ಮನೆ ಬಾಗಿಲಿಗೆ ಆಹಾರ ತಲುಪಿಸುವ ವೆಬ್‌ ತಾಣಗಳಾದ ಝೊಮ್ಯಾಟೋ ಮತ್ತು ಸ್ವಿಗ್ಗಿ ಇತ್ತೀಚೆಗೆ ಆರಂಭಿಸಿರುವ ತಮ್ಮದೇ ಪಾವತಿ ವ್ಯವಸ್ಥೆಯ ನೀತಿಯ ಬಗ್ಗೆ ‘ದ ನ್ಯಾಷನಲ್‌ ರೆಸ್ಟೋರೆಂಟ್‌’ ಅಸೋಸಿಯೇಷನ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನವದೆಹಲಿ (ಸೆ.03): ಮನೆ ಬಾಗಿಲಿಗೆ ಆಹಾರ ತಲುಪಿಸುವ ವೆಬ್‌ ತಾಣಗಳಾದ ಝೊಮ್ಯಾಟೋ ಮತ್ತು ಸ್ವಿಗ್ಗಿ ಇತ್ತೀಚೆಗೆ ಆರಂಭಿಸಿರುವ ತಮ್ಮದೇ ಪಾವತಿ ವ್ಯವಸ್ಥೆಯ ನೀತಿಯ ಬಗ್ಗೆ ‘ದ ನ್ಯಾಷನಲ್‌ ರೆಸ್ಟೋರೆಂಟ್‌’ ಅಸೋಸಿಯೇಷನ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಎರಡೂ ಕಂಪನಿಗಳ ಹೊಸ ನೀತಿಯ, ತಮ್ಮ ಲಾಭಕ್ಕಾಗಿ ರೆಸ್ಟೋರೆಂಟ್‌ಗಳಿಗೆ ಹೊರೆಹೊರಿಸುವ ಯತ್ನವಾಗಿದೆ ಎಂದು ತನ್ನ ಸದಸ್ಯರಿಗೆ ಅದು ಮಾಹಿತಿ ರವಾನಿಸಿದೆ.

‘ಇತ್ತೀಚೆಗೆ ಝೊಮ್ಯಾಟೋ ಪೇ ಮತ್ತು ಸ್ವಿಗ್ಗಿ ಡಿನ್ನರ್‌ ಎಂಬ ಹೊಸ ಪಾವತಿ ವ್ಯವಸ್ಥೆ ಆರಂಭಿಸಲಾಗಿದೆ. ಇದರ ಸದಸ್ಯತ್ವ ಪಡೆದುಕೊಂಡ ಗ್ರಾಹಕರಿಗೆ ರೆಸ್ಟೋರೆಂಟ್‌ ಮೂಲಕ ಖರೀದಿಸುವ ಆಹಾರಕ್ಕೆ ಶೇ.15- ಶೆ.40ರವರೆಗೆ ರಿಯಾಯಿತಿ ಸಿಗಲಿದೆ. ಈ ರಿಯಾಯಿತಿ ಹೊರೆಯನ್ನು ಸಂಪೂರ್ಣವಾಗಿ ರೆಸ್ಟೋರೆಂಟ್‌ಗಳೇ ಭರಿಸಬೇಕು. ಜೊತೆಗೆ ಝೊಮ್ಯಾಟೋ ಪೇ ಮತ್ತು ಸ್ವಿಗ್ಗಿ ಡಿನ್ನರ್‌ ಮೂಲಕ ಮಾಡಿದ ಪ್ರತಿ ಹಣ ಪಾವತಿಗೂ ಶೇ.4-ಶೇ.12ರಷ್ಟನ್ನು ಕಮೀಷನ್‌ ಅನ್ನು ಕಡ್ಡಾಯವಾಗಿ ಝೊಮ್ಯಾಟೋ ಮತ್ತು ಸ್ವಿಗ್ಗಿಗೆ ಪಾವತಿಸಬೇಕು. ಇತರೆ ಪಾವತಿ ಗೇಟ್‌ವೇಗಳಲ್ಲಿ ಇಂಥ ಶುಲ್ಕ ಶೇ.1- ಶೇ.1.5ರಷ್ಟಿದೆ. ಇದು ನಮ್ಮ ಸುಲಿಗೆ’ ಎಂದು ರೆಸ್ಟೋರೆಂಟ್‌ ಸಂಘ ಕಿಡಿಕಾರಿದೆ.

Hyderabad Biriyani Delivery: ವಿಮಾನದ ಮೂಲಕ ಬಿರಿಯಾನಿ ಡೆಲಿವರಿ ಮಾಡುತ್ತೆ ಜೊಮ್ಯಾಟೋ..!

ಇದರ ಜೊತೆಗೆ, ಯಾವುದೇ ಗ್ರಾಹಕ ಈ ಎರಡು ವೆಬ್‌ತಾಣಗಳ ಮೂಲಕ ರೆಸ್ಟೋರೆಂಟ್‌ ಅನ್ನು ಗುರುತಿಸದೇ ಇದ್ದರೂ, ಹಾಗೆಯೇ ರೆಸ್ಟೋರೆಂಟ್‌ಗೆ ತೆರಳಿ ಅಲ್ಲಿ ತಾವು ಖರೀದಿಸಿದ ಆಹಾರಕ್ಕೆ ಝೊಮ್ಯಾಟೋ ಪೇ ಅಥವಾ ಸ್ವಿಗ್ಗಿ ಡಿನ್ನರ್‌ ಮೂಲಕ ಹಣ ಪಾವತಿ ಮಾಡಿದರೂ ಅದಕ್ಕೂ ಶೇ.15-ಶೇ.40ರವರೆಗೆ ರಿಯಾಯಿತಿ ನೀಡಬೇಕು. ತನ್ನ ಗ್ರಾಹಕರಿಗೆ ಮಧ್ಯವರ್ತಿ ಕಂಪನಿಯೊಂದು ನೀಡಿದ ರಿಯಾಯಿತಿಗೆ, ರೆಸ್ಟೋರೆಂಟ್‌ಗಳೇಕೆ ಅವರಿಗೆ ಕಮೀಷನ್‌ ನೀಡಬೇಕು ಎಂಬುದು ನಮ್ಮ ಮೂಲಭೂತ ಪ್ರಶ್ನೆ. ಇದರಲ್ಲಿ ರೆಸ್ಟೋರೆಂಟ್‌ಗಳಿಗೆ ಯಾವುದೇ ಲಾಭ ಇಲ್ಲ ಎಂದು ಅಸೋಸಿಯೇಷನ್‌ ಹೊಸ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದೆ.

ಮಗು ಎತ್ತಿಕೊಂಡು ಝೋಮ್ಯಾಟೋ ಡೆಲಿವರಿ: ಪುಟ್ಟಮಗುವನ್ನು ತೋಳಿನಲ್ಲಿ ಎತ್ತಿಕೊಂಡು ಮಹಿಳೆಯೊಬ್ಬಳು ಝೊಮ್ಯಾಟೊ ಆಹಾರ ಡೆಲಿವರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನೆಟ್ಟಿಗರು ಮಹಿಳೆಗೆ ಸಹಾನುಭೂತಿ ಹಾಗೂ ಆಕೆಯ ಶ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್‌ ಆದ ವಿಡಿಯೋ ಕೆಳಗೆ ಕ್ಯಾಪ್ಶನ್‌ನಲ್ಲಿ ‘ನಾನು ಇದನ್ನು ನೋಡಿ ತುಂಬಾ ಸ್ಫೂರ್ತಿ ಪಡೆದುಕೊಂಡಿದ್ದೇನೆ. ಈ ಝೊಮ್ಯಾಟೊ ಡೆಲಿವರಿ ಮಾಡುವವಳು ತನ್ನ ಇಬ್ಬರು ಮಕ್ಕಳೊಂದಿಗೆ ಸೂರ್ಯನ ತಾಪದಲ್ಲಿ ಇಡೀ ದಿನವೂ ಕೆಲಸ ಮಾಡುತ್ತಾಳೆ. ವ್ಯಕ್ತಿಯೊಬ್ಬನಿಗೆ ಛಲವಿದ್ದರೆ ಆತನು ಏನನ್ನೂ ಮಾಡಬಲ್ಲ ಎಂಬುದನ್ನು ಇವರಿಂದ ಕಲಿಯಬಹುದು’ ಎಂದು ಬರೆಯಲಾಗಿದೆ. ಈ ವಿಡಿಯೋಕ್ಕೆ ಝೊಮ್ಯಾಟೋ ಕೂಡಾ ಸ್ಪಂದಿಸಿದ್ದು, ‘ಆರ್ಡರ್‌ ವಿವರವನ್ನು ಖಾಸಗಿ ಮೆಸೇಜುಗಳ ಮೂಲಕ ಕಳುಹಿಸಿ, ಇದರಿಂದ ನಮ್ಮ ಡೆಲಿವರಿ ಪಾಲುದಾರರನ್ನು ಹುಡುಕಲು ಹಾಗೂ ಅವರಿಗೆ ನೆರವಾಗಲು ಸಹಾಯವಾಗುತ್ತದೆ’ ಎಂದು ಹೇಳಿದೆ.

ಝೋಮ್ಯಾಟೋ ಬಾಯ್ ವೇಷದಲ್ಲಿ Chain Snatchers ಬಲೆಗೆ ಕೆಡವಿದ ಪೊಲೀಸರು

ವಿವಾದಿತ ಮಹಾಕಾಲ ಜಾಹೀರಾತು ಹಿಂದಕ್ಕೆ: ಹೃತಿಕ್‌ ರೋಷನ್‌ ಅಭಿನಯಿಸಿದ್ದ ಮಹಾಕಾಲ ಜಾಹೀರಾತು ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಜಾಹೀರಾತು ಹಿಂದಕ್ಕೆ ಪಡೆದಿರುವ ಝೊಮ್ಯಾಟೋ, ಈ ಕುರಿತು ಕ್ಷಮೆಯನ್ನೂ ಯಾಚಿಸಿದೆ. ಜೊತೆಗೆ ಈ ಕುರಿತು ಸ್ಪಷ್ಟನೆ ನೀಡಿರುವ ಕಂಪನಿ, ಮಹಾಕಾಲ ಉಜ್ಜಯನಿಯ ಪ್ರಮುಖ ಹೋಟೆಲ್‌. ಅದನ್ನು ಆಧಾರವಾಗಿಟ್ಟುಕೊಂಡು ನಾವು ಜಾಹೀರಾತು ಸಿದ್ಧಪಡಿಸಿದ್ದೆವು. ಯಾರ ಮನಸ್ಸಿಗೂ ನೋವು ತರುವ ಉದ್ದೇಶವಿರಲಿಲ್ಲ ಎಂದು ಹೇಳಿದೆ. ಈ ನಡುವೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರದೇಶದ ಸಚಿವ ನರೋತ್ತಮ ಮಿಶ್ರಾ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.