IPL ಆರಂಭಕ್ಕೂ ಮುನ್ನ ಕೃಷಿಕನಾಗಿ ಬದಲಾದ MS ಧೋನಿ
ಯಶಸ್ವಿ ನಾಯಕ, ಚಾಣಾಕ್ಷ ವಿಕೆಟ್‌ಕೀಪರ್, ಗ್ರೇಟ್ ಮ್ಯಾಚ್ ಫಿನೀಷರ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಕೃಷಿಕನಾಗಿ ಬದಲಾಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ
ರಾಂಚಿ(ಫೆ.28): ಭಾರತ ಕ್ರಿಕೆಟ್ ತಂಡದ ಮಾಜಿ ಎಂ.ಎಸ್.ಧೋನಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವುದರಲ್ಲಿ ಎತ್ತಿದ ಕೈ. ಕ್ರಿಕೆಟ್‌ನಿಂದ ದೀರ್ಘಾವಧಿ ವಿಶ್ರಾಂತಿ ತೆಗೆದುಕೊಂಡಿರುವ ಧೋನಿ, ಸದ್ಯ ತಮ್ಮ ತವರೂರಲ್ಲಿ ಸಾವಯವ ಕೃಷಿ ಆರಂಭಿಸಿದ್ದಾರೆ.
ಧೋನಿ IPL ಆಡ್ತಾರಾ? ಜಾಹೀರಾತಿಗೆ ತಿರುಗೇಟು ನೀಡಿದ CSK!
ಈ ಬಗ್ಗೆ ಸ್ವತಃ ಧೋನಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋವೊಂದರ ಮೂಲಕ ಮಾಹಿತಿ ನೀಡಿದ್ದಾರೆ. ‘ಕಲ್ಲಂಗಡಿ ಹಣ್ಣಿನ ಮೂಲಕ ಸಾವಯವ ಕೃಷಿ ಆರಂಭಿಸುತ್ತಿದ್ದೇನೆ. ಮುಂದಿನ 20 ದಿನಗಳಲ್ಲಿ ಪಪ್ಪಾಯ ಗಿಡಗಳನ್ನು ನೆಡಲಿದ್ದು, ಹೊಸ ಪ್ರಯತ್ನ ನನ್ನನ್ನು ಉತ್ಸುಕಗೊಳಿಸಿದೆ’ ಎಂದು ಧೋನಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಂಚಿಯಲ್ಲಿ ಹತ್ತಾರು ಎಕರೆ ಭೂಮಿ ಖರೀದಿಸಿರುವ ಧೋನಿ, ದೊಡ್ಡ ಮಟ್ಟದಲ್ಲಿ ವಾಣಿಜ್ಯ ಕೃಷಿ ನಡೆಸಲು ಯೋಜನೆ ರೂಪಿಸಿಕೊಂಡಿದ್ದಾರೆ ಎಂದು ಅವರ ಆಪ್ತ ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಧೋನಿ ಮಾ.1ರಿಂದ ಐಪಿಎಲ್ ಟೂರ್ನಿಗಾಗಿ ಅಭ್ಯಾಸ ನಡೆಸಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
2021ರ ಐಪಿಎಲ್‌ನಲ್ಲೂ ಧೋನಿ ನಮ್ಮ ತಂಡದಲ್ಲಿರುತ್ತಾರೆ ಎಂದ ಶ್ರೀನಿ..!
ಧೋನಿಯ ಐಪಿಎಲ್ ಪ್ರದರ್ಶನವನ್ನು ಪರಿಗಣಿಸಿ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸಲಿದ್ದೇವೆ ಎಂದು ಭಾರತ ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಕೆಲ ತಿಂಗಳುಗಳ ಹಿಂದೆ ಹೇಳಿದ್ದರು. ಧೋನಿ ಅಂ.ರಾ.ಕ್ರಿಕೆಟ್‌ಗೆ ವಾಪಸಾಗುತ್ತಾರೆಯೇ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲಿವೆ.