Asianet Suvarna News Asianet Suvarna News

ಕೊರೋನಾ ಇರಲಿಲ್ಲ, ಆದ್ರೂ 3 ವರ್ಷದ ಹಿಂದೆ ಹೀಗೇ ಇತ್ತು ಗಂಗೆಯ ಮಡಿಲು: ಯೋಗಿ!

* ಗಂಗೆಯ ಒಡಲಲ್ಲಿ ತೇಲುತ್ತಿವೆ ಶವಗಳು

* ಕೊರೋನಾದಿಂದ ಶವಗಳ ರಾಶಿ ಎಂದವರಿಗೆ ತಿರುಗೇಟು ಕೊಟ್ಟ ಸಿಎಂ ಯೋಗಿ

* ಕೊರೋನಾ ಇರಲಿಲ್ಲ, ಆದ್ರೂ 3 ವರ್ಷದ ಹಿಂದೆ ಹೀಗೇ ಇತ್ತು ಗಂಗೆಯ ಒಡಲು: ಯೋಗಿ!

Yogi Adityanath Shares Three Years Old News Report To Show How was ganga pod
Author
Bangalore, First Published May 26, 2021, 11:18 AM IST


ಲಕ್ನೋ(ಮೇ.26): ಕೊರೋನಾಗಿಂತ ಹೆಚ್ಚು ಈ ಸೋಂಕಿನ ಬಗೆಗಿನ ವದಂತಿಗಳು ಜನರಲ್ಲಿ ಭೀತಿ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಟೋಗಳು ಜನರಲ್ಲಿ ಭಯ ಹುಟ್ಟಿಸಿವೆ. ಜೊತೆಗೆ ಸರ್ಕಾರದ ಬಗ್ಗೆ ಆಕ್ರೋಶ ಮೂಡುವಂತೆಯೂ ಮಾಡಿವೆ. ಇತ್ತೀಚೆಗಷ್ಟೇ ಪ್ರಯಾಜ್‌ರಾಜ್‌ನ ಶೃಂಗವೇವೇರಪುರ ಘಾಟ್‌ನ ಫೋಟೋ ಒಂದು ವೈರಲ್ ಆಗಿದೆ. ಇದರೊಂದಿಗೆ ಕೊರೋನಾದಿಂದ ಅದೆಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆಂದರೆ, ಇವರ ಅಂತ್ಯಕ್ರಿಯೆ ನಡೆಸಲು ಸ್ಮಧಶಾನದಲ್ಲಿ ಸ್ಥಳವಿಲ್ಲದಂತಾಗಿದೆ. ಹೀಗಾಗಿ ಮರಳಿನಡಿ ಹೆಣ ಹೂತು ಹೋಗುತ್ತಿದ್ದಾರೆ. ಆದರೆ ವಾಸ್ತವವಾಗಿ ಈ ಫೋಟೋ 2018ರದ್ದಾಗಿದೆ. ಅಚ್ಚರಿಯ ವಿಚಾರವೆಂದರೆ ಅಂದು ಜನರು ಕೊರೋನಾದ ಹೆಸರನ್ನೂ ಕೇಳಿರಲಿಲ್ಲ.

ಗಂಗೆಯ ಒಡಲಲ್ಲಿ ತೇಲುತ್ತಿರುವ ಹೆಣಗಳಿಗೆ ಕೇಂದ್ರವೇ ನೇರ ಹೊಣೆ: ರಾಗಾ ಕಿಡಿ!

ಮೂರು ವರ್ಷ ಹಳೆ ಫೋಟೋ ಟ್ವೀಟ್ ಮಾಡಿದ ಸಿಎಂ ಯೋಗಿ

ಹಳೇ ಫೋಟೋಗಳನ್ನು ಬಳಸಿ ಜನರ ಮನದಲ್ಲಿ ಭಯ ಮೂಡಿಸುವ ವದಂತಿ ಹಬ್ಬಿಸುವುದನ್ನು ಕಂಡ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮೂರು ವರ್ಷ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಶೇರ್ ಮಾಡುತ್ತಾ 'ಅಂದು ಕೊರೋನಾ ಇರಲಿಲ್ಲ, ಆದ್ರೂ ಮೂರು ವರ್ಷದ ಹಿಂದೆ ಹೀಗೇ ಇತ್ತೂ ಗಂಗೆಯ ತಟ' ಎಂದು ಬರೆದಿದ್ದಾರೆ.

1 ವಾರದಲ್ಲಿ ಗಂಗೆಯಲ್ಲಿ ತೇಲಿ ಬಂದವು 2000 ಶವ!

ವಾಸ್ತವವಾಗಿ ಹಲವಾರು ಹಿಂದೂ ಕುಟುಂಬಗಳು ಗಂಗಾ ನದಿ ದಡದ ಮರಳಲ್ಲಿ ಶವಗಳನ್ನು ಹೂಳುವ ಒದ್ಧತಿ ಅನುಸರಿಸಿಕೊಂಡು ಬಂದಿವೆ. ಇದರಿಂದ ನದಿ ಮಾಲಿನ್ಯಗೊಳ್ಳುತ್ತದೆ. ಆದರೆ ಕೊರೋನಾ ಸೋಂಕಿನಿಂದ ಹೀಗಾಗುತ್ತಿದೆ ಎಂದು ಹಬ್ಬಿಸುತ್ತಿರುವ ವರದಿಗಳ ಹಿಂದಿನ ಸತ್ಯ ಇದರಿಂದ ಅನಾವರಣಗೊಂಡಿದೆ. 
 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios