ಪಂದ್ಯಕ್ಕೆ ಲಭ್ಯರಿದ್ದಾರೆ.

CPL 2020: ಶಾರುಖ್ ಖಾನ್ ಒಡೆತನದ TKR ಚಾಂಪಿಯನ್

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಕಾರಣ ಇಬ್ಬರು ಆಟಗಾರರ ಲಭ್ಯತೆ ಇರಿಲಿಲ್ಲ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಏಕದಿನ ಸರಣಿ ಅಂತ್ಯಗೊಳ್ಳಲಿದೆ.. ಆದರೆ 14 ದಿನದ ಕ್ವಾರಂಟೈನ್ ನಿಯಮದ ಕಾರಣ ಕೆಕೆಆರ್ ಆರಂಭಿಕ ಪಂದ್ಯಕ್ಕೆ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಹಾಗೂ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಲಭ್ಯ ವಿರಲಿಲ್ಲ. 

IPL 2020: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ ಪ್ರಕಟ..!

ಕೆಕೆಆರ್ ತಂಡ ಯುನೈಟೆಡ್ ಅರಬ್ ಎಮಿರೈಟ್ಸ್ ಕ್ವಾರಂಟೈನ್ ಅವಧಿಯನ್ನು ಕಡಿತಗೊಳಿಸಲು ಮನವಿ ಮಾಡಿತ್ತು. ಕೆಕೆಆರ್ ಮನವಿ ಪುರಸ್ಕರಿಸಲಾಗಿದ್ದು, 14 ದಿನದ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಸೀಮಿತಗೊಳಿಸಲಾಗಿದೆ. ಸೆಪ್ಟೆಂಬರ್ 17 ರಂದು ಮಾರ್ಗನ್ ಹಾಗೂ ಕಮಿನ್ಸ್ ದುಬೈಗೆ ಆಗಮಿಸಲಿದ್ದಾರೆ. ಕೆಕೆಆರ್ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 23ರಂದು ಆಡಲಿದೆ. ಕ್ವಾರಂಟೈನ್ ಅವದಿ ಕಡಿತಗೊಳಿಸಿದ ಕಾರಣ ಇಬ್ಬರೂ ಕ್ರಿಕೆಟಿಗರೂ ಕೆಕೆಆರ್ ಮೊದಲ ಪಂದ್ಯದಿಂದಲೇ ಲಭ್ಯರಿದ್ದಾರೆ.