ನವದೆಹಲಿ(ಮೇ.24): ಕೊರೋನಾ ಅಬ್ಬರದ ನಡುವೆ ಬಿಹಾರ, ಉತ್ತರ ಪ್ರದೇಶ ಭಾಗದಲ್ಲಿ ಗಂಗಾ ನದಿಯಲ್ಲಿ ಮೃತದೇಹಗಳು ತೇಲಿ ಬರುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಈ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಕಿಡಿ ಕಾರಿದ್ದು, ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ, ಅದು ಸಾಮೂಹಿಕ ಜವಾಬ್ದಾರಿಯಲ್ಲ. ಗಂಗಾ ನದಿಯಲ್ಲಿ ತಮ್ಮ ಸಂಬಂಧಿಕರನ್ನು ಬಿಟ್ಟವರ ನೋವು ಅರ್ಥ ಮಾಡಿಕೊಳ್ಳಬೇಕು. ಅದು ಅವರ ತಪ್ಪಲ್ಲ ಎಂದಿದ್ದಾರೆ.

1 ವಾರದಲ್ಲಿ ಗಂಗೆಯಲ್ಲಿ ತೇಲಿ ಬಂದವು 2000 ಶವ!

ಮೃತದೇಹಗಳ ಫೋಟೋಗಳನ್ನು ಶೇರ್ ಮಾಡಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಇಡೀ ದೇಶ ಹಾಗೂ ವಿಶ್ವವೇ ಇಂತಹ ದೃಶ್ಯಗಳನ್ನು ಗಮನಿಸುತ್ತಿದೆ. ಆದರೆ ಈ ವೇಳೆ ನದಿ ಬದಿ ಸಂಬಂಧಿಕರ ಶವ ಬಿಟ್ಟು ಹೋದವರ ನೋವನ್ನು ಅರ್ಥೈಸಿಕೊಳ್ಳಬೇಕು. ಅದು ಅವರ ತಪ್ಪಲ್ಲ ಎಂದು ಮಾಜಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಅಲ್ಲದೇ ಇದು ಸಾಮೂಹಿಕ ಜವಾಬ್ದಾರಿಯಲ್ಲ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ರಾಹುಲ್ ಗಾಂಧಿ ಈ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 

ಗಂಗೆಯಲ್ಲಿ ಹರಿದು ಬಂತು ಶವಗಳ ರಾಶಿ, ನಮ್ಮದಲ್ಲ ಉ. ಪ್ರದೇಶದ್ದೆಂದ ಬಿಹಾರ!

ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಇತ್ತೀಚಿಗೆ ಗಂಗಾ ನದಿಯಲ್ಲಿ ಭಾರೀ ಸಂಖ್ಯೆಯಲ್ಲಿ ಕೊರೋನಾ ಶಂಕಿತ ಮೃತದೇಹಗಳು ತೇಲುವ ದೃಶ್ಯಗಳು ವೈರಲ್ ಆಗಿದ್ದವು. ಇದು ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ರಾಹುಲ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆಂಬುವುದು ಉಲ್ಲೇಖನೀಯ.