ಡಿಜಿಟಲ್ ಅರೆಸ್ಟ್‌ನಿಂದ 3 ತಿಂಗಳಲ್ಲಿ ಭಾರತಕ್ಕೆ 120 ಕೋಟಿ ರೂ ನಷ್ಟ, ಪಾರಾಗಲು 3 ಸೂತ್ರ!

ಭಾರತದಲ್ಲಿ ಡಿಜಿಟಲ್ ಅರೆಸ್ಟ್‌ಗೆ ಸಿಲುಕಿ ಹಲವರು ಹಣ ಕಳೆದುಕೊಳ್ಳುತ್ತಿದ್ದಾರೆ. ಕೇವಲ 3 ತಿಂಗಳಲ್ಲಿ ಭಾರತ 120.3 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈ ಡಿಜಿಟಲ್ ಅರೆಸ್ಟ್‌ಗೆ ತುತ್ತಾಗುತ್ತಿರುವುದು ಅಮಾಯಕರಲ್ಲ, ಉತ್ತಮ ವಿದ್ಯಾಭ್ಯಾಸ, ಉದ್ಯೋಗದಲ್ಲಿರುವರೇ ಹೆಚ್ಚು ಸಿಲುಕುತ್ತಿದ್ದಾರೆ. ಡಿಜಿಟಲ್ ಅರೆಸ್ಟ್‌ನಿಂದ ಪಾರಾಗಲು ಪ್ರಧಾನಿ ಮೋದಿ 3 ಸೂತ್ರ ನೀಡಿದ್ದಾರೆ.

India lost rs 120 crore in 3 months due to digital arrest 3 steps for security ckm

ನವದೆಹಲಿ(ಅ.28) ಭಾರತದಲ್ಲಿ ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದೆ. ಲಕ್ಷ ಲಕ್ಷ ರೂಪಾಯಿ, ಕೋಟಿ ರೂಪಾಯಿ ಕಳೆದುಕೊಂಡ ಕಣ್ಣೀರ ಕತೆಗಳು, ವಿವಸ್ತ್ರಗೊಳಿಸಿ ವಿಚಾರಣೆ, ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ ಸೇರಿದಂತೆ ಹಲವು ಆತಂಕಕಾರಿ ಘಟನೆಗಳು ವರದಿಯಾಗುತ್ತಿದೆ. ಇದೀಗ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟ್ ನೀಡಿದ ವರದಿ ಹಲವರ ನಿದ್ದೆಗೆಡಿಸಿದೆ. ಕಾರಣ 2024ರ ಆರಂಭಿಕ 3 ತಿಂಗಳಲ್ಲಿ ಭಾರತ ಡಿಜಿಟಲ್ ಅರೆಸ್ಟ್‌ನಿಂದ 120.3 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 7.4 ಲಕ್ಷ ಸೈಬರ್ ಕ್ರೈಂ ದೂರುಗಳು ದಾಖಲಾಗಿದೆ. ಈ ಪೈಕಿ ಶೇಕಡಾ 46ರಷ್ಟು ದೂರುಗಳು ಡಿಜಿಟಲ್ ಅರೆಸ್ಟ್ ಕುರಿತಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಡಿಜಿಟಲ್ ಅರೆಸ್ಟ್‌ನಿಂದ ಪಾರಾಗಲು 3 ಸೂತ್ರ ಅನುಸರಿಸಲು ಮೋದಿ ಸಲಹೆ ನೀಡಿದ್ದಾರೆ.

ಸೈಬರ್ ರಿಪೋರ್ಟ್ ಪ್ರಕಾರ ಹೂಡಿಕೆ, ರೊಮ್ಯಾನ್ಸ್ ಡೇಟಿಂಗ್, ಟ್ರೇಡಿಂಗ್ ಸೇರಿದಂತೆ ಹಲವು ರೂಪದಲ್ಲಿ ವಂಚನೆ ನಡೆದಿದೆ. ಈ ವಂಚನೆ ಮೂಲ ಮಯನ್ಮಾರ್, ಲಾವೋಸ್, ಕಾಂಬೋಡಿಯಾ ಎಂದು ಸೈಬರ್ ಕ್ರೈಂ ವರದಿ ಹೇಳುತ್ತಿದೆ. ಆದರೆ ಭಾರತೀಯರನ್ನು ಟಾರ್ಗೆಟ್ ಮಾಡಿ ಡಿಜಿಟಲ್ ಅರೆಸ್ಟ್ ಮೂಲಕ ಮೋಸದ ಜಾಲಕ್ಕೆ ಸಿಲುಕಿಸಿ ಹಣ ವಂಚನೆ ಮಾಡಲಾಗುತ್ತಿದೆ.

ಡಿಜಿಟಲ್ ಅರೆಸ್ಟ್‌ಗೆ ಕಂಗಾಲಾಗಿ ಬಟ್ಟೆ ಬಿಚ್ಚಿದ ಯುವತಿ, ಕೈಯಲ್ಲಿದ್ದ 5 ಲಕ್ಷ ರೂ ಗುಳುಂ!

ಏನಿದು ಡಿಜಿಟಲ್ ಅರೆಸ್ಟ್?
ಹೆಸರೇ ಹೇಳುವಂತೆ ಇದು ಡಿಜಿಟಲ್ ಮೂಲಕ ಅರೆಸ್ಟ್ ಮಾಡುವ ಅಥವಾ ಮೋಸದ ಜಾಲಕ್ಕೆ ಸಿಲುಕಿಸುವ ವಂಚನೆ. ಆರಂಭದಲ್ಲಿ ಹೆಚ್ಚಾಗಿ ಪಾರ್ಸೆಲ್, ಕೊರಿಯರ್ ಕಂಪನಿಗಳ ಸೋಗಿನಲ್ಲಿ ಕರೆಯೊಂದು ಬರಲಿದೆ. ನಿಮ್ಮ ಹೆಸರಲ್ಲಿ ಯಾರೋ ಪಾರ್ಸೆಲ್ ಕಳುಹಿಸಿದ್ದಾರೆ. ಅಥವಾ ನಿಮ್ಮ ಹೆಸರಿನಿಂದ ಥಾಯ್ಲೆಂಡ್‌ಗೆ, ಮಲೇಷಿಯಾಗೆ ಪಾರ್ಲೆಸ್ ಕಳುಹಿಸಲಾಗಿದೆ. ಈ ಪಾರ್ಸೆಲ್‌ನಲ್ಲಿ ಮಾದಕ ವಸ್ತು, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಇನ್ನಿತರ ವಸ್ತುಗಳು ಇವೆ. ಡ್ರಗ್ಸ್ ಜಾಲ ನಿಮ್ಮ ಹೆಸರಿನಲ್ಲಿ ಈ ಕೃತ್ಯ ಮಾಡಿದೆ. ಈ ಕುರಿತು ನೀವು ದೂರು ದಾಖಲಿಸಿ ಅಥವಾ ನಿಮಗೆ  ನರ್ಕೋಟಿಕ್ಸ್ ವಿಭಾಗ ಅಧಿಕಾರಿಗಳು ಕರೆ ಮಾಡಲಿದ್ದಾರೆ ಅನ್ನೋ ಸಂದೇಶ ನೀಡುತ್ತಾರೆ. ಬಳಿಕ ಕೋರಿಯರ್ ಕಂಪನಿ ನೀಡಿದ ನಂಬರ್‌ಗೆ ವ್ಯಾಟ್ಸ್ಆ್ಯಪ್ ಕರೆ ಮಾಡುವಂತೆ ಮಾಡುತ್ತಾರೆ, ಅಥವಾ ಅವರೇ ಮಾಡುತ್ತಾರೆ. ಪೊಲೀಸರು, ಸಿಸಿಬಿ, ಸೇರಿದಂತೆ ಇತರ ಅಧಿಕಾರಿಗಳ ವೇಷ ಧರಿಸಿ ವೀಡಿಯೋ ಕಾಲ್ ಮೂಲಕ ವಿಚಾರಣೆ ನಡೆಸುತ್ತಾರೆ. ಆಧಾರ್‌ನಲ್ಲಿರುವ ಅಥವಾ ಸರ್ಕಾರಿ ದಾಖಳೆಯಲ್ಲಿರುವ ಗುರುತು ಪತ್ತೆಗೆ ವಿವಸ್ತ್ರಗೊಳಿಸುತ್ತಾರೆ.  ಈ ಪ್ರಕರಣದಿಂದ ಪಾರಾಗಲು ಇಂತಿಷ್ಟು ಹಣ ಕೇಳುತ್ತಾರೆ. ಈ ಮೋಸದ ಜಾಲಕ್ಕೆ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದರಾಗುತ್ತದೆ. ಇದು ಒಂದು ಉದಾಹರಣೆಷ್ಟೇ, ಈ ರೀತಿ ಆರ್‌ಬಿಐ, ಆರೋಗ್ಯ ಅಧಿಕಾರಿಗಳು ಸೇರಿದಂತೆ ಹಲವರ ಸೋಗಿನಲ್ಲಿ ಕರೆಗಳು ಬರಬಹುದು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ಕಿ ಬಾತ್‌ನಲ್ಲಿ ಡಿಜಿಟಲ್ ಅರೆಸ್ಟ್ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಭಾರತದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣ ಹೆಚ್ಚಾಗುತ್ತಿದೆ. ಫೋನ್ ಮೂಲಕ ಹಣ ವಂಚಿಸುವ ಜಾಲ ಸಕ್ರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ವೇಳೆ ಮೂರು ಸೂತ್ರ ಅನುಸರಿಸಿ, ಅದು ನಿಲ್ಲಿಸಿ, ಯೋಚಿಸಿ ಹಾಗೂ ಪ್ರವರ್ತಿಸಿ ಎಂದಿದ್ದಾರೆ.

ಮೊದಲ ಸೂತ್ರ ಸ್ಟಾಪ್(ನಿಲ್ಲಸಿ), ಈ ಸೂತ್ರದ ಪ್ರಕಾರ ಕರೆ ಬಂದಾಗ ಸ್ಟಾಪ್ ಮಾಡಿ. ಅಂದರೆ ಈ ರೀತಿಯ ಕರೆಗಳಿಗೆ ಉತ್ತರಿಸಬೇಡಿ. ಒಂದು ವೇಳೆ ಉತ್ತರಿಸಿದರೆ ತಾಳ್ಮೆ ಕಳೆದುಕೊಳ್ಳಬೇಡಿ. ಯಾವುದೇ ರೀತಿ ನಿಮ್ಮ ವೈಯುಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ. ಸ್ಕ್ರೀನ್‌ಶಾಟ್ ಅಥವಾ ರೆಕಾರ್ಡ್ ಮಾಡಿಕೊಳ್ಳಿ. ಕರೆ ಸ್ವೀಕರಿಸಿ ಅವರು ಹೇಳುವ ಯಾವುದೇ ಮೋಸದ ಜಾಲಕ್ಕೆ ಬೀಳಬೇಡಿ.

ಯೋಚಿಸಿ; ಎರಡನೇ ಸೂತ್ರದ ಪ್ರಕಾರ ಕರೆ ಸ್ವೀಕರಿಸಿ ಮಾತಾಡುವಾಗ ಯೋಚಿಸಿ. ಸರ್ಕಾರದ ಯಾವುದೇ ಎಜೆನ್ಸಿ, ಅದು ಪೊಲೀಸ್, ಅಧಿಕಾರಿಗಳು, ಸಿಬಿಐ, ಎನ್ಐಎ, ನರ್ಕೋಟಿಕ್ಸ್, ಇತರ ಇಲಾಖೆ ಅಧಿಕಾರಿಗಳು ಸೇರಿದಂತೆ ಯಾವುದೇ ಸರ್ಕಾದ ಎಜೆನ್ಸಿಗಳು ಫೋನ್ ಮೂಲಕ ವಿಚಾರಣೆ ಮಾಡುವುದಿಲ್ಲ. ಫೋನ್ ಮೂಲಕ ವಿಡಿಯೋ ಕಾಲ್ ಮೂಲಕ ವಿಚಾರಣೆ, ಹಣ ಕೇಳುವುದು, ಬೆದರಿಕೆ ಹಾಕುವ ಪ್ರಯತ್ನ ಮಾಡುವುದಿಲ್ಲ. ಹೀಗಾಗಿ ಈ ರೀತಿ ಫೋನ್ ಮೂಲಕ ಯಾರಾದರು ಮಾಡಿದರೆ ಅದು ವಂಚನೆ ಜಾಲ ಅನ್ನೋದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಹೀಗಾಗಿ ನೀವು ಪ್ರತಿಕ್ರಿಯಿಸುವ ಮೊದಲು, ತಾಳ್ಮೆ ಕಳೆದುಕೊಳ್ಳುವ ಮೊದಲು ಯೋಜಿಸಿ ಎಂದು ಮೋದಿ ಸೂಚಿಸಿದ್ದಾರೆ. 

ಬೆಂಗಳೂರು: ಡಿಜಿಟಲ್ ಅರೆಸ್ಟ್ ಮಾಡಿ ಸುಲಿಗೆ ಮಾಡ್ತಿದ್ದ ಗ್ಯಾಂಗ್‌ ಅಂದರ್‌..!

ಮೂರನೇ ಸೂತ್ರ ಪ್ರವರ್ತಿಸಿ. ಈ ರೀತಿ ಕರೆ ಬಂದ ತಕ್ಷಣ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ದೂರು ನೀಡಿ. ಅಥವಾ cybercrime.gov.in ವೆಬ್‌ಸೈಟ್ ಮೂಲಕ ದೂರು ನೀಡಿ. ವಿಚಲಿತರಾಗಬೇಡಿ, ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳಬೇಡಿ. ಸೈಬರ್ ಕ್ರೈಂ ವಿಭಾಗ ಸುರಕ್ಷತೆ ನೀಡಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios