ಬೀಚ್‌ನಲ್ಲಿ ಸುತ್ತಾಡಿ ಹಾಯಾಗಿ ಮಲಗಿದ್ದ ನಾಯಿಯ ಕ್ರೂರವಾಗಿ ಕೊಂದರು ಫಿಶ್‌ ಹುಕ್‌ಗೆ ಹಾಕಿ ನೇಲಿಸಿ ಬಡಿದೇ ಕೊಂದ ದುರುಳರು ವೈರಲ್ ವಿಡಿಯೋ ನೋಡಿ ಕಂಬನಿ ಮಿಡಿದ ನೆಟ್ಟಿಗರು

ಕೇರಳ(ಜು.02): ಯಾರೊಗಳಗೆ ಯಾವ ರೀತಿಯ ಪೈಶಾಚಿಕತೆ ಇರುತ್ತದೋ ಯಾರಿಗೂ ತಿಳಿಯದು. ಆದರೆ ಕೆಲವೊಂದು ಘಟನೆಗಳು ಮನುಷ್ಯನ ಪೈಶಾಚಿಕತೆ, ಕ್ರೂರತೆ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ. ಇಂಥಹ ಒಂದು ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ.

ಈ ಹಿಂದೆ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಆಹಾರವೆಂದು ತಿಳಿದು ಬಾಂಬ್‌ಗೆ ಬಲಿಯಾಗಿರೋ ಘಟನೆ ಇನ್ನೂ ಮಾಸಿಲ್ಲ, ಅಟ್ಟಾಡಿಸಿ ಕೊಂಡು ಚಿರತೆಯನ್ನು ಕೊಂದು ಬೇಯಿಸಿ ಅಡುವೆ ಮಾಡಿದ ತಿಂದ ಪೈಶಾಚಿಕತೆ ನೆನಪು ಹಾಗೇ ಇದೆ, ಈಗ ಮತ್ತೊಂದು ಇಂತಹದೇ ಘಟನೆ ಕೇರಳದಲ್ಲಿ ವರದಿಯಾಗಿದೆ.

ಬೆಚ್ಚಿ ಬೀಳುಸವ ಘಟನೆಯಲ್ಲಿ ಕೇರಳದ ಆದಿಮಲತ್ತುರ ಬೀಚ್‌ನಲ್ಲಿ ಮೂವರು ಯುವಕರು ನಾಯಿಯೊಂದನ್ನು ಬಡಿದು ಕೊಂದಿದ್ದಾರೆ. ನಾಯಿಯ ಮಾಲೀಕ ಕ್ರಿಸ್ಟರ್ಜ್ ಅವರು ಫೇಸ್‌ಬುಕ್‌ನಲ್ಲಿ ವಿಡಿಯೋ ರಿಲೀಸ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸಾಕು ನಾಯಿ ಲಕ್ಕಿಯನ್ನು ಕಳೆದುಕೊಂಡ ನಟಿ ಹರಿಪ್ರಿಯಾ ಭಾವುಕ ಮಾತು!

ಮೀನುಗಾರಿಕಾ ದೋಣಿಯ ಕೊಂಡಿಯೊಂದಕ್ಕೆ ನಾಯಿಯ ಕುತ್ತಿಗೆಯಿಂದ ನೇತಾಡಿಸಲಾಗಿದ್ದು, ಭಾರತದ ಬಡಿಗೆಯಿಂದ ನಾಯಿಗೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಕ್ರಿಸ್ಟುರಜ್ ಅವರ ಸಹೋದರಿ ಸೋನಿ ಪಿ ಅವರು ಈ ಸಂಬಂಧ ದೂರು ನೀಡಿದ್ದಾರೆ.

ಬ್ಲಾಕ್ ಲಾಬ್ರೊಡಾರ್ ನಾಯಿಯನ್ನು ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ 8 ಜನ ಮಕ್ಕಳು ಸಾಕುತ್ತಿದ್ದರು. ಅವನು 8 ವರ್ಷಗಳಿಂದ ನಮ್ಮ ಜೊತೆಗಿದ್ದ, ನಮ್ಮ ಮಕ್ಕಳ ಜೊತೆ ಆಡುತ್ತಿದ್ದ. ನಾವೆಲ್ಲರೂ ಅವನಿಗೆ ಆಹಾರ ಕೊಡುತ್ತಿದ್ದೆವು. ನಮ್ಮ ಕುಟುಂಬವೇ ಆಗಿದ್ದ. ಇತ್ತೀಚೆಗೆ ಬೀಚ್‌ಗೆ ಹೋಗಲಾರಂಭಿಸಿದ. ಹೋದರೂ ಮಧ್ಯಾಹ್ನ ಮರಳುತ್ತಿದ್ದ ಎಂದು ನಾಯಿ ಬಗ್ಗೆ ಹೇಳಿದ್ದಾರೆ ಸೋನಿ.

ಕಾಲು ಕಳೆದುಕೊಂಡ ಶ್ವಾನಕ್ಕೆ ಹೊಸ ಜೀವನ ಕೊಟ್ಟ ಉಡುಪಿ ಕುಟುಂಬ.

ಪೊಲೀಸ್ ಕೇಸ್ ದಾಖಲಿಸಿದರೂ ಪೊಲೀಸರು ಈ ಬಗ್ಗೆ ಗಮನ ಹರಿಸಿರಲಿಲ್ಲ. ಒಬ್ಬ ಆರೋಪಿಯ ಸಂಬಂಧಿ ಕರಾವಳಿ ಪೊಲೀಸ್ ಆಗಿದ್ದ ಕಾರಣ ಘಟನೆ ಮುಚ್ಚಿ ಹಾಕುವ ಹುನ್ನಾರ ನಡೆದಿತ್ತು. ಕ್ರಿಸ್ಟುರಜ್‌ಗೆ ವಿಡಿಯೋ ಡಿಲೀಟ್ ಮಾಡುವಂತೆ ಕೊಲೆ ಬೆದರಿಕೆಗಳೂ ಬಂದಿವೆ ಎನ್ನಲಾಗಿದೆ. ಆದರೆ ಈಗ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

Scroll to load tweet…

ಅದಿಮಲತ್ತುರ ಬೀಚ್‌ನಲ್ಲಿ ನಾಯಿಯನ್ನು ಹೊಡೆದು ಕೊಂದ ಘಟನೆಗೆ ಸಂಬಂಧಿಸಿ ಚಾರ್ಜ್ ಶೀಟ್ ದಾಖಲಿಸುವಂತೆ ತಿರುವನಂತಪುರಂ ಹೈಕೋರ್ಟ್ ನಿರ್ದೇಶಿಸಿದೆ. ಘಟನೆ ಸಂಬಂಧ ಹೈಕೋರ್ಟ್ ಸ್ವಯಂ ಆಗಿ ಪ್ರಕರಣ ದಾಖಲಿಸಿದೆ. ಈ ಘಟನೆ ಬಗ್ಗೆ ಸರ್ಕಾರದ ಸ್ಪಷ್ಟನೆಯನ್ನು ಕೋರಿ ಹೈಕೋರ್ಟ್ ಆದೇಶಿಸಿದ್ದು, 10 ದಿನದೊಳಗಾಗಿ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಸೂಚನೆ ನೀಡಿದೆ.