ಸ್ನೇಹಿತೆಗೆ ವಿಶ್ ಮಾಡಲು ಹೋಗಿ ಜೈಲು ಸೇರಿದ ಯುವಕ..!
ಆನ್‌ಲೈನ್ ಸ್ನೇಹಿತೆ ಬತ್‌ರ್‍ಡೇ ವಿಷ್‌ಗೆ ಹೋಗಿದ್ದ ಬೆಂಗ್ಳೂರು ಯುವಕಗೆ ಜೈಲು! ಹುಡುಗಿ ಮನೆಯವರಿಗೆ ಯುವಕನ ಗುರುತು ಸಿಗದೆ ಪಜೀತಿ | 2000 ಕಿ.ಮೀ. ದೂರದಿಂದ ಬಂದವನಿಗೆ ಭ್ರಮನಿರಸನ
ಲಖಿಂಪುರ ಖೇರಿ (ಉ.ಪ್ರ): ಆನ್‌ಲೈನ್‌ನಲ್ಲಿ ಪರಿಚಿತವಾದ ಸ್ನೇಹಿತೆಗೆ ಚಾಕೋಲೇಟ್ ಹಾಗೂ ಉಡುಗೊರೆಗಳನ್ನು ನೀಡಿ, ಹುಟ್ಟುಹಬ್ಬದ ಶುಭ ಕೋರಲು ಬೆಂಗಳೂರಿನಿಂದ 2000 ಕಿ.ಮೀ ದೂರ ಪ್ರಯಾಣಿಸಿದ್ದ ಯುವಕನೋರ್ವ ಒಂದು ದಿನ ಜೈಲು ವನವಾಸ ಅನುಭವಿಸಿದ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದಿದ್ದು, ಮಂಗಳವಾರ ಈ ಘಟನೆ ಬೆಳಕಿಗೆ ಬಂದಿದೆ.
ಸಲ್ಮಾನ್ ಎಂಬ ಯುವಕನೇ ಹೀಗೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಒಂದು ರಾತ್ರಿ ಜೈಲು ಕಂಬಿ ಎಣಿಸಿ ವೈಯಕ್ತಿಕ ಬಾಂಡ್ ಮೇರೆಗೆ ಕಾರಾಗೃಹದಿಂದ ಮುಕ್ತನಾದ ‘ದುರಂತ ನಾಯಕ’.
ಸುಪ್ರೀಂ ಸಮಿತಿಗೂ ಜಗ್ಗದ ರೈತ ಸಂಘಟನೆ, ನಾಳೆ ಸಂಪುಟ ವಿಸ್ತರಣೆ; NewsHour ವಿಡಿಯೋ!
ಉತ್ತರ ಪ್ರದೇಶದ ದೇವರಿಯಾ ಜಿಲ್ಲೆ ಮೂಲದವನಾದ ಸಲ್ಮಾನ್ ಬೆಂಗಳೂರಿನಲ್ಲಿ ಮೆಕಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ವೇಳೆ ಆನ್‌ಲೈನ್‌ನಲ್ಲಿ ಪರಿಚಿತವಾಗಿದ್ದ ಉತ್ತರ ಪ್ರದೇಶದ ಲಖಿಂಪುರ ಖೇರಿ ಅಪ್ರಾಪ್ತ ಯುವತಿ ಜೊತೆ ಸ್ನೇಹ ಚಿಗುರೊಡೆದಿತ್ತು.
ತನ್ನ ಪ್ರೀತಿಯ ಹುಡುಗಿಯ ಹುಟ್ಟುಹಬ್ಬಕ್ಕೆ ಚಾಕೋಲೇಟ್ ಮತ್ತು ಉಡುಗೊರೆಗಳನ್ನು ಕೊಂಡು ಬೆಂಗಳೂರಿನಿಂದ ಲಖನೌಗೆ ವಿಮಾನದಲ್ಲಿ ಮತ್ತು ಲಖನೌನಿಂದ ಲಖೀಂಪುರ ಬಸ್ಸಿನ ಮೂಲಕ 2000 ಕಿ.ಮೀ. ಕ್ರಮಿಸಿ ಯುವತಿಯ ಮನೆಗೆ ತೆರಳಿದ್ದ. ಆದರೆ, ಈತನನ್ನು ಗುರುತಿಸದ ಹುಡುಗಿ ಮನೆಯವರು ಈತನಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು ಎಂದು ಪೊಲೀಸರಿಗೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಯುವಕ ಸಂಕಷ್ಟಕ್ಕೆ ಸಿಲುಕಿದ್ದ.