ಕೊರೋನಾ ವೈರಸ್‌ನಿಂದ IPL 2020 ರದ್ದಾಗುತ್ತಾ? ಮೌನ ಮುರಿದ ಗಂಗೂಲಿ!

ಕೊರೋನಾ ವೈರಸ್ ಆತಂಕದಿಂದ ಹಲವು ಕ್ರೀಡೆ, ಟೂರ್ನಿಗಳು ರದ್ದಾಗುತ್ತಿದೆ. ಮುಂಬರುವ ಐಪಿಎಲ್ ಟೂರ್ನಿಗೂ ಕೊರೋನಾ ವೈರಸ್ ಆತಂಕ ತಟ್ಟಿದೆ. ಈ ಬಾರಿಯ ಐಪಿಎಲ್ ಟೂರ್ನಿ ಮುಂದೂಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೌನ ಮುರಿದಿದ್ದಾರೆ. 

BCCI President Sourav Ganguly confirms IPL 2020 will go ahead as scheduled

ಮುಂಬೈ(ಮಾ.06): ಕೊರೋನಾ ವೈರಸ್ ಇದೀಗ ಭಾರತೀಯರ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ 28ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಪ್ರಮುಖ ಕಾರ್ಯಕ್ರಮಗಳು, ಸಭೆಗಳು ರದ್ದಾಗುತ್ತಿದೆ. ಇದೀಗ ಈ ಆತಂಕ ಐಪಿಎಲ್ ಟೂರ್ನಿಗೂ ತಟ್ಟಿದೆ. ಹಲವು ವಿದೇಶಿ ಕ್ರಿಕೆಟಿಗರು ಭಾರತ ಪ್ರವಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಮಾತುಗಳ ಬೆನ್ನಲ್ಲೇ ಐಪಿಎಲ್ ಟೂರ್ನಿ ಕೂಡ ರದ್ದಾಗಲಿದೆ ಅನ್ನು ಅನುಮಾನ ಕಾಡತೊಡಗಿದೆ.

ಇದನ್ನೂ ಓದಿ: IPLಗೆ ಕೊರೋನಾ ವೈರಸ್ ಭಯ; ಪ್ರತಿಕ್ರಿಯೆ ನೀಡಿದ ಮುಖ್ಯಸ್ಥ!

ಐಪಿಎಲ್ ಟೂರ್ನಿಗೆ ಕೊರೋನಾ ವೈರಸ್ ಆತಂಕ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. 2020ರ ಐಪಿಎಲ್ ಟೂರ್ನಿ ನಿಗದಿಯಾಗಿರುವ ವೇಳಾಪಟ್ಟಿ ಪ್ರಕಾರ ನಡೆಯಲಿದೆ. ಕೊರೋನಾ ವೈರಸ್ ಹರಡದಂತೆ ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: IPL ಟೂರ್ನಿಗೆ ತಯಾರಿ ಆರಂಭಿಸಿದ 8 ತಂಡಕ್ಕೆ ಶಾಕ್, BCCI ವಿರುದ್ದ ಅಸಮಾಧಾನ!

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಗಳ ಅನುಸಾರ ಐಪಿಎಲ್ ಟೂರ್ನಿ ನಡೆಯಲಿದೆ. ಬೇಕಾದ ಕ್ರಮಗಳನ್ನು ಆರೋಗ್ಯ ಇಲಾಖೆ ಜೊತೆ ಕೈಗೊಂಡಿದ್ದೇವೆ. ಅಭಿಮಾನಿಗಳ ಜೊತೆ ಕೈಕುಲುಕದಂತೆ, ಆಟಗಾರರು ತಂಗುವ ಹೊಟೆಲ್‌, ಕ್ರೀಡಾಂಗಣದಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಗಂಗೂಲಿ ಹೇಳಿದ್ದಾರೆ. 

ಕೊರೋನಾ ವೈರಸ್ ಆತಂಕದಿಂದ ಮಾರ್ಚ್ 3 ರಂದು ದುಬೈನಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಸಭೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಿಂದೇಟು ಹಾಕಿದ್ದರು. ಇದೀಗ ಐಪಿಎಲ್ ಟೂರ್ನಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಬಿಸಿಸಿಐ ಕೇಂದ್ರ ಆರೋಗ್ಯ ಇಲಾಖೆಯಿಂದ ಸಹಾಯ ಕೇಳಿದೆ. 
 

Latest Videos
Follow Us:
Download App:
  • android
  • ios