ಅಬು ಧಾಬಿ(ಸೆ.29):  13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಆಡಿದ 2 ಪಂದ್ಯ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇತ್ತ 2 ಪಂದ್ಯಗಳನ್ನು ಸೋತಿರುವ ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಇದೀಗ 3ನೇ ಪಂದ್ಯದಲ್ಲಿ ಹೈದರಾಬಾದ್ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದರೆ, ಭರ್ಜರಿ ಫಾರ್ಮ್‌ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಗೆಲುುವಿನ ಲೆಕ್ಕಾಚಾರದಲ್ಲಿದೆ.

ಐಪಿಎಲ್ 2020: ಸಿಕ್ಸರ್‌ಗಳ ಸುರಿಮಳೆ; 10 ಪಂದ್ಯಗಳಲ್ಲಿ ದಾಖಲಾದ ಒಟ್ಟು ಸಿಕ್ಸರ್‌ಗಳೆಷ್ಟು..?

ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆ ಎದುರಿಸುತ್ತಿದೆ. ಕಳೆದ ಪಂದ್ಯದಲ್ಲಿ ಮೊಹಮ್ಮದ್ ನಬಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಹೀಗಾಗಿ ನಬಿ ಸ್ಥಾನದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸ್ಥಾನ ಪಡೆಯುವ ಸಾಧ್ಯತೆ ಇದೆ.  ಹೀಗಾಗಿ ತಂಡದಲ್ಲಿ ಮಹತ್ತರ ಬದಲಾವಣೆ ಸಾಧ್ಯತ ಹೆಚ್ಚಿದೆ.

ಸೂಪರ್ ಓವರ್‌ನಲ್ಲಿ ಇಶನ್‌ ಕಿಶನ್ ಯಾಕೆ ಬ್ಯಾಟಿಂಗ್ ಮಾಡಲಿಲ್ಲ; ಸೀಕ್ರೇಟ್ ಬಿಚ್ಚಿಟ್ಟ ರೋಹಿತ್ ಶರ್ಮಾ..!.

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ವೃದ್ಧಿಮಾನ್ ಸಾಹ, ಪ್ರಿಯಂ ಗರ್ಗ್, ಅಭಿಶೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಬಸಿಲ್ ಥಂಪಿ, ಟಿ ನಟರಾಜನ್

ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್  ಈ ಆವೃತ್ತಿಯಲ್ಲಿ ಹೆಚ್ಚಿನ ತಪ್ಪುಗಳಿಗೆ ಆಸ್ಪದ ನೀಡಿದ ಪ್ರದರ್ಶನ ನೀಡುತ್ತಿದೆ. ಜೊತೆ ಸಂಘಟಿತ ಪ್ರದರ್ಶನದ ಮೂಲಕ ಸತತ 2 ಗೆಲುವು ದಾಖಲಿಸಿದೆ. ಇಂಜುರಿಯಾಗಿರುವ ಆರ್ ಅಶ್ವಿನ್  ಅಭ್ಯಾಸ ಆರಂಭಿಸಿದ್ದಾರೆ. ಆದರೆ ಇಂದಿನ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆ ಕಡಿಮೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಶಬ್ ಪಂತ್, ಶಿಮ್ರೊನ್ ಹೆಟ್ಮೆಯರ್, ಮಾರ್ಕಸ್ ಸ್ಟೊಯ್ನಿಸ್, ಆಕ್ಸರ್ ಪಟೆಲ್, ಕಾಗಿಸೋ ರಬಾಡಾ, ಅನ್ರಿಚ್ ನೊರ್ಜೆ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ