Asianet Suvarna News Asianet Suvarna News

1 ವಾರದಲ್ಲಿ ಗಂಗೆಯಲ್ಲಿ ತೇಲಿ ಬಂದವು 2000 ಶವ!

* 1 ವಾರದಲ್ಲಿ ಗಂಗೆಯಲ್ಲಿ ತೇಲಿ ಬಂತು 2000 ಶವ!

* ಬಹುತೇಕ ಶವಗಳು ಕೊರೋನಾ ಸೋಂಕಿತರದ್ದು

* ಸಂಸ್ಕಾರಕ್ಕೆ ಹಣ ಇಲ್ಲದೆ ಎಸೆಯುತ್ತಿರುವ ಜನರು?

Coronavirus Over 2000 bodies found in Ganga river pod
Author
Bangalore, First Published May 16, 2021, 7:25 AM IST

ನವದೆಹಲಿ(ಮೇ.16): ಕಳೆದ ಒಂದು ವಾರದ ಅವಧಿಯಲ್ಲಿ ಉತ್ತರಪ್ರದೇಶ ಮತ್ತು ಬಿಹಾರ ವ್ಯಾಪ್ತಿಯ ಗಂಗಾ ನದಿಯಲ್ಲಿ 2000ಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಜೊತೆಗೆ ಈ ಪೈಕಿ ಬಹುತೇಕ ಶವಗಳು ಕೊರೋನಾ ಸೋಂಕಿತರದ್ದೇ ಆಗಿವೆ ಎಂದು ಖಚಿತಪಡಿಸಿವೆ.

ಗಂಗೆಯಲ್ಲಿ ಹರಿದು ಬಂತು ಶವಗಳ ರಾಶಿ, ನಮ್ಮದಲ್ಲ ಉ. ಪ್ರದೇಶದ್ದೆಂದ ಬಿಹಾರ!

ಈ ಎರಡೂ ರಾಜ್ಯಗಳಲ್ಲಿ ಒಟ್ಟಾರೆ 1400 ಕಿ.ಮೀ. ಉದ್ದದಷ್ಟುಗಂಗಾ ನದಿ ಹರಿಯುತ್ತದೆ. ಈ ಪೈಕಿ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಸೋಂಕಿಗೆ ಬಲಿಯಾದವರ ಕುಟುಂಬದ ಸದಸ್ಯರ ಬಳಿ ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲದ ಸಾಧ್ಯತೆಗಳಿವೆ. ಹೀಗಾಗಿ ಅವರೆಲ್ಲಾ ಶವಗಳನ್ನು ನದಿಗೆ ಎಸೆಯುತ್ತಿದ್ದಾರೆ ಎಂದು ಎರಡೂ ರಾಜ್ಯಗಳಿಂದ ಪಡೆದ ಮಾಹಿತಿಯನ್ನು ಆಧರಿಸಿ ಗೃಹ ಸಚಿವಾಲಯ ಮೂಲಗಳು ತಿಳಿಸಿವೆ.

"

ಈ ಹಿನ್ನೆಲೆಯಲ್ಲಿ ಜನರು ಶವಗಳನ್ನು ನದಿಗೆ ಎಸೆಯದಂತೆ ಮತ್ತು ಈ ಮೂಲಕ ಸೋಂಕು ಪ್ರಸರಣಕ್ಕೆ ಕಾರಣವಾಗದಂತೆ ಉಭಯ ರಾಜ್ಯಗಳಿಗೂ ಸೂಚಿಸಲಾಗಿದೆ. ಅಲ್ಲದೆ ನದಿಯಿಂದ ಹೊರತೆಗೆದ ಎಲ್ಲಾ ಶವಗಳನ್ನು ಕ್ರಮಾನುಸಾರ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios