ಮುಂಬೈ(ನ.12): ಕೊರೋನಾ ವೈರಸ್ ನಡುವೆಯೂ ಈ ಬಾರಿಯ ಐಪಿಎಲ್ ಟೂರ್ನಿ ಯಶಸ್ವಿಗೊಂಡಿದೆ. ಪ್ರೇಕ್ಷಕರಿಗೆ ಪ್ರವೇಶ ನಿರಾಕರಣೆ, ಭಾರತ ಬಿಟ್ಟು ದುಬೈನಲ್ಲಿ ಟೂರ್ನಿ ಆಯೋಜನೆ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿ ಐಪಿಎಲ್ ಟೂರ್ನಿ ಆಯೋಜಿಸಲಾಗಿತ್ತು. ಈ ಯಶಸ್ಸಿನ ಬೆನ್ನಲ್ಲೇ 2021ರ ಐಪಿಎಲ್ ಟೂರ್ನಿಗೆ ಬಿಸಿಸಿಐ ತಯಾರಿ ಆರಂಭಿಸಿದೆ. ಕೇವಲ ನಾಲ್ಕು ತಿಂಗಳ ಬಳಿಕ 14ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಈ ಸಹಿ ಸುದ್ದಿ ನಡುವೆ ಮತ್ತೊಂದು ಸಿಹಿ ಸುದ್ದಿ ಬಂದಿದೆ.

IPL 2020: ಪಡಿಕ್ಕಲ್ ಉದಯೋನ್ಮುಖ ಆಟಗಾರ, ಮತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್‌..?..

2021ರ ಐಪಿಎಲ್ ಟೂರ್ನಿಗೆ 8ರ ಬದಲು 9 ತಂಡಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ದೀಪಾವಳಿ ಹಬ್ಬದ ಬಳಿಕ ಬಿಸಿಸಿಐ 9ನೇ ತಂಡಕ್ಕೆ ಬಿಡ್ಡಿಂಗ್ ಕರೆಯಲು ಮುಂದಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ, ದೀಪಾವಳಿ ಹಬ್ಬದ ಬಳಿಕ ಬಿಸಿಸಿಐ ಫ್ರಾಂಚೈಸಿ ಬಿಡ್ಡಿಂಗ್ ಕರೆಯಲು ಮುಂದಾಗಿದೆ. 1 ಅಥವಾ 2 ತಂಡಕ್ಕೆ ಅವಕಾಶ ನೀಡವು ಸಾಧ್ಯತೆ ಎನ್ನಲಾಗುತ್ತಿದೆ.

5ನೇ ಬಾರಿ IPL ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್!

14ನೇ ಆವೃತ್ತಿ ಐಪಿಎಲ್ ಟೂರ್ನಿಗೆ  ಕೇವಲ 4 ತಿಂಗಳು ಮಾತ್ರ ಇದೆ. ಇದರ ನಡುವೆ ಹೊಸ ತಂಡ ಸೇರ್ಪಡೆ, ಆಟಗಾರರ ಹರಾಜು ಸೇರಿದಂತೆ ಹಲವು ಚಟುವಟಿಕೆ ನಡೆಸಬೇಕಾಗಿದೆ. ಕೊರೋನಾ ವೈರಸ್ ಕಾರಣ ಹಿಂದಿನಂತ ಚಟುವಟಿಕೆ ನಡೆಸಲು ಸಾಧ್ಯವಿಲ್ಲ . ಬಹುತೇಕ ಕಾರ್ಯಕ್ರಮಗಳು, ಬಿಡ್ಡಿಂಗ್, ಹರಾಜುಗಳು ಆನ್‌ಲೈನ್ ಮೂಲಕ ನಡೆಯಲಿದೆ. ಹೀಗಾಗಿ ಕಡಿಮೆ ಅವಧಿಯಲ್ಲಿ ಹೊಸ ಸೇರ್ಪಡೆ ಕಷ್ಟ  ಅನ್ನೋ ಮಾತುಗಳು ಕೇಳಿ ಬಂದಿದೆ.

ಐಪಿಎಲ್ ಫೈನಲ್ ಪಂದ್ಯಕ್ಕೆ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ಹಾಜರಾಗಿದ್ದರು. ಮೋಹನ್ ಲಾಲ್ ಕೇರಳ ತಂಡ ಖರೀದಿಸಲಿದ್ದಾರೆ ಅನ್ನೋ ಮಾತಗಳು ಕೇಳಿಬಂದಿದೆ. ಇತ್ತ ಬಿಸಿಸಿಐ ಕೂಡ ಬಡ್ಡಿಂಗ್ ಕರೆಯಲು ಆಸಕ್ತಿ ತೋರಿರುವುದು ಅಭಿಮಾನಿಗಳಿಗೆ ಡಬಲ್ ಧಮಾಕ ಸಿಗಲಿದೆ.