ಇಂದು ಪ್ರಜಾಸತ್ತಾತ್ಮಕ ಬೇರುಗಳು ಆಳವಾಗುತ್ತಿರುವ ಏಕೈಕ ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ನೋಡಲಾಗುತ್ತಿದೆ. ಇದು ಭಾರತದ ಪ್ರಜಾಸತ್ತಾತ್ಮಕ ತಳಹದಿಯನ್ನೂ ಆಳಗೊಳಿಸುತ್ತಿದೆ. ಅಂತಹ ಆಳವಾಗುವಿಕೆಯು ಹೆಚ್ಚು ಅಧಿಕೃತ ಮತ್ತು ವಿಶ್ವಾಸಾರ್ಹ ಪ್ರಜಾಪ್ರಭುತ್ವದ ಭಾಗವಹಿಸುವಿಕೆಗೆ ವೇದಿಕೆಯನ್ನು ಸಿದ್ಧಪಡಿಸುತ್ತಿದೆ.
ಯೋಗಿ ಆದಿತ್ಯನಾಥ್ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ದಿನ ಒಂದು ಛಾಯಾಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಭಾರತದ ಕಲ್ಪನೆಯನ್ನು ಸೆಳೆದ ಈ ವೈಶಿಷ್ಟಪೂರ್ಣ ಛಾಯಾಚಿತ್ರವು ಪ್ರಮಾಣವಚನ ಸಮಾರಂಭದ ವೇದಿಕೆಯಲ್ಲಿ ಐವರು ಬಿಜೆಪಿ ನಾಯಕರು ಭಾಗವಹಿಸಿರುವುದನ್ನು ತೋರಿಸಿತು.
ಅವರೆಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ. ಆಳವಾದ ಸಂದೇಶ-ಸಂಕೇತಗಳನ್ನು ಹೊರಸೂಸುವ ಛಾಯಾಚಿತ್ರ ಹಲವಾರು ಅಗತ್ಯ ಆಯಾಮಗಳನ್ನು ಬಿತ್ತಿಸಿ-ಚಿತ್ರಿಸುತ್ತದೆ. ಈ ಆಯಾಮಗಳು ಕ್ರಮೇಣ ಭಾರತದ ರಾಜಕೀಯ ಸ್ವರೂಪವನ್ನು ಬದಲಾಯಿಸುವ ಸಂಕೇತದಂತಿವೆ. ಇದು ಭಾರತಕ್ಕೆ ಬಲವಾದ ಮತ್ತು ಅಧ್ಯಯನಶೀಲ ಪ್ರಜಾಸತ್ತಾತ್ಮಕ ಅಡಿಪಾಯವನ್ನು ಹಾಕುವ ಬದಲಾವಣೆಯಾಗಿದೆ.
PAN Aadhaar Link:ಪ್ಯಾನ್‌ಗೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಹೂಡಿಕೆ ಅಸಾಧ್ಯ!
ಪ್ರಧಾನಿ ಮೋದಿ ದೂರದೃಷ್ಟಿ
ಭಾರತವು ತನ್ನ ಸ್ವರಾಜ್ಯದ 75ನೇ ವರ್ಷವನ್ನು ಆಚರಿಸುತ್ತಿರುವಾಗ ಈ ಬದಲಾವಣೆ ಸಂಭವಿಸುತ್ತಿದೆ. ಅದರ ಬಾಹ್ಯರೇಖೆಗಳು ಮತ್ತು ಪರಿಣಾಮಗಳು ಗೋಚರಿಸುತ್ತಿವೆ ಎಂಬ ಅಂಶವು ಎರಡು ಪ್ರಮುಖ ಸಾಂಕೇತಿಕ ಸಂದೇಶಗಳಾಗಿವೆ. ಇದು ಮೋದಿಯವರು ಘೋಷಿಸಿದ ಮತ್ತು ಪ್ರಸ್ತಾಪಿಸುತ್ತಲೇ ಇರುವ ಬದಲಾವಣೆ. ಮುಂದಿನ ಕಾಲು ಶತಮಾನದಲ್ಲಿ ಭಾರತದ ನಿರೂಪಣೆಯನ್ನು ಅನಾವರಣಗೊಳಿಸಲು ಇದು ಅನಿವಾರ್ಯವೆಂದು ಅವರು ದೂರದೃಷ್ಟಿಯಿಂದ ಯೋಚಿಸುತ್ತಿದ್ದಾರೆ. ಈ ಚಿತ್ರವು ಸ್ವಾತಂತ್ರ್ಯದ 75 ವರ್ಷಗಳ ನಂತರ ಭಾರತವು ಅಂತಿಮವಾಗಿ ತನ್ನ ಆಡಳಿತ ಪಕ್ಷವಾಗಿ ನಿಜವಾದ ಪ್ರಜಾಸತ್ತಾತ್ಮಕವಾದ ಪಕ್ಷವನ್ನು ಪಡೆದುಕೊಂಡಿದೆ ಎಂಬುದನ್ನು ತೋರಿಸಿದೆ.
ಏಳು ದಶಕಗಳಲ್ಲಿ ಈ ಹಿಂದೆ ಭಾರತದ ಪ್ರಬಲ ಆಡಳಿತ ಪಕ್ಷವಾದ ಕಾಂಗ್ರೆಸ್, ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುತ್ತಿರುವಾಗ ಹೆಚ್ಚುಹೆಚ್ಚು ನಿರಂಕುಶ ಮತ್ತು ಪ್ರಜಾಪ್ರಭುತ್ವ ವಿರೋಧಿ ಘಟಕವಾಗಿ ಮಾರ್ಪಟ್ಟಿತ್ತು. ಆ ಅವಧಿಯುದ್ದಕ್ಕೂ ಒಂದು ಕುಟುಂಬವು ಅಧಿಕಾರದ ಬಯಕೆ-ಪ್ರಾಬಲ್ಯ ಪ್ರಜ್ಞೆಯನ್ನು ಹೊಂದಿತ್ತು. ಆ ಹಂತವು ನಿರ್ಣಾಯಕವಾಗಿ ಹಾದು ಹೋಗಿದೆ ಮತ್ತು 2014ರಿಂದ ಹಾದು ಹೋಗುವ ಪ್ರತಿ ವರ್ಷವೂ, ನಿರಂಕುಶ ಮತ್ತು ಕುಟುಂಬದ (ರಾಜವಂಶದ) ರಾಜಕೀಯ ಪಕ್ಷಗಳ ಪ್ರಾಬಲ್ಯ ಮತ್ತು ಪ್ರಸ್ತುತತೆಯನ್ನು ದುರ್ಬಲಗೊಳಿಸುತ್ತಿದೆ.
ಹೊಸ ಭಾರತದ ಸಂಕೇತ
ಫೋಟೋದಲ್ಲಿರುವ ಎಲ್ಲಾ ನಾಯಕರು ‘ಹೊಸ ಭಾರತ’ವನ್ನು ಸಂಕೇತಿಸುತ್ತಾರೆ ಮತ್ತು ಪ್ರತಿನಿಧಿಸುತ್ತಾರೆ. ಇವರೆಲ್ಲರೂ ರಾಜಕೀಯೇತರ ಕುಟುಂಬಗಳಿಂದ ಬಂದವರು. ಅತ್ಯಂತ ವಿನಮ್ರ ಹಿನ್ನೆಲೆಯಿಂದ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಸ್ತಿ, ಗತವೈಭವದ ಪರಂಪರೆ ಅಥವಾ ವಂಶಪಾರಂಪರ್ಯ ಪ್ರಶ್ನೆಯೇ ಇರಲಿಲ್ಲ. ಈ ನಾಯಕರಲ್ಲಿ ಪ್ರತಿಯೊಬ್ಬರು ಸಂಪೂರ್ಣ ಕಠಿಣ ಪರಿಶ್ರಮ, ಸಿದ್ಧಾಂತದ ಬದ್ಧತೆ, ಸಾರ್ವಜನಿಕ ಸೇವೆ ಮತ್ತು ಪಕ್ಷಕ್ಕೆ ಜೀವಿತಾವಧಿಯಲ್ಲಿ ಬದ್ಧರಾಗಿರುವುದರ ಮೂಲಕ ಸಂಘಟನೆಯ ಮೆಟ್ಟಿಲುಗಳನ್ನು ಏರಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ಚುನಾವಣಾ ಚಾಣಕ್ಯ ಅಮಿತ್ ಶಾ ಆಗಮನ: ಬಿಜೆಪಿ ಹವಾ ಎಬ್ಬಿಸಲು ಸುಧಾಕರ್ ಕರೆ
ಪಕ್ಷದ ಚುಕ್ಕಾಣಿ ಹಿಡಿದಿರುವ ಪ್ರತಿಯೊಬ್ಬರೂ ಭಾರತದ ಮತ್ತು ಪಕ್ಷದ ಪ್ರಜಾಪ್ರಭುತ್ವದ ಬೇರುಗಳು ಮತ್ತು ಸ್ವಭಾವವನ್ನು ಇನ್ನಷ್ಟುಆಳಗೊಳಿಸುವ ಮೂಲಕ ಒಂದು ಗುರುತು ಬಿಟ್ಟಿದ್ದಾರೆ. ಚುನಾಯಿತ ಸಾರ್ವಜನಿಕ ಕಚೇರಿಯನ್ನು ಅಲಂಕರಿಸಿ ಎರಡು ದಶಕಗಳನ್ನು ಪೂರ್ಣಗೊಳಿಸಿರುವ ಪ್ರಧಾನಿ ಮೋದಿ, ಉತ್ತಮ ಭಾರತದ ರಾಜಕೀಯ ನಿರೂಪಣೆ ಮತ್ತು ಅದರ ಅಭಿವ್ಯಕ್ತಿ ಸಂಕೇತವಾಗಿ, ಭರವಸೆಪೂರ್ಣ ಜನನಾಯಕರಾಗಿ ರೂಪಾಂತರಗೊಂಡಿದ್ದಾರೆ.
ಸಾಮಾನ್ಯ ಕುಟುಂಬದ ಹಿನ್ನೆಲೆ
ಜೆ.ಪಿ.ನಡ್ಡಾ ಅವರು ವಿದ್ಯಾರ್ಥಿ ನಾಯಕರಾಗಿ ರಾಜಕೀಯದಲ್ಲಿ ಕಠಿಣ ಅನುಭವ ಪಡೆದು, ತಮ್ಮ ದಾರಿಯಲ್ಲಿ ಅನವರತವಾಗಿ ಹೋರಾಡಿದವರು. ಹಿಮಾಚಲ ಪ್ರದೇಶದಲ್ಲಿ ಯುವ ಸಚಿವರಾಗಿ, ನಂತರ ಕ್ರಮೇಣ ರಾಷ್ಟ್ರ ರಾಜಕಾರಣಕ್ಕೆ ತೆರಳಿದರು. ರೈತ ಕುಟುಂಬದಲ್ಲಿ ಜನಿಸಿದ ರಾಜನಾಥ್ ಸಿಂಗ್ ರಾಜಕೀಯದ ಕಡೆಗೆ ಆಕರ್ಷಿತರಾಗುವ ಮೊದಲು ಮಿರ್ಜಾಪುರದ ಸ್ಥಳೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರವನ್ನು ಕಲಿಸುತ್ತಿದ್ದರು. ಅಮಿತ್ ಶಾ ಅವರ ಪೋಷಕರು ಗಾಂಧಿವಾದಿಗಳಾಗಿದ್ದು, ತಮ್ಮ ಜೀವನವನ್ನು ಸಮಾಜದ ಅತ್ಯಂತ ತಳಮಟ್ಟದಲ್ಲಿರುವವರ ಸಬಲೀಕರಣಕ್ಕಾಗಿ ಮುಡಿಪಾಗಿಟ್ಟಿದ್ದರು. ಅಮಿತ್ ಶಾ ಅವರು ಅಹ್ಮದಾಬಾದಿನಲ್ಲಿ ಭಾಜಪ ಬೂತ್ ಅಧ್ಯಕ್ಷರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ 49ನೇ ವಯಸ್ಸಿನಲ್ಲಿ ಭಾಜಪದ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರಾದರು.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾ ಆಗಾಗ ಹೇಳುತ್ತಿದ್ದರು- ‘ನನ್ನ ನಂತರ ಬಿಜೆಪಿ ಅಧ್ಯಕ್ಷರಾಗುವುದು ಯಾರೆಂದು ಯಾರಿಗೂ ತಿಳಿದಿಲ್ಲ. ಆದರೆ ಸೋನಿಯಾ ಗಾಂಧಿ ನಂತರ ಕಾಂಗ್ರೆಸ್ ಅಧ್ಯಕ್ಷ ಯಾರಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಕುಟುಂಬ/ರಾಜವಂಶದ ಅಸ್ವಾಭಾವಿಕ ಹಿಡಿತವನ್ನು ಸಂಕೇತಿಸುತ್ತದೆ.’ ಇಂತಹ ನಿರಂಕುಶಾಧಿಕಾರದ ನಿಯಂತ್ರಣವು ದೇಶದ ಒಟ್ಟಾರೆ ಪ್ರಜಾಸತ್ತಾತ್ಮಕ, ರಾಜಕೀಯ, ಆರೋಗ್ಯ ಸೂಚ್ಯಂಕಕ್ಕೆ ಹೇಗೆ ಹಾನಿಕಾರಕ ಎಂಬುದನ್ನು ಸೂಚಿಸುತ್ತದೆ. ಜನಸಂಘದ ಕಾಲದಿಂದಲೂ ಬಿಜೆಪಿಯ ವಿಶಿಷ್ಟಲಕ್ಷಣವೆಂದರೆ ರಾಜಕೀಯ ಮತ್ತು ಸಂಘಟನಾ ಪ್ರತಿಭೆಯನ್ನು ಸೃಷ್ಟಿಸುವುದು, ರೂಪಿಸುವುದು ಮತ್ತು ಪೋಷಿಸುವುದು ಎಂದು ಕೇಳುಗರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತಮ್ಮ ಭಾಷಣಗಳ ಹೇಳುತ್ತಿದ್ದರು.
ವಂಶರಾಜಕಾರಣಕ್ಕೆ ಆಸ್ಪದವಿಲ್ಲ
ಸಂಘ ಪರಿವಾರದ ನಾಯಕರು ಸುದೀರ್ಘ ಏಳು ದಶಕಗಳ ಅವಧಿಯಲ್ಲಿ ಐದು ದಶಕಗಳನ್ನು ವಿರೋಧ ಪಕ್ಷದಲ್ಲಿ ಹೋರಾಡುತ್ತಾ ಕಳೆದರು. ಆ ಅವಧಿಯುದ್ದಕ್ಕೂ ಭಾರತದ ನಿರೂಪಣೆಯು ಏಕವರ್ಣದಲ್ಲಿ ಮತ್ತು ಏಕಪಕ್ಷೀಯವಾಗಿ ಹೊರಹೊಮ್ಮದಂತೆ ನೋಡಿಕೊಳ್ಳಲು ಪ್ರಯತ್ನಿಸಿದರು. ಜನಸಂಘದ ಅಧ್ಯಕ್ಷರನ್ನು ಗಮನಿಸುವುದಾದರೆ, ಅವರ್ಯಾರೂ ರಾಜಕೀಯ ಕುಟುಂಬಕ್ಕೆ ಸೇರಿದವರಲ್ಲ ಮತ್ತು ಅವರ ಕುಟುಂಬದ ಸದಸ್ಯರನ್ನು ಅವರೆಂದಿಗೂ ಅಧಿಕಾರದ ಸ್ಥಾನಕ್ಕೆ ಏರಿಸಲಿಲ್ಲ. ಕಾರ್ಮಿಕ-ಕೇಂದ್ರಿತ ಮತ್ತು ಸಿದ್ಧಾಂತ-ಚಾಲಿತ, ಸೃಜನಶೀಲ ರಾಜಕೀಯ ಕಾರ್ಯ-ಆಧಾರಿತ ಪಕ್ಷ, ಭಾಜಪದ ನಾಯಕತ್ವ, ಅದರ ರಾಜಕೀಯ ಮಾರ್ಗದರ್ಶಕರು ಮತ್ತು ಹಿರಿಯರು, ವರ್ಷಾನುವರ್ಷಗಳಲ್ಲಿ ಪಕ್ಷವು ಸಾವಯವವಾಗಿ ಸಕಾರಾತ್ಮಕವಾಗಿ, ಸರಾಗವಾಗಿ ಬೆಳೆದು ವಿಸ್ತರಿಸುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣದ ಮೂಲಕ ಅದರ ನೆಲೆಯನ್ನು ವಿಸ್ತರಿಸುವುದರೊಂದಿಗೆ ಅಂತಿಮವಾಗಿ ಪಕ್ಷವು ಗಟ್ಟಿಮುಟ್ಟಾದ ನಾಯಕತ್ವದ ನೆಲೆಯನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಟ್ಟಿತು. ವೈರಲ್ ಆದ ಫೋಟೋದಲ್ಲಿ ಕಂಡುಬರುವ ಈ ನಾಯಕರಲ್ಲಿ ಯಾರೊಬ್ಬರೂ ಅರ್ಹತೆಯ ಪ್ರಜ್ಞೆಯಿಂದ ಅಥವಾ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವ ಭಾವನೆಯೊಂದಿಗೆ ಸಾರ್ವಜನಿಕ ಜೀವನಕ್ಕೆ ಬಂದಿಲ್ಲ. ಒಂದು ನಿರ್ದಿಷ್ಟಕುಟುಂಬದಲ್ಲಿ ಜನಿಸಿದ ಕಾರಣವೂ ಅವರಲ್ಲಿ ಯಾರೂ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಅಧಿಕಾರ ಚಲಾಯಿಸಬೇಕಾದ ಅನಿವಾರ್ಯತೆ ಹೊಂದಿಲ್ಲ. ಅವರು ಅರ್ಹತೆ, ಸದಾ ಮತ್ತು ನಿರಂತರ ಮತ್ತು ಸಕ್ರಿಯ ಮತ್ತು ಸಮಗ್ರ ಪಾಲ್ಗೊಳ್ಳುವಿಕೆಯ ಮೂಲಕ ಈ ಜವಾಬ್ದಾರಿಯುತ ಸ್ಥಾನಗಳಿಗೆ ಬಂದಿದ್ದಾರೆ.
Sri Lanka: ದ್ವೀಪ ರಾಷ್ಟ್ರ ಲಂಕಾ ದಿವಾಳಿ: ಒಂದು ಹೊತ್ತಿನ ಊಟಕ್ಕೂ ಜನರ ಪರದಾಟ
ವಿಶ್ವಾಸಾರ್ಹ ಪ್ರಜಾಪ್ರಭುತ್ವ
ಇಂದು ಪ್ರಜಾಸತ್ತಾತ್ಮಕ ಬೇರುಗಳು ಆಳವಾಗುತ್ತಿರುವ ಏಕೈಕ ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ನೋಡಲಾಗುತ್ತಿದೆ. ಇದು ಭಾರತದ ಪ್ರಜಾಸತ್ತಾತ್ಮಕ ತಳಹದಿಯನ್ನೂ ಆಳಗೊಳಿಸುತ್ತಿದೆ. ಅಂತಹ ಆಳವಾಗುವಿಕೆಯು ಹೆಚ್ಚು ಅಧಿಕೃತ ಮತ್ತು ವಿಶ್ವಾಸಾರ್ಹ ಪ್ರಜಾಪ್ರಭುತ್ವದ ಭಾಗವಹಿಸುವಿಕೆಗೆ ವೇದಿಕೆಯನ್ನು ಸಿದ್ಧಪಡಿಸುತ್ತಿದೆ.
ಮತ್ತೊಂದೆಡೆ, ಯಾವುದೇ ರೀತಿಯ ಸೈದ್ಧಾಂತಿಕ ತಳಹದಿಯನ್ನು ಹೊಂದಿರದ ಮತ್ತು ಕುಟುಂಬೇತರ ರಾಜಕೀಯ ಪ್ರತಿಭೆಯನ್ನು ಪೋಷಿಸುವಲ್ಲಿ ಯಾವಾಗಲೂ ವಿಫಲವಾಗಿರುವ, ಭಾರತದ ಪ್ರಜಾಸತ್ತಾತ್ಮಕ ಮೂಲತತ್ವಕ್ಕೆ ನಿಷ್ಠೆಯು ಯಾವಾಗಲೂ ತಾತ್ಕಾಲಿಕವಾಗಿರುವ ಕುಟುಂಬ/ರಾಜವಂಶ ಮತ್ತು ಕುಟುಂಬ-ನಿಯಂತ್ರಿತ ಪಕ್ಷಗಳು ಭಾರತ ಗಣರಾಜ್ಯವಾದ ನಂತರ ಬಿಕ್ಕಟ್ಟುಗಳ ಸರಮಾಲೆಯೊಂದಿಗೆ ಅವನತಿಯತ್ತ ಸಾಗುತ್ತಿವೆ. ನಿರಂಕುಶ ಕುಟುಂಬಗಳು ನಡೆಸುವ ಸ್ವತಃ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಹಲವಾರು ಸಣ್ಣ ಘಟಕಗಳಂತಹ ಪಕ್ಷಗಳು ಕುಗ್ಗುತ್ತಿವೆ ಅಥವಾ ತಮ್ಮ ರಾಜ್ಯಗಳ ಮಿತಿಯನ್ನು ಮೀರಿ ತಮ್ಮ ನೆಲೆಯನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಆಂತರಿಕ ಕಲಹ, ಗುಂಪುಗಾರಿಕೆಯಿಂದಾಗಿ ದೇಶದ ಜನರ ಮನಸ್ಸಿನಿಂದ ದೂರವಾಗುತ್ತಿವೆ. ಒಂದು ನಿರೂಪಣೆಯಿಲ್ಲದ ಹಾದಿಯಲ್ಲಿ, ಗತಿ-ಮತಿ ಇಲ್ಲದ ನಾಯಕತ್ವದಲ್ಲಿ ಸಾಗುತ್ತಿವೆ.
ದಿಗ್ಗಜ ಭಾಜಪ ನಾಯಕರು
ಕುಟುಂಬ ಆಧಾರಿತ/ರಾಜವಂಶದ ಪ್ರಾಬಲ್ಯ ಮತ್ತು ನಿಯಂತ್ರಿತ ಪಕ್ಷಗಳ ಹಿಡಿತದಿಂದ ಭಾರತವನ್ನು ಮುಕ್ತಗೊಳಿಸುವ ಅಗತ್ಯದ ಬಗ್ಗೆ ಪ್ರಧಾನಿ ಮೋದಿ ಅವರು ಪದೇ ಪದೇ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಸಾರ್ವಜನಿಕ ಸಭೆಗಳಲ್ಲಿ ಮಾತನಾಡುತ್ತಿದ್ದರು. ಅನ್ಯಾಯದ ಮತ್ತು ಅಸಮ ಸವಲತ್ತುಗಳ ಕೃತಕ ರಚನೆಯನ್ನು ಕಿತ್ತುಹಾಕಲು ಪ್ರಧಾನಿ ಮೋದಿ ಅವರಿಗಿಂತ ಹೆಚ್ಚು ಯಾರೂ ಕೊಡುಗೆ ನೀಡಿಲ್ಲ. ದಶಕಗಳ ಕಾಲ, ನೆಹರೂ ಸಂಕಲ್ಪದ ವಾದ-ಸಿದ್ಧಾಂತ ಒಮ್ಮತಕ್ಕೆ ಸವಾಲಾಗಿ ನಿಂತಿದ್ದ ಜನಸಂಘದ ಸವಲತ್ತುಗಳಿಲ್ಲದ, ಕುಟುಂಬ ಹಿನ್ನಲೆಯಿಲ್ಲದ ಈ ದಿಗ್ಗಜ ಭಾಜಪ ನಾಯಕರು, ಆ ಭಾವನೆ-ಪ್ರಚೋದಕ ಛಾಯಾಚಿತ್ರದಲ್ಲಿ ಪ್ರತಿಫಲಿಸುತ್ತಿದ್ದಾರೆ. ಅವರು ಆಳವಾದ ಆತ್ಮವಿಶ್ವಾಸ, ಭರವಸೆಗಳನ್ನು ಹೊತ್ತು ಸಾಗಿ, ಭಾರತದ ಪ್ರಜಾಸತ್ತಾತ್ಮಕ ರಾಜಕೀಯ ಮೂಲತತ್ವವನ್ನು ವಿಶ್ವಾಸಾರ್ಹವಾಗಿ ಮರುಸ್ಥಾಪಿಸಿದ್ದಾರೆ.
- ಅನಿರ್ಬನ್ ಗಂಗೂಲಿ
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ
