Asianet Suvarna News Asianet Suvarna News

ಜನರ ಸಮಸ್ಯೆ ತಿಳ್ಕೊಳ್ಳೋಕೆ ಪಾದಯಾತ್ರೆಗೆ ಬನ್ನಿ ಎಂದು ಶೂ ಕೊಡಿಸಿ ಕೆಸಿಆರ್‌ಗೆ ಸವಾಲು ಹಾಕಿದ ಜಗನ್‌ ಸೋದರಿ

ಗುರುವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ತನ್ನೊಂದಿಗೆ ಪಾದಯಾತ್ರೆಯಲ್ಲಿ ಭಾಗಿಯಾಗಲು ಸವಾಲು ಹಾಕಿದ್ದಾರೆ.

ysr telangana chief ys sharmila gifts shoes to cm k chandrashekar rao and dares him to walk with her ash
Author
First Published Feb 2, 2023, 7:10 PM IST

ಹೈದರಾಬಾದ್‌ (ಫೆಬ್ರವರಿ 2, 2023): ಯುವಜನ ಶ್ರಮಿಕ ರೈತ ತೆಲಂಗಾಣ ಪಕ್ಷದ (ವೈಎಸ್‌ಟಿಆರ್‌ಪಿ) ಮುಖ್ಯಸ್ಥೆ ವೈ. ಎಸ್‌. ಶರ್ಮಿಳಾ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಜನರ ಸಮಸ್ಯೆ ಅರಿತುಕೊಳ್ಳಲು ತನ್ನೊಂದಿಗೆ ಪಾದಯಾತ್ರೆಗೆ ಬನ್ನಿ ಅಂತ ಸವಾಲು ಹಾಕಿದ್ದಾರೆ. ಅಲ್ಲದೆ, ತೆಲಂಗಾಣ ಸಿಎಂಗೆ ಶೂ ಬಾಕ್ಸ್‌ ಉಡುಗೊರೆಯಾಗಿ ನೀಡುತ್ತಿರುವುದಾಗಿಯೂ ಹೇಳಿದ್ದಾರೆ. ತಾನು ಭಾಗಿಯಾಗಿರುವ ಪಾದಯಾತ್ರೆಯಲ್ಲಿ ಒಂದು ದಿನವಾದರೂ ಭಾಗಿಯಾಗಿ ಎಂದು ಸವಾಲು ಹಾಕಿದ ಶರ್ಮಿಳಾ, ಶೂ ಬಾಕ್ಸ್‌ ಅನ್ನು ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ್ದಾರೆ.

ಗುರುವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (Telangana Chief Minister K Chandrashekar Rao) ಅವರಿಗೆ ತನ್ನೊಂದಿಗೆ ಪಾದಯಾತ್ರೆಯಲ್ಲಿ (Padayatra) ಭಾಗಿಯಾಗಲು ಸವಾಲು ಹಾಕಿದ್ದಾರೆ. ಈ ವೇಳೆ, ಶೂ ಬಾಕ್ಸ್‌ (Shoe Box) ಅನ್ನೂ ಸಹ ರಾಜಕಾರಣಿ ತೋರಿಸಿದ್ದಾರೆ. ಇಂದು, ಕೆಸಿಆರ್ ಅವರಿಗೆ ಉಡುಗೊರೆಯಾಗಿ ನೀಡಿದ ಶೂ ಬಾಕ್ಸ್‌ನೊಂದಿಗೆ ನನ್ನೊಂದಿಗೆ ಪಾದಯಾತ್ರೆಯಲ್ಲಿ (ಮೆರವಣಿಗೆ) ನಡೆಯಲು ಸವಾಲು ಹಾಕುತ್ತಿದ್ದೇನೆ ಎಂದು ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ (YSRTP Leader) ವೈ.ಎಸ್. ಶರ್ಮಿಳಾ ಹೈದರಾಬಾದ್‌ನಲ್ಲಿ ಸುದ್ದಿಗಾರರಿಗೆ ಶೂಗಳನ್ನು ಪ್ರದರ್ಶಿಸುತ್ತಾ ಹೇಳಿದ್ದಾರೆ.

ಇದನ್ನು ಓದಿ: ತೆಲಂಗಾಣದಲ್ಲಿ ಜಗನ್‌ ಸೋದರಿಯಿಂದ ಹೊಸ ಪಕ್ಷ ಸ್ಥಾಪನೆ!

ಇದು (ಶೂ) ನಿಮ್ಮ ಕಾಲಿನ ಸೈಜ್‌ಗೆ ಅನುಗುಣವಾಗಿರುತ್ತದೆ ಮತ್ತು ಶೂಗಳು ಹೊಂದಿಕೆಯಾಗದಿದ್ದರೆ ಅವುಗಳನ್ನು ಬದಲಾಯಿಸಲು ಬಿಲ್ ಇದೆ ಎಂದೂ ವೈ.ಎಸ್‌. ಶರ್ಮಿಳಾ ವ್ಯಂಗ್ಯವಾಡಿದ್ದಾರೆ. ರಾಜ್ಯದ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ತನ್ನ ಹೇಳಿಕೆ ತಪ್ಪು ಎಂದು ಸಾಬೀತುಪಡಿಸಿದರೆ, ತಾನು ಶಾಶ್ವತವಾಗಿ ನಿವೃತ್ತಿ ಹೊಂದುತ್ತೇನೆ ಮತ್ತು ಮನೆಗೆ ಹೋಗುತ್ತೇನೆ ಎಂದು ವೈ.ಎಸ್‌. ಶರ್ಮಿಳಾ ಹೇಳಿದರು. ಇಲ್ಲದಿದ್ದರೆ, (ನಾನು ಹೇಳಿದ್ದು ನಿಜವಾದರೆ) ಕೆಸಿಆರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ತೆಲಂಗಾಣ ಜನರ ಕ್ಷಮೆಯಾಚಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಇದು ಸುವರ್ಣ ರಾಜ್ಯ ಎಂದು ಕೆಸಿಆರ್ ಹೇಳಿದಂತೆ, ತೆಲಂಗಾಣ ಜನರಿಗೆ ಯಾವುದೇ ಸಮಸ್ಯೆಗಳಿಲ್ಲದಿದ್ದರೆ, ಅವರು ಹೇಳಿದಂತೆ ನನ್ನ ಜನರು ಬಡತನದಿಂದ ತತ್ತರಿಸದಿದ್ದರೆ, ನಾನು ಕೆಸಿಆರ್ ಅವರ ಕ್ಷಮೆಯಾಚಿಸುತ್ತೇನೆ ಮತ್ತು ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಹಾಗೂ ಮನೆಗೆ ಹಿಂತಿರುಗುತ್ತೇನೆ ಎಂದೂ ವೈ.ಎಸ್‌. ಶರ್ಮಿಳಾ ಸುದ್ದಿಗಾರರಿಗೆ ತಿಳಿಸಿದರು.
ಆದರೆ ತೆಲಂಗಾಣದ ಜನರಿಗೆ ಸಮಸ್ಯೆಗಳಿದ್ದರೆ, ರೈತರು ಸಾಲದ ಸುಳಿಯಿಂದ ತತ್ತರಿಸುತ್ತಿದ್ದರೆ, ಮಹಿಳೆಯರು ಬಡತನದಿಂದ ತತ್ತರಿಸುತ್ತಿದ್ದರೆ, ನಿರುದ್ಯೋಗಿಗಳಿದ್ದರೆ, ಆತ್ಮಹತ್ಯೆಗಳಾಗಿದ್ದರೆ, ಅದೆಲ್ಲವೂ ನಿಜವಾಗಿದ್ದರೆ, ಕೆಸಿಆರ್ ರಾಜೀನಾಮೆ ನೀಡಬೇಕು. ಅವರು ತೆಲಂಗಾಣ ಜನರ ಕ್ಷಮೆಯಾಚಿಸಬೇಕು ಮತ್ತು ಅವರು ನೀಡಿದ ಭರವಸೆಯಂತೆ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂದೂ ವೈ.ಎಸ್‌. ಶರ್ಮಿಳಾ ಘೋಷಿಸಿದ್ದಾರೆ. 

ಇದನ್ನೂ ಓದಿ: ತೆಲಂಗಾಣದಲ್ಲಿ ಜಗನ್‌ ಸೋದರಿಯ ಹೊಸ ಪಕ್ಷ!

ವೈ.ಎಸ್‌. ಶರ್ಮಿಳಾ ಅವರು ನೆರೆಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ಸಹೋದರಿ. ಈ ವರ್ಷಾಂತ್ಯದಲ್ಲಿ ತೆಲಂಗಾಣ ಚುನಾವಣೆಗೆ ಮುನ್ನ ಅವರು ತಮ್ಮ "ಪ್ರಜಾಪ್ರಸ್ಥಾನಂ ಪಾದಯಾತ್ರೆ" ಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಕಳೆದ ವರ್ಷ ಆಕೆಯ ಬೆಂಗಾವಲು ವಾಹನದ ಮೇಲೆ ನಡೆದಿದ್ದ ದಾಳಿಯ ನಂತರ ಪಾದಯಾತ್ರೆಯನ್ನು ನಿಲ್ಲಿಸಲಾಗಿತ್ತು.

Follow Us:
Download App:
  • android
  • ios