ಕೆಲವರು ಏನೇನೋ ಸಾಹಸ ಮಾಡಲು ಹೋಗಿ ಜೀವಕ್ಕೆ ಕಂಟಕ ತಂದು ಕೊಳ್ಳುತ್ತಾರೆ. ಯುವಕನೋರ್ವ ಕಸ ಸಾಗಿಸುವ ವಾಹನದ ಮೇಲೆ ಫುಶ್ ಅಪ್ ಜೊತೆ ಏನೇನೋ ಸರ್ಕಸ್ ಮಾಡಲು ಹೋಗಿ ಲಾರಿಯಿಂದ ಕೆಳೆಗೆ ಬಿದ್ದು ಸೊಂಟ ಗಂಭೀರ ಗಾಯಗೊಂಡಿದ್ದಾನೆ.
ಕೆಲವರು ಏನೇನೋ ಸಾಹಸ ಮಾಡಲು ಹೋಗಿ ಜೀವಕ್ಕೆ ಕಂಟಕ ತಂದು ಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ನಟ ದಿಗಂತ್ ಸಮುದ್ರ ತೀರದಲ್ಲಿ ಸಮ್ಮರ್ ಸಾಲ್ಟ್ ಮಾಡಲು ಹೋಗಿ ಕತ್ತಿಗೆ ಹಾನಿ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ತುಮಕೂರಿನ ಯುವಕನೋರ್ವ ಬ್ಯಾಕ್‌ಫ್ಲಿಪ್ ಮಾಡಲು ಹೋಗಿ ಸೊಂಟ ಮುರಿದುಕೊಂಡು ಸಾವಿಗೀಡಾಗಿದ್ದ. ಇಂತಹ ಜೀವಕ್ಕೆ ಎರವಾಗುವ ಹಲವು ಘಟನೆಗಳು ನಡೆದ ಬಳಿಕವೂ ಕೆಲವರು ತಮ್ಮ ಜೀವದ ಹಂಗನ್ನು ತೊರೆದು ಏನೇನೋ ಸಾಹಸ ಮಾಡಲು ಹೋಗಿ ಅನಾಹುತ ಸೃಷ್ಟಿಸಿಕೊಳ್ಳುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಈ ವಿಡಿಯೋ.
ಯುವಕನೋರ್ವ ಕಸ ಸಾಗಿಸುವ ವಾಹನದ ಮೇಲೆ ಫುಶ್ ಅಪ್ ಜೊತೆ ಏನೇನೋ ಸರ್ಕಸ್ ಮಾಡಲು ಹೋಗಿ ಲಾರಿಯಿಂದ ಕೆಳೆಗೆ ಬಿದ್ದು ಸೊಂಟ ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆತನ ಸಾಹಸದ ಆಘಾತಕಾರಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. ಶ್ವೇತ ಶ್ರೀವಾಸ್ತವ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ವೇಗವಾಗಿ ಸಾಗುತ್ತಿರುವ ಕಸದ ವಾಹನದ ಮೇಲೆ ಯುವಕ ಹೇಗೆ ಧೈರ್ಯವಾಗಿ ಪುಶ್‌ಅಪ್ ಮಾಡುತ್ತಿದ್ದಾನೆ ಎಂಬುದನ್ನು ವಿಡಿಯೋ ತೋರಿಸುತ್ತಿದೆ.
ಲಕ್ನೋದ ಗೋಮ್ತಿನಗರದಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ಹಲವು ಪುಶ್‌ಅಪ್‌ಗಳನನ್ನು ಸಖತ್ ಆಗಿ ಮಾಡುವ ಯುವಕ ಕೆಲ ಸೆಕೆಂಡುಗಳ ನಂತರ ವಾಹನದಿಂದ ಉರುಳಿ ರಸ್ತೆಗೆ ಬಿದ್ದಿದ್ದಾನೆ. ವಿಡಿಯೋದ ಕೊನೆಯಲ್ಲಿ ಗಾಯಗೊಂಡು ಆಸ್ಪತ್ರೆ ಬೆಡ್‌ನಲ್ಲಿ ಮಲಗಿರುವ ಯುವಕನ ಫೋಟೋಗಳು ಕೂಡ ಇವೆ. ಸ್ಥಳೀಯ ಮೂಲಗಳ ಪ್ರಕಾರ ಈ ಸಾಹಸ ಮಾಡಲು ಹೋದ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಹಲವು ದಿನಗಳ ಕಾಲ ಆತ ನೆಟ್ಟಗೆ ಕೂರಲು ಕೂಡ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಲಕ್ನೋದ ಗೌತಮ್‌ನಗರದಲ್ಲಿ, ಈತ ಶಕ್ತಿಮಾನ್ ಆಗಲು ಬಯಸಿದ್ದ ಆದರೆ ಈಗ ಕೆಲವು ದಿನಗಳ ಕಾಲ ನೆಟ್ಟಗೆ ಕುಳಿತುಕೊಳ್ಳಲು ಆಗದ ಸ್ಥಿತಿ ತಲುಪಿದ್ದಾನೆ. ಎಚ್ಚರಿಕೆ : ಇಂತಹ ಭಯಾನಕ ಸಾಹಸಗಳನ್ನು ಮಾಡದಿರಿ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಎರಡು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜೊತೆಗೆ ಯಾವುದೇ ಭಯವಿಲ್ಲದೇ ಈ ರೀತಿ ಅಜಾಗರೂಕ ವರ್ತನೆ ನೋಡಿ ಶಾಕ್ ಆಗಿದ್ದಾರೆ.
ವೀಡಿಯೋ ಎಲ್ಲಿಯದ್ದೋ ಗೊತ್ತಿಲ್ಲ, ಸಾವಿಗೂ ಅಂಜದೇ ಹೇಗೆ ಯೂ ಟರ್ನ್ ತಗೊಂಡ ಚಾಲಕ
ಇದು ಸಾಮಾಜಿಕ ಜಾಲತಾಣಗಳ ಯುಗ. ಇಲ್ಲಿ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ ಪಡೆಯಲು, ರಾತ್ರೋರಾತ್ರಿ ಜನಪ್ರಿಯರಾಗಲು ಹುಚ್ಚು ವಿಡಿಯೋ ರೆಕಾರ್ಡ್ ಮಾಡುವುದು ಈಗ ಯುವ ಸಮೂಹದ ಟ್ರೆಂಡ್ ಆಗಿದೆ. ಹೀಗೆ ಸ್ಟಂಟ್ ವಿಡಿಯೋ ರೆಕಾರ್ಡ್ ಕೆಲ ದಿನಗಳ ಹಿಂದೆ ಯುವಕರಿಬ್ಬರು 300 ಅಡಿ ಎತ್ತರಿಂದ ಹೂಗ್ಲಿ ನದಿಗೆ ಹಾರಿದ್ದರು. ಕೋಲ್ಕತಾದಲ್ಲಿರುವ ಹೂಗ್ಲಿ ನದಿಗೆ(ಗಂಗಾ ನದಿ) ಅಡ್ಡಲಾಗಿ ಕಟ್ಟಿರುವ ವಿದ್ಯಾಸಾಗರ್ ಸೇತುವೆ(ಹೂಗ್ಲಿ ಸೇತುವೆ)ಯಿಂದ ಯುವಕರು ಹಾರಿ ಸಾಹಸ ಪ್ರದರ್ಶಿಸಿದ್ದಾರೆ.
ಯುವಕರ ಗುಂಪು ಸೇತುವೆ ಗ್ರಿಲ್ ಬಳಿ ನಿಂತು ಧೈರ್ಯ ಪ್ರದರ್ಶಿಸಿದ್ದಾರೆ. ಇದರಲ್ಲಿ ಇನ್ನಿಬ್ಬರು ಯುವಕರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ನದಿಗೆ ಹಾರಿದ್ದಾರೆ. ಹಾರಿದ ಇಬ್ಬರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಮತ್ತೊರ್ವನನ್ನು ರಕ್ಷಿಸಲಾಗಿದೆ. ಹುಚ್ಚು ಸಾಹಸ ದುರಂತದಲ್ಲಿ ಅಂತ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಐಫೆಲ್ ಟವರ್ ಮೇಲೆ 200 ಅಡಿ ಎತ್ತರದಲ್ಲಿ ಇದೆಂಥಾ ಹುಚ್ಚು ಸಾಹಸ ?
ಸ್ಟಂಟ್ ವಿಡಿಯೋ ಚಿತ್ರೀಕರಣಕ್ಕಾಗಿ ಈ ಯುವಕರು ಸಾಹಸ ಪ್ರದರ್ಶನ ಮಾಡಿದ್ದಾರೆ. ನದಿಗೆ ಹಾರಿದ ಇಬ್ಬರು ಯುವಕರಲ್ಲಿ ವರ್ಷದ ಮೊಹಮ್ಮದ್ ಝಾಕೀರ್ ಸರ್ದಾರ್ ನಾಪತ್ತೆಯಾಗಿದ್ದಾನೆ. ಮತ್ತೊರ್ವ ಮೊಹಮ್ಮದ್ ತಸ್ತಿಗೀರ್ ಅಲಮ್‌ನನ್ನು ರಕ್ಷಿಸಲಾಗಿದೆ. ಇನ್ನು ಕೆಲ ಯುವಕರು ಸೇತುವ ಅಂಚಿನಲ್ಲಿ ನಿಂತು ಸಾಹಸ ಪ್ರದರ್ಶಿಸಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಘಟನೆ ಇದಾಗಿದೆ.