ದಾಳಿ ಇಟ್ಟಿದೆ ಯೆಲ್ಲೋ ಫಂಗಸ್‌: ಕಪ್ಪು, ಬಿಳಿ ಶಿಲೀಂಧ್ರಕ್ಕಿಂತಲೂ ಡೇಂಜರ್!

* ಕೊರೋನಾ, ಬಿಳಿ ಹಾಗೂ ಕಪ್ಪು ಶಿಲೀಂಧ್ರದ ಬೆನ್ನಲ್ಲೇ ದೇಶದಲ್ಲಿ ಹಳದಿ ಶಿಲೀಂಧ್ರ ದಾಳಿ

* ಕಪ್ಪು, ಬಿಳಿ ಶಿಲೀಂಧ್ರಕ್ಕಿಂತಲೂ ಡೇಂಜರ್ ಈ ಯೆಲ್ಲೋ ಫಂಗಸ್

* ಇದು ದೇಹದ ಆಂತರಿಕ ಭಾಗಕ್ಕೂ ದಾಳಿ ಇಡುತ್ತೆ ಎಚ್ಚರ

Yellow fungus cases reported in UP Know why its more dangerous than black white fungus pod

ಲಕ್ನೋ(ಮೇ.24): ದೇಶದಲ್ಲಿ ಕೊರೋನಾ ದಾಳಿ ಇಟ್ಟಾಗಿನಿಂದಲೂ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ತಮ್ಮವರನ್ನು ಕಳೆದುಕೊಳ್ಳುತ್ತೇವೆಂಬ ಭಯ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಈ ಕಣ್ಣಿಗೆ ಕಾಣದ ವೈರಸ್‌ ವಿರುದ್ಧದ ಹೋರಾಟ ಮುಂದುವರೆಯುತ್ತಿದ್ದಾಗಲೇ ಮತ್ತೆ ಜನರನ್ನು ಭಯ ಭೀತರನ್ನಾಗಿಸಿದ್ದು ಬ್ಲ್ಯಾಕ್‌ ಫಂಗಸ್‌ ಎಂಬ ರೋಗ. ಆದರೆ ಈ ಕಪ್ಪು ಶಿಲೀಂಧ್ರ ಬೆನ್ನಲ್ಲೇ , ವೈಟ್‌ ಫಂಗಸ್‌ ಕೂಡಾ ದಾಳಿ ನಡೆಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈವರೆಗೂ ದೇಶದಲ್ಲಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಬ್ಲ್ಯಾಕ್ ಹಾಗೂ ವೈಟ್‌ ಫಂಗಸ್‌ ಪ್ರಕರಣಗಳು ದಾಖಲಾಗಿವೆ. ಆದರೀಗ ಇದೆಲ್ಲಾ ಸಾಲದೆಂಬಂತೆ ಇವೆಲ್ಲಕ್ಕೂ ಮೀರಿದ, ಡಬಲ್ ಡೇಂಜರಸ್ ಹಳದಿ ಶಿಲೀಂಧ್ರ ಪ್ರಕರಣ ಪತ್ತೆಯಾಗಿದ್ದು, ಆರೋಗ್ಯ ತುರ್ತು ಪರಿಸ್ಥಿತಿಯಂತಹ ವಾತಾವರಣದಲ್ಲಿ ವೈದ್ಯ ಲೋಕಕ್ಕೆ ಮತ್ತೊಂದು ಸವಾಲಾಗಿ ನಿಂತಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ದೇಶದಲ್ಲೇ ಮೊದಲ ಯೆಲ್ಲೋ ಫಂಗಸ್‌ ಪ್ರಕರಣ ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ ಇದು ಕಪ್ಪು ಹಾಗೂ ಬಿಳಿ ಶಿಲೀಂಧ್ರಕ್ಕಿಂತ ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.

ಬ್ಲಾಕ್ ಫಂಗಸ್‌ಗೆ ಸ್ಟೆರಾಯ್ಡ್ ಕಾರಣ: ಹೊಸ ಮೂರು ಸೂತ್ರ ಹೇಳಿದ ವೈದ್ಯ!

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಜ್ಞರು ಹಳದಿ ಶಿಲೀಂಧ್ರ ದೇಹದೊಳಗಿನ ಭಾಗಗಳ ಮೇಲೆ ದಾಳಿ ನಡೆಸಿ, ಹಾನಿಯುಂಟು ಮಾಡುವುದರಿಂದ ಉಳಿದೆರಡು ಫಂಗಸ್‌ಗಿಂತ ಇದು ಹೆಚ್ಚು ಭಯಾನಕ ಎಂದಿದ್ದಾರೆ. ಕಪ್ಪು ಹಾಗೂ ಬಿಳಿ ಶಿಲೀಂಧ್ರಕ್ಕಿಂತ ಭಿನ್ನವಾಗಿ ಧಾಲಿ ಮಾಡುವ ಈ ಯೆಲ್ಲೋ ಫಂಗಸ್ ದೇಹದ ಆಂತರಿಕ ಭಾಗದ ಮೇಲೆ ದಾಳಿ ನಡೆಸಿ ಕೀವು ಸೋರಿಕೆಗೆ ಕಾರಣವಾಗುತ್ತದೆ. ಅಲ್ಲದೇ ಈ ಫಂಗಸ್‌ ದೇಹದಲ್ಲಿದ್ದರೆ ಗಾಯಗಳೂ ಬೇಗ ಗುಣವಾಗುವುದಿಲ್ಲ. ಇನ್ನು ಗಂಭೀರವಾದರೆ ಅಂಗಾಂಗ ವೈಫಲ್ಯಕ್ಕೂ ಇದು ಕಾರಣವಾಗುತ್ತದೆ. ಹೀಗಾಗಿ ಯೆಲ್ಲೋ ಫಂಗಸ್‌ ಲಕ್ಷಣಗಳು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಜಾಣತನ.

ಫಂಗಸ್‌ ಹುಟ್ಟಿಕೊಳ್ಳುವುದು ಹೇಗೆ?

ಈ ಫಂಗಸ್‌ ದಾಳಿ ಇಡಬಾರದೆಂದರೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಹೀಗಾಗಿ ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಸಿಕೊಳ್ಳಿ. ಕೊಳೆತ ವಸ್ತುಗಳು ಮನೆಯ ಆಸುಪಾಸು ಇರದಂತೆ ನೋಡಿಕೊಳ್ಳಿ.  ಸ್ಟಿರಾಯ್ಡ್ ಹೆಚ್ಚಾದರೂ ಈ ಫಂಗಸ್ ದಾಳಿ ಮಾಡುತ್ತದೆ. ಇನ್ನು ಆಹಾರ ಸೇವಿಸುವಾಗಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಸ್ತುಗಳನ್ನು ಸೇವಿಸಿ. 

ಬ್ಲ್ಯಾಕ್ ಫಂಗಸ್ ದೊಡ್ಡ ರೋಗ ಅಲ್ಲ, ಹಿಂದೆಯೂ ಇತ್ತು, ಮುಂದೆಯೂ ಇರುತ್ತೆ: ಉಮೇಶ ಕತ್ತಿ

ಲಕ್ಷಣಗಳೇನು?

ಕಪ್ಪು ಹಾಗೂ ಬಿಳಿ ಫಂಗಸ್‌ ದಾಳಿ ಇಟ್ಟರೆ ಕಣ್ಣುಗಳ ಊತ, ಮುಖ ದಪ್ಪಗಾಗುವುದು, ಕಪ್ಪು ಕಲೆ, ಚರ್ಮಕ್ಕೆ ಹಾನಿ ಇಂತಹ ಲಕ್ಷಣಗಳು ಕಂಡು ಬರುತ್ತವೆ. ಆದರೆ ಈ ಹಳದಿ ಶಿಲೀಂಧ್ರದ ಲಕ್ಷಣ ಇದಕ್ಕೂ ಡೇಂಜರ್, ಇದು ದೇಹದ ಆಂತರಿಕ ಭಾಗಗಳಿಗೆ ಹಾನಿಯುಂಟು ಮಾಡುತ್ತದೆ. ಈವರೆಗೂ ಗಮನಕ್ಕೆ ಬಂದ ಲಕ್ಷಣಗಳೆಂದರೆ,

* ಆಲಸ್ಯ: ಈ ಶಿಲೀಂದ್ರ ದೇಹದೊಳಗೆವ ಹರಡಲಾರಂಭಿಸುತ್ತದೆ, ಹೀಗಾಗಿ ಇದು ನಿಮ್ಮ ಶಕ್ತಿಯನ್ನು ಕುಗ್ಗಿಸುತ್ತದೆ. ಇದು ದೇಹದಲ್ಲಿ ತೀವ್ರವಾದ ಆಯಾಸ, ಆಲಸ್ಯ, ಬಳಲಿಕೆಯುಂಟು ಮಾಡಬಹುದು.

* ಹಸಿವಾಗದಿರುವುದು: ಶಿಲೀಂಧ್ರ ದೇಹದೊಳಗೆ ವ್ಯಾಪಿಸುವುದರಿಂದ ಇದು ನಿಮ್ಮ ಜೀರ್ಣಕ್ರಿಯೆ ಮೇಲೂ ಪ್ರಭಾವ ಬೀರಬಹುದು. ಹಸಿವು ಕಡಿಮೆಯಾಗುವುದು, ಆಹಾರ ಕ್ರಮದಲ್ಲಿ ಏಕಾಏಕಿ ಬದಲಾವಣೆಯಾಗುವುದೂ ಸೇರಿದೆ.

* ತೂಕ ಕಡಿಮೆಯಾಗುವುದು: ಏಕಾಏಕಿ ದೇಹದ ತೂಕ ಕಡಿಮೆಯಾವುದು ಕೂಡಾ ಇದರ ಒಂದು ಲಕ್ಷಣವಾಗಿದೆ.

ಎರಡು ವಾರ ಒಂದೇ ಮಾಸ್ಕ್ ಬಳಕೆ, ಬ್ಲ್ಯಾಕ್‌ ಫಂಗಸ್‌ಗೆ ಆಹ್ವಾನ!

* ದೃಷ್ಟಿ ದೋಷ: ಮುಖದಲ್ಲಿ ಬದಲಾವಣೆಗಳಾಗುವುದು ಬ್ಲ್ಯಾಕ್‌ ಫಂಗಸ್ ಲಕ್ಷಣವಾಗಿದೆ. ಆದರೆ ಹಳದಿ ಶಿಲೀಂಧ್ರ ದೇಹದಲ್ಲಿ ಹರಡಿಕೊಂಡರೆ ದೃಷ್ಟಿ ದೋಷ, ಕಣ್ಣು ಕೆಂಪು ಅಥವಾ ಹಳದಿಯಾಗುವ ಸಮಸ್ಯೆ ಕಾಣುತ್ತದೆ. ಇದು ಕಣ್ಣಿನೊಳಗೆ ಕೀವು ಕೂಡಾ ಉಂಟು ಮಾಡಬಹುದು. ಅಲ್ಲದೇ ಗಾಯಗಳಿದ್ದರೆ ಬೇಗ ಗುಣಮುಖವಾಗುವುದಿಲ್ಲ. 

ಚಿಕಿತ್ಸೆ ಹೇಗೆ?

ಹಳದಿ ಅಥವಾ ಇತ್ತೀಚೆಗೆ ಸದ್ದು ಮಾಡುತ್ತಿರುವ ಕಪ್ಪು ಹಾಗೂ ಬಿಳಿ ಶಿಲೀಂಧ್ರ ಹೊಸತಲ್ಲ ಅಥವಾ ಅಪರೂಪದ ಪ್ರಕರಣಂಗಳಲ್ಲ. ಪ್ರಸ್ತುತ ಈ ಫಂಗಸ್‌ ನಿವಾರಣೆಗೆ ಆಂಟಿಫಂಗಲ್ ಮೆಡಿಸಿನ್ ಆಂಫೊಟೆರಿಸಿನ್ ಬಿ ಇಂಜೆಕ್ಷನ್ ನೀಡಲಾಗುತ್ತಿದೆ. ಇದು ಈ ಶಿಲೀಂಧ್ರ ಮಣಿಸಬಲ್ಲ ಏಕೈಕ ಔಷಧವಾಗಿದೆ. 

ಗಮನಿಸಿ: ಈ ಮೇಲಿನ ಮಾಹಿತಿಯನ್ನು ಲಭ್ಯವಾದ ಮೂಲಗಳಿಂದ ಹಾಗೂ ವರದಿಗಳ ಆಧಾರದ ಮೇಲೆ ನೀಡಲಾಗಿದೆ. ಹೀಗಾಗಿ ಚಿಕಿತ್ಸೆ ಪಡೆಯುವುದಕ್ಕೂ ಮುನ್ನ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಸೂಚನೆಯೊಂದಿಗೆ ಟ್ರೀಟ್ಮೆಂಟ್‌ ಪಡೆಯಿರಿ. 
 

Latest Videos
Follow Us:
Download App:
  • android
  • ios