Asianet Suvarna News Asianet Suvarna News

IPL ಟೂರ್ನಿಗೆ ತಯಾರಿ ಆರಂಭಿಸಿದ 8 ತಂಡಕ್ಕೆ ಶಾಕ್, BCCI ವಿರುದ್ದ ಅಸಮಾಧಾನ!

ಐಪಿಎಲ್ ಟೂರ್ನಿಗೆ  ಭರ್ಜರಿ ತಯಾರಿ ಆರಂಭಿಸಿದ 8 ಫ್ರಾಂಚೈಸಿಗಳಿಗೆ ಬಿಸಿಸಿಐ ಸದ್ದಿಲ್ಲದೆ ಶಾಕ್ ನೀಡಿದೆ. ಟೂರ್ನಿಗೆ ಕೆಲ ದಿನಗಳು ಮಾತ್ರ ಇರುವಾಗ ಬಿಸಿಸಿಐ ಶಾಕ್, ತಂಡಗಳ ಅಸಮಧಾನಕ್ಕೆ ಕಾರಣವಾಗಿದೆ. ಇದೀಗ ಬಿಸಿಸಿಐ ಅಧಿಕಾರಿಗಳ ಜೊತೆ ಮಾತುಕತೆಗೆ ಫ್ರಾಂಚೈಸಿಗಳು ಮುಂದಾಗಿದ್ದಾರೆ.

Bcci set to reduce IPL 2020 prize money
Author
Bengaluru, First Published Mar 4, 2020, 3:37 PM IST

ಮುಂಬೈ(ಫೆ.04): ದೇಶದ ಆರ್ಥಿಕತೆ ಹಿಂಜರಿತ ಇದೀಗ ಬಿಸಿಸಿಐಗೂ ತಟ್ಟಿದಂತೆ ಕಾಣುತ್ತಿದೆ. ಮಿಲಿಯನ್ ಡಾಲರ್ ಟೂರ್ನಿ ಎಂದೆ ಹೆಸರುವಾಸಿಯಾಗಿರುವ ಐಪಿಎಲ್ ಟೂರ್ನಿಗೆ ಬಿಸಿಸಿಐ ಕೋಟಿ ಕೋಟಿ  ಖರ್ಚು ಮಾಡುತ್ತದೆ. ಜೊತೆಗೆ ಡಬಲ್ ಹಣ ಬಾಚಿಕೊಳ್ಳುತ್ತದೆ. ಕಳೆದ 12 ಆವೃತ್ತಿಗಳಲ್ಲಿ ಯಾವುದೇ ಚಿಂತೆ ಇಲ್ಲದೆ ಖರ್ಚು ಮಾಡಿದ್ದ ಬಿಸಿಸಿಐ ಇದೀಗ 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಒಂದೊಂದು ರೂಪಾಯಿ ಲೆಕ್ಕವಿಡುತ್ತಿದೆ.

ಇದನ್ನೂ ಓದಿ: RCB ಈಗ ಸಂಪೂರ್ಣ ಕನ್ನಡಮಯ; IPLನಲ್ಲಿ ಕೊಹ್ಲಿ ಸೈನ್ಯದ ಹೊಸ ಅಧ್ಯಾಯ!.

ದುಂದುವೆಚ್ಚದ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿದ ಬಿಸಿಸಿಐ, ಕೋಟಿ ಕೋಟಿ ರೂಪಾಯಿಯನ್ನು ಉಳಿಸಿಕೊಂಡಿತು. ಇದೀಗ ಟೂರ್ನಿಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ, ಐಪಿಎಲ್ ಪ್ರಶಸ್ತಿ ಮೊತ್ತವನ್ನು ಅರ್ಧಕ್ಕೆ ಕಡಿತಗೊಳಿಸಲು ಮುಂದಾಗಿದೆ. ಈ ಕುರಿತು ಬಿಸಿಸಿಐ ಎಲ್ಲಾ ತಂಡಗಳಿಗೆ ಸರ್ಕ್ಯೂಲರ್ ಕಳುಹಿಸಿದೆ.

ಇದನ್ನೂ ಓದಿ:  IPL ಆರಂಭಕ್ಕೂ ಮುನ್ನ ಕೃಷಿಕನಾಗಿ ಬದಲಾದ MS ಧೋನಿ.

ಬಿಸಿಸಿಐ ನೂತನ ಯೋಜನೆ ಪ್ರಕಾರ 2020ರ ಐಪಿಎಲ್ ಟ್ರೋಫಿ ಗೆಲ್ಲುವ ತಂಡ 10 ಕೋಟಿ ರೂಪಾಯಿ ಪ್ರಶಸ್ತಿ ಪಡೆಯಲಿದೆ. ರನ್ನರ್ ಅಪ್ ಅಥವಾ ಫೈನಲ್ ಪಂದ್ಯದಲ್ಲಿ ಸೋತ ತಂಡ 6.25 ಕೋಟಿ ರೂಪಾಯಿ ಮೊತ್ತ ಬಹುಮಾನವಾಗಿ ಪಡೆಯಲಿದೆ. 3 ಮತ್ತು 4ನೇ ಸ್ಥಾನ ಪಡೆಯುವ ತಂಡಕ್ಕೆ 4.75 ಕೋಟಿ ರೂಪಾಯಿ ಪಡೆಯಲಿದೆ

2019ರ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗದ್ದ ತಂಡಕ್ಕೆ 20 ಕೋಟಿ, ರನ್ನರ್ ಅಪ್ ತಂಡಕ್ಕೆ12.05 ಕೋಟಿ, 3 ಮತ್ತು 4ನೇ ಸ್ಥಾನ ಅಲಂಕರಿಸಿದ ತಂಡಕ್ಕೆ 8.75 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತ ಪಡೆದಿತ್ತು. 

RCB to CSK ಐಪಿಎಲ್ ಟೂರ್ನಿಯ 8 ತಂಡದ ಕಂಪ್ಲೀಟ್ ಡೀಟೇಲ್ಸ್!

ಕ್ರೀಡಾಂಗಣಕ್ಕಾಗಿ ಪ್ರತಿ ಪಂದ್ಯಕ್ಕೆ ಫ್ರಾಂಚೈಸಿ ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೀಡುವ ಹಣ ಕೂಡ ಹೆಚ್ಚು ಮಾಡಲಾಗಿದೆ. 2019ರಲ್ಲಿ ಪ್ರತಿ ಪಂದ್ಯ ಆಯೋಜಿಸಲು ಫ್ರಾಂಚೈಸಿ 30 ಲಕ್ಷ ರೂಪಾಯಿಯನ್ನು ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೀಡಬೇಕಿತ್ತು. ಇದೀಗ ಈ ಮೊತ್ತವನ್ನು 50 ಲಕ್ಷ ರೂಪಾಯಿಗೆ ಏರಿಸಲಾಗಿದೆ. 

ಬಿಸಿಸಿಐ ಅಂತಿಮ ಹಂತದಲ್ಲಿ ತೆಗೆದುಕೊಂಡ ನಿರ್ಧಾರಗಳು ಫ್ರಾಂಚೈಸಿಗಳ ಕಣ್ಣು ಕಂಪಾಗಿಸಿದೆ. ಪ್ರಶಸ್ತಿ ಮೊತ್ತ ಕಡಿತ ಹಾಗೂ ಪಂದ್ಯ ಆಯೋಜನೆ ಮೊತ್ತ ಹೆಚ್ಚಳ ಕುರಿತು ಎಲ್ಲಾ ಫ್ರಾಂಚೈಸಿಗಳು ಬಿಸಿಸಿಐ ಅಧಿಕಾರಿಗಳ ಜೊತೆ ಅಸಮಾಧಾನ ಹೊರಹಾಕಿದೆ. 

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios