Asianet Suvarna News Asianet Suvarna News

ಕಿರುಚಾಟ ಕೇಳಿ ಬೆಚ್ಚಿ ಬಿದ್ದ ರೈಲು ಚಾಲಕ: ಇಂಜಿನ್‌ ಅಡಿಯೇ 190 ಕಿಮೀ ಚಲಿಸಿದ ಯುವಕ

ಬಿಹಾರದ ಗಯಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರೈಲಿನ ಇಂಜಿನ್‌ ಕೆಳಗೆ ಕುಳಿತು ಯುವಕನೋರ್ವ ಸುಮಾರು 190 ಕಿಲೋಮೀಟರ್‌ವರೆಗೆ ಪ್ರಯಾಣಿಸಿದ್ದಾನೆ. ಬಿಹಾರದ ಸಾರನಾಥ ಬುದ್ಧ ಪೂರ್ಣಿಮಾ ಎಕ್ಸ್‌ಪ್ರೆಸ್ ರೈಲಿನಲ್ಲಿ (Sarnath Budh Purnima Express train) ಈ ಘಟನೆ ನಡೆದಿದೆ.

youth travels Under A Trains Engine for 190 Kms in bihar akb
Author
Bihar, First Published Jun 10, 2022, 1:02 PM IST

ಗಯಾ: ಬಿಹಾರದ ಗಯಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರೈಲಿನ ಇಂಜಿನ್‌ ಕೆಳಗೆ ಕುಳಿತು ಯುವಕನೋರ್ವ ಸುಮಾರು 190 ಕಿಲೋಮೀಟರ್‌ವರೆಗೆ ಪ್ರಯಾಣಿಸಿದ್ದಾನೆ.  ಬಿಹಾರದ ಸಾರನಾಥ ಬುದ್ಧ ಪೂರ್ಣಿಮಾ ಎಕ್ಸ್‌ಪ್ರೆಸ್ ರೈಲಿನಲ್ಲಿ (Sarnath Budh Purnima Express train) ಈ ಘಟನೆ ನಡೆದಿದೆ. 190  ಕಿಲೋ ಮೀಟರ್ ಪ್ರಯಾಣದ ನಂತರ ಚಾಲಕನಿಗೆ ರೈಲಿನ ಕೆಳಭಾಗದಿಂದ ಕಿರುಚಾಡಿದ ಸದ್ದು ಕೇಳಿ ರೈಲು ನಿಲ್ಲಿಸಿ ನೋಡಿದಾಗ ಅಲ್ಲಿ ಯುವಕನೋರ್ವ ಕುಳಿತಿದ್ದ. 

ಸೋಮವಾರ ಬೆಳಗಿನ ಜಾವ 4 ಗಂಟೆಗೆ ರೈಲು ಗಯಾ ರೈಲು ನಿಲ್ದಾಣಕ್ಕೆ ( Gaya railway station) ಬಂದಾಗ ರೈಲು ಚಾಲಕನಿಗೆ ಯುವಕ ಕಣ್ಣಿಗೆ ಬಿದ್ದಿದ್ದಾನೆ. ರೈಲ್ವೇ ಸಂರಕ್ಷಣಾ ಪಡೆಗೆ (Railway Protection Force) ನೀಡಿದ ಚಾಲಕ ನೀಡಿದ ಹೇಳಿಕೆಯಲ್ಲಿ, ಚಾಲಕನು ಎಲ್ಲೋ ಕೆಳಗಿನಿಂದ ಮನುಷ್ಯನ ಕಿರುಚಾಟವನ್ನು ಕೇಳಿದನು, ತಕ್ಷಣ ಆತ ಟಾರ್ಚ್ ಲೈಟ್‌ನೊಂದಿಗೆ ಪರೀಕ್ಷಿಸಲು ಹೋದಾಗ ಮತ್ತು ಮೋಟಾರ್‌ನ ಕೆಳಗಿರುವ ಕಿರಿದಾದ ಜಾಗದಲ್ಲಿ ವ್ಯಕ್ತಿ ಇರುವುದನ್ನು ಗುರುತಿಸಿದ್ದಾನೆ.

Headless Man ತಲೆ ಇಲ್ಲ, ಕೈಕಾಲಿಲ್ಲ, ಹಜ್ಮತ್ ಸ್ಯೂಟ್‌ನಲ್ಲಿ ನಡೆದಾಡುವ ಮನುಷ್ಯ ಗೂಗಲ್ ಮ್ಯಾಪ್‌ನಲ್ಲಿ ಪತ್ತೆ!

ನಾನು ತಕ್ಷಣ ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿಗೆ ಕರೆ ಮಾಡಿ ಆತನನ್ನು ಅಲ್ಲಿಂದ ಇಳಿಸಿದೆ. ಆದರೆ ರೈಲ್ವೆ ಅಧಿಕಾರಿಗಳು ಆತನನ್ನು ಪ್ರಶ್ನಿಸುವ ಮೊದಲು ಅಲ್ಲಿಂದ ಆತ ಓಡಲು ಯತ್ನಿಸಿದ ಯುವಕ ನೋಡಲು ಮಾನಸಿಕವಾಗಿ ಅಸ್ವಸ್ಥನಂತೆ ಕಾಣುತ್ತಿದ್ದರು. ಇಂಜಿನ್‌ನಿಂದ ಉಂಟಾದ ವಿಪರೀತ ಶಾಖದಿಂದಾಗಿ ಅವನ ಆರೋಗ್ಯ ಹದಗೆಟ್ಟಿತ್ತು. ಆರ್‌ಪಿಎಫ್ ಸಿಬ್ಬಂದಿ ಆತನನ್ನು ಹೊರಗೆ ಕರೆದೊಯ್ಯುತ್ತಿದ್ದಾಗ ಆತ ನೀರು ಕೇಳುತ್ತಿದ್ದ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುವಕನ ಗುರುತು ಪತ್ತೆ ಹಚ್ಚಲು ರೈಲ್ವೆ ಅಧಿಕಾರಿಗಳು (railway officials)  ವಿಫಲರಾಗಿದ್ದಾರೆ. ಏಕೆಂದರೆ ಆತನನ್ನು ರಕ್ಷಿಸಿದ ಕೂಡಲೇ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಅವರು ಇಂಜಿನ್‌ನಲ್ಲಿ ಎಲ್ಲಿಂದ ಹತ್ತಿದರು ಎಂದು ರೈಲ್ವೆ ಅಧಿಕಾರಿಗಳಿಗೆ ಇನ್ನೂ ಖಚಿತ ಇಲ್ಲ. ಈ ರೈಲು ರಾಜ್‌ಗೀರ್‌ನಿಂದ (Rajgir) ಬರುತ್ತಿತ್ತು.  ಮತ್ತು ಅವನು ಬಹುಶಃ ರೈಲ್ವೇ ಯಾರ್ಡ್‌ಗಳಲ್ಲಿ ಇಂಜಿನ್‌ನೊಳಗೆ ಹತ್ತಿರಬೇಕು ಎಂದು ರೈಲ್ವೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಹೂವಲ್ಲ ಹಾವು: ಹಾರದ ಬದಲು ಹಾವನ್ನೇ ಬದಲಾಯಿಸಿಕೊಂಡ ವಧು ವರರು

ರಾಜ್‌ಗಿರ್‌ನಿಂದ ಗಯಾಗೆ ಚಲಿಸುವ, ಸಾರನಾಥ ಬುಧ್ ಪೂರ್ಣಿಮಾ ಎಕ್ಸ್‌ಪ್ರೆಸ್ ರೈಲು ಎರಡು ನಿಮಿಷದಿಂದ 10 ನಿಮಿಷಗಳವರೆಗೆ ಆರು ಸ್ಥಳಗಳಲ್ಲಿ ನಿಲುಗಡೆಗಳನ್ನು ಹೊಂದಿದೆ. ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದಲ್ಲಿ (Patna Junction railway station) ರೈಲು ಗರಿಷ್ಠ 10 ನಿಮಿಷಗಳ ನಿಲುಗಡೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಮೂರ್ಛೆ ತಪ್ಪಿ ರೈಲಿನ ಕೆಳಗೆ ಬಿದ್ದರು ಸುರಕ್ಷಿತವಾಗಿ ಪಾರಾದ ಘಟನೆಯೊಂದರ ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರೈಲು ಬೋಗಿಗಳ ನಡುವೆ ಮಹಿಳೆ ಕಣ್ಮರೆಯಾಗುತ್ತಿರುವ ದೃಶ್ಯವನ್ನು ನೋಡಿ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದರು. ಈ ಪವಾಡ ಸದೃಶ ಘಟನೆಅರ್ಜೆಂಟೀನಾದ ( Argentina) ಬ್ಯೂನಸ್ ಐರಿಸ್ ನಲ್ಲಿ ನಡೆದಿತ್ತು. ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಮಹಿಳೆಯೊಬ್ಬರು ಬದುಕುಳಿದಿದ್ದರು ಮಾರ್ಚ್ 29 ರಂದು ಈ ಘಟನೆ ನಡೆದಿದ್ದು, ಸ್ಥಳೀಯ ಸಿಸಿಟಿವಿಯಲ್ಲಿ ದೃಶ್ಯಾವಳಿಗಳು  ಸೆರೆಯಾಗಿದ್ದವು. ನಂತರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿತ್ತು.

Follow Us:
Download App:
  • android
  • ios