ಹೂವಲ್ಲ ಹಾವು: ಹಾರದ ಬದಲು ಹಾವನ್ನೇ ಬದಲಾಯಿಸಿಕೊಂಡ ವಧು ವರರು

ಮದುವೆ ದಿನ ವಧು ವರರು ಹೂವಿನ ಹಾರದ ಬದಲಾಗಿ ಹಾವನ್ನು ಪರಸ್ಪರರ ಕುತ್ತಿಗೆಗೆ ಹಾಕಿದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 

Bride Groom Exchange Snake Garlands in Bizarre Wedding Ritual in maharashtra akb

ಮದ್ವೆ ದಿನ ಗಂಡು ಹೆಣ್ಣು ಪರಸ್ಪರ ಹಾರ ಬದಲಾಯಿಸುವುದನ್ನು ನೋಡಿದ್ದೇವೆ. ಆದರೆ ಹೂವಿನ ಹಾರದ ಬದಲು ಹಾವನ್ನೇ ಹಾರವಾಗಿಸಿದ್ದನ್ನು ಎಲ್ಲಾದರು ನೋಡಿದ್ದೀರಾ? ವಿಚಿತ್ರ ಎನಿಸಿದರು ಮಹಾರಾಷ್ಟ್ರದಲ್ಲಿ ಇಂತಹ ಘಟನೆಯೊಂದು ನಡೆದಿದೆ. ವಧು ವರರು ಹಾವನ್ನೇ ಹಾರವಾಗಿಸಿದ್ದಾರೆ. ಸಾಮಾನ್ಯವಾಗಿ ಹಾವು ಎಂದರೆ ಭಯಬಿದ್ದು ದೂರು ಓಡೋಗೋದೆ ಜಾಸ್ತಿ ಅಂತಹದ್ದರಲ್ಲಿ ಈ ಜೋಡಿ ಹಾವನ್ನೇ ಪರಸ್ಪರರ ಕೊರಳಿಗೆ ಹಾಕಿದ್ದನ್ನು ನೋಡಿ ಜನ ದಂಗಾಗಿದ್ದಾರೆ. 

ಮಹಾರಾಷ್ಟ್ರದ (Maharashtra) ಬೀಡ್ (Beed) ಜಿಲ್ಲೆಯ ದೂರದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿ ಕಾಣಿಸುವಂತೆ  ದಂಪತಿಗಳು ಬಿಳಿ ಬಟ್ಟೆಗಳನ್ನು ಧರಿಸಿ, ಪರಸ್ಪರರ ಕುತ್ತಿಗೆಗೆ ಹಾವುಗಳನ್ನು ಹಾಕುತ್ತಾರೆ. ಅಲ್ಲದೇ ವಧುವಾಗಲಿ ವರನಾಗಲಿ ಹಾವನ್ನು (snake) ಕಂಡು ಹೆದರುವುದಿಲ್ಲ. ವಧು ಮೊದಲು ವರನ ಕುತ್ತಿಗೆಗೆ ದೊಡ್ಡ ಹಾವನ್ನು ಹಾಕುತ್ತಾಳೆ. ನಂತರ ವರನ ಸರದಿ ಬಂದಾಗ, ಅವನು ದೊಡ್ಡ ಹೆಬ್ಬಾವನ್ನು ತಂದು ವಧುವಿನ ಕುತ್ತಿಗೆಗೆ ಹಾಕುತ್ತಾನೆ. ಅದರ ನಂತರ ದಂಪತಿಗಳು ಫೋಟೋಗಳಿಗೆ ಪೋಸ್ ನೀಡುತ್ತಾರೆ. ಈ ಮದುವೆಯಲ್ಲಿ ಪಾಲ್ಗೊಳ್ಳಲು ಅಪಾರ ಜನಸ್ತೋಮವೇ ನೆರೆದಿತ್ತು. ಗಮನಾರ್ಹ ವಿಚಾರ ಎಂದರೆ ಇಬ್ಬರು ಸ್ಥಳೀಯ ವನ್ಯಜೀವಿ ಇಲಾಖೆ ನೌಕರರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಅವರು ರಾಜ್ಯದ ದೂರದ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

 

ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ಹಾವುಗಳು ಭಯಾನಕ ಜೀವಿಗಳಾಗಿದ್ದು, ಅವುಗಳ ಗಾತ್ರ ಅಥವಾ ತಳಿಯ ಹೊರತಾಗಿಯೂ, ಅವುಗಳೊಂದಿಗೆ ಯಾವುದೇ ಚೆಲ್ಲಾಟ ಜೀವಕ್ಕೆ ಸಂಚಾಕಾರ ತರಬಲ್ಲದು. ಅಂತಹದರಲ್ಲಿ ಈ ಜೋಡಿ ಅವುಗಳನ್ನು ಕುತ್ತಿಗೆಯಲ್ಲಿ ನೇತಾಡಿಸಿಕೊಂಡು ಮದುವೆಯಾಗಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

ಫೋಟೋಗ್ರಾಫರ್ ಕರೆಸಿಲ್ಲ ಎಂದು ಮದ್ವೆ ನಿರಾಕರಿಸಿದ ವಧು
 

ಕೆಲ ದಿನಗಳ ಹಿಂದೆ ಒಡಿಶಾದಲ್ಲಿ ಜೀವಂತ ಹಾವಿನೊಂದಿಗೆ ಮದುವೆ ದಿಬ್ಬಣ ಬಂದವರು ಡಾನ್ಸ್‌ (dance) ಮಾಡಿದ ವಿಡಿಯೋ ವೈರಲ್ ಆಗಿತ್ತು. ವರನ ಕಡೆಯ ದಿಬ್ಬಣದವರು ವಧುವಿನ ಮನೆಗೆ ಬಂದಾಗ ಅಲ್ಲಿ ಹಾವಾಡಿಗನನ್ನು ಕರೆಸಿದ ವಧುವಿನ ಕಡೆಯವರು ಅಲ್ಲಿ ಸಖತ್ ಮನೋರಂಜನೆ ನೀಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಾವಾಡಿಗ ಬಿದಿರಿನ ಬುಟ್ಟಿಯೊಂದರಲ್ಲಿ ಜೀವಂತ ಹಾವನ್ನು ಇರಿಸಿದ್ದು ಅದರೆದುರು ಪುಂಗಿ ಊದುತ್ತಾ ಡಾನ್ಸ್ ಮಾಡುತ್ತಿದ್ದಾನೆ.

ಗ್ಯಾನವಾಪಿ ಮಸೀದಿ ಸಮೀಕ್ಷೆ ವೇಳೆ ಪ್ರತ್ಯಕ್ಷವಾದ ನಾಗರ ಹಾವು, ವಿಡಿಯೋಗ್ರಫಿಗೆ ವಿಶೇಷ ಉಪಕರಣಗಳ ಬಳಕೆ!
 

ಹಾವು ಇರುವ ಬುಟ್ಟಿಯನ್ನು ಡಾನ್ಸ್‌ ಮಾಡುವವರ ಮಧ್ಯದಲ್ಲಿ ಇಡಲಾಗಿತ್ತು. ಜೊತೆಗೆ ಹಾವಾಡಿಗ ಪುಂಗಿ ಊದುತ್ತಿದ್ದರೆ ಅಲ್ಲಿ ಸೇರಿದ ವರನ ಕಡೆಯ ನೂರಾರು ಜನ ಯುವಕರು ಪುಂಗಿ ಸದ್ದಿಗೆ ತಕ್ಕಂತೆ ಸಖತ್ ಆಗಿ ಕುಣಿಯುತ್ತಿದ್ದಾರೆ. ಅಲ್ಲಿ ಸೇರಿದ ಬಹುತೇಕರು ಹಾವಿನಂತೆಯೇ ಡಾನ್ಸ್ ಮಾಡುತ್ತಿದ್ದು, ಇದು ನೋಡುಗರಿಗೆ ಮನೋರಂಜನೆ ನೀಡಿತ್ತು. 

ಹಾವಾಡಿಗ ಮಧ್ಯದಲ್ಲಿ ಪುಂಗಿ ಊದುತ್ತಾ ಡಾನ್ಸ್‌ ಮಾಡುತ್ತಿದ್ದರೆ ಸುತ್ತಲೂ ಬ್ಯಾಂಡ್ ಸೆಟ್‌ನವರು ಬ್ಯಾಂಡ್ ಬಡಿಯುತ್ತಿದ್ದಾರೆ. ಇತ್ತ ಜೀವಂತ ಹಾವಿರುವ ಬುಟ್ಟಿಯನ್ನು ತಲೆ ಮೇಲೆ ಹೊತ್ತ ಹಾವಾಡಿಗ ಡಾನ್ಸ್‌ ಮಾಡುತ್ತಿದ್ದಾನೆ. ಇವನ ಜೊತೆ ಸೇರಿದ ವರನ ಕಡೆಯವರು ಕೂಡ ಜೀವಂತ ಹಾವಿರುವ ಭಯವನ್ನು ಮರೆತು ಸಖತ್ ಆಗಿ ಕುಣಿದಿದ್ದರು. ಒಡಿಶಾದ ಮಯೂರ್‌ಭಂಜ್ (Mayurbhanj)  ಜಿಲ್ಲೆಯ ಕರಂಜಿಯಾದಲ್ಲಿ (Karanjia) ಈ ಘಟನೆ ನಡೆದಿತ್ತು.
 

Latest Videos
Follow Us:
Download App:
  • android
  • ios