IPL 2020: ಪಡಿಕ್ಕಲ್ ಉದಯೋನ್ಮುಖ ಆಟಗಾರ, ಮತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್..?
ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 5ನೇ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ.ಕಳೆದೆರಡು ತಿಂಗಳು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದ ಐಪಿಎಲ್ ಟೂರ್ನಿಗೆ ಅಧಿಕೃತ ತೆರೆ ಬಿದ್ದಿದೆ. ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ ಆಟಗಾರರು ಹಾಗೂ ತಂಡಗಳು ಕೆಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಯಾವ ಆಟಗಾರರು ಯಾವೆಲ್ಲಾ ಪ್ರಶಸ್ತಿಗಳನ್ನು ಚಾಚಿಕೊಂಡರು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಐಪಿಎಲ್ 2020 ಉದಯೋನ್ಮುಖ ಆಟಗಾರ ಪ್ರಶಸ್ತಿ ದೇವದತ್ ಪಡಿಕ್ಕಲ್ ತೆಕ್ಕೆಗೆ

ಆರ್‌ಸಿಬಿ ತಂಡದ ಆರಂಭಿಕ ಬ್ಯಾಟ್ಸ್‌ಮನ್, ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಅಮೋಘ ಪ್ರದರ್ಶನದ ಕಾರಣದಿಂದಾಗಿ ಉದಯೋನ್ಮುಖ ಆಟಗಾರ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ.

20 ವರ್ಷದ ದೇವದತ್ ಪಡಿಕ್ಕಲ್ 5 ಅರ್ಧಶತಕ ಸಹಿತ 473 ರನ್ ಬಾರಿಸಿ ಟೂರ್ನಿಯಲ್ಲಿ ಗಮನ ಸೆಳೆದಿದ್ದರು. ಪಡಿಕ್ಕಲ್ ಪ್ರದರ್ಶನದ ನೆರವಿನಿಂದ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿತ್ತು

ವರ್ಷದ ಸೂಪರ್ ಸ್ಟ್ರೈಕರ್ ಬ್ಯಾಟ್ಸ್‌ಮನ್ ಪ್ರಶಸ್ತಿ ಕೀರಾನ್ ಪೊಲ್ಲಾರ್ಡ್ ಪಾಲು

ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಸೂಪರ್ ಸ್ಟ್ರೈಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೊಲ್ಲಾರ್ಡ್ 191.42ರ ಸ್ಟ್ರೈಕ್‌ರೇಟ್‌ನಲ್ಲಿ 53.60 ಬ್ಯಾಟಿಂಗ್ ಸರಾಸರಿಯಲ್ಲಿ ಪೊಲ್ಲಾರ್ಡ್ 263 ರನ್ ಚಚ್ಚಿದ್ದರು.

13ನೇ ಆವೃತ್ತಿಯ ಟೂರ್ನಿಯಲ್ಲಿ ಪೊಲ್ಲಾರ್ಡ್ ಕೇವಲ ಒಂದೇ ಅರ್ಧಶತಕ ಬಾರಿಸಿದ್ದರೂ, ಡೆತ್ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಪಂದ್ಯ ಮುಂಬೈ ಪರ ವಾಲುವಂತೆ ನೋಡಿಕೊಂಡಿದ್ದರು.

ಆರೆಂಜ್ ಕ್ಯಾಪ್ ಒಡೆಯ ಕೆ.ಎಲ್ ರಾಹುಲ್

ಆರೆಂಜ್ ಕ್ಯಾಪ್ ಒಡೆಯ ಕೆ.ಎಲ್ ರಾಹುಲ್

ಟೂರ್ನಿಯ ಆರಂಭದಿಂದಲೇ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರುವುದರ ಮೂಲಕ ಗಮನ ಸೆಳೆದ ಕೆ.ಎಲ್. ರಾಹುಲ್ ಕೊನೆಗೂ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ರಾಹುಲ್ ಒಂದು ಶತಕ ಹಾಗೂ 5 ಅರ್ಧಶತಕ ಸಹಿತ 670 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು.

ಕಗಿಸೋ ರಬಾಡಗೆ ಒಲಿದ ಪರ್ಪಲ್ ಕ್ಯಾಪ್ ಕಿರೀಟ

ಕಗಿಸೋ ರಬಾಡಗೆ ಒಲಿದ ಪರ್ಪಲ್ ಕ್ಯಾಪ್ ಕಿರೀಟ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರಕ ವೇಗಿ ಕಗಿಸೋ ರಬಾಡ ಟೂರ್ನಿಯಲ್ಲಿ 30 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದ ರಬಾಡ ಪ್ರದರ್ಶನ ಡೆಲ್ಲಿ ತಂಡವನ್ನು ಇದೇ ಮೊದಲ ಬಾರಿಗೆ ಫೈನಲ್‌ಗೇರುವಂತೆ ಮಾಡಿತು.

ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ ಜೋಫ್ರಾ ಆರ್ಚರ್

ಬೌಲಿಂಗ್, ಬ್ಯಾಟಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಅಸಾಧಾರಣ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ಸ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್ ಈ ಆವೃತ್ತಿಯ ಅತ್ಯಂತ ಮೌಲ್ಯಯುತ ಆಟಗಾರನಾಗಿ ಹೊರಹೊಮ್ಮಿದ್ದಾರೆ

ಆರ್ಚರ್ ಕೇವಲ 6.55ರ ಎಕಾನಮಿಯಲ್ಲಿ ರನ್ ನೀಡಿ 20 ವಿಕೆಟ್ ಕಬಳಿಸಿದ್ದರು, ಇನ್ನು ಬ್ಯಾಟಿಂಗ್‌ನಲ್ಲಿ 179.36ರ ಸರಾಸರಿಯಲ್ಲಿ 113 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು.

ಫೇರ್ ಪ್ಲೇ ಅವಾರ್ಡ್ ಗೆದ್ದ ಮುಂಬೈ ಇಂಡಿಯನ್ಸ್

ಫೇರ್ ಪ್ಲೇ ಅವಾರ್ಡ್ ಗೆದ್ದ ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟ್ರೋಫಿ ಗೆಲ್ಲುವುದರ ಜತೆಗೆ ಫೇರ್ ಪ್ಲೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕ್ರೀಡಾ ಸ್ಪೂರ್ತಿಯನ್ನು ಎತ್ತಿಹಿಡಿಯುವ ತಂಡಕ್ಕೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, 155 ಅಂಕ ಕಲೆಹಾಕಿದ ಮುಂಬೈ ಇಂಡಿಯನ್ಸ್ ಫೇರ್ ಪ್ಲೇ ಪ್ರಶಸ್ತಿ ಜಯಿಸಿತು.