ಬೆಂಗಳೂರು(ಮಾ.01): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತ್ತೀಚೆಗೆ ಹೊಸ ಲೋಗೋ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅಚ್ಚರಿ ನೀಡಿತ್ತು. ಇದೀಗ ಟೂರ್ನಿ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. RCB ತಂಡ ಈಗ ಕನ್ನಡಮಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ರಾರಾಜಿಸುತ್ತಿದೆ.

ಇದನ್ನೂ ಓದಿ: IPL 2020: ಇಲ್ಲಿದೆ RCB ತವರಿನ ಪಂದ್ಯದ ವೇಳಾಪಟ್ಟಿ!

ಈ ಹಿಂದಿನ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಬಾರಿಯೂ ಕನ್ನಡ ಬಳಸಿಲ್ಲ. ಇದೇ ಮೊದಲ ಬಾರಿಗೆ RCB ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಸಿದೆ. ಕನ್ನಡ ಸಿನಿಮಾದ ಜನಪ್ರಿಯ ಹಾಡುಗಳ ಸಾಲು ಬಳಸಿ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದೆ ಅನ್ನೋ ಸಂದೇಶ ರವಾನಿಸಿದೆ.

 

ಇದನ್ನೂ ಓದಿ: IPL ಫ್ಲ್ಯಾಶ್‌ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!

13ನೇ ಆವೃತ್ತಿ ಐಪಿಎಲ್ ಟೂರ್ನಿ RCB ತಂಡಕ್ಕೆ ಮಹತ್ವದ್ದಾಗಿದೆ. ಇಷ್ಟೇ ಅಲ್ಲ ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಇದೀಗ ಕನ್ನಡಲ್ಲಿನ ಟ್ವೀಟ್, ಹರಾಜಿನಲ್ಲಿ ಹೊಸ ಆಟಗಾರರ ಆಯ್ಕೆ, ಹೊಸ ಕೋಚ್ ಹಾಗೂ ನಿರ್ದೇಶಕರು ಸೇರಿದಂತೆ ಹಲವು ಹೊಸತನಗಳಿವೆ. ಕನ್ನಡ ಸಿನಿಮಾ ಹಾಡೂ, ಗಾದೆ ಮಾತು, ಕನ್ನಡ ಸಿನಿಮಾ ಡೈಲಾಗ್ RCB ತಂಡಕ್ಕೆ ಹೊಸದು. ಆದರೆ ಈ ಪ್ರಯೋಗ ಕನ್ನಡಿಗರಿಗೆ ಹೊಸದಲ್ಲ.

ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು FC ಫುಟ್ಬಾಲ್ ತಂಡ ಈ ಪ್ರಯೋಗಗಳನ್ನು ಹಲವು ವರ್ಷಗಳಿಂದ ಮಾಡುತ್ತಿದೆ. BFC ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್ ಸೇರಿದಂತೆ ಕನ್ನಡ ಚಿತ್ರ ರಂಗದ ನಟರ ಡೈಲಾಗ್, ಹಾಡು ಸೇರಿದಂತೆ ಹಲವು ಗಾದೆ ಮಾತುಗಳ ಮೂಲಕ ಟ್ವೀಟ್ ಮಾಡಿ ಮನೆಮಾತಾಗಿದೆ. ಇದೀಗ ವಿರಾಟ್ ಕೊಹ್ಲಿ ಸೈನ್ಯ  ಬೆಂಗಳೂರು   FC ಫುಟ್ಬಾಲ್ ತಂಡವನ್ನು ಅನುಸರಿಸಿದೆ.