ಎರಡು ವಾರ ಒಂದೇ ಮಾಸ್ಕ್ ಬಳಕೆ, ಬ್ಲ್ಯಾಕ್ ಫಂಗಸ್‌ಗೆ ಆಹ್ವಾನ!
* ದೇಶದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆ
* 2-3 ವಾರ ಒಂದೇ ಮಾಸ್ಕ್ ಬಳಕೆ ಬ್ಲ್ಯಾಕ್ ಫಂಗಸ್‌ಗೆ ಕಾರಣವಾಗಲಿದೆ
* ಶುಚಿತ್ವ ಕಾಪಾಡಿಕೊಳ್ಳದೇ ಇರುವುದು ಹಾಗೂ ತೊಳೆಯದೇ ಇರುವ ಮಾಸ್ಕ್ಗಳನ್ನು ಬಳಕೆ ಮಾಡುತ್ತಿರುವುದೇ ಸೋಂಕು ತಗುಲುವುದಕ್ಕೆ ಪ್ರಮುಖ ಕಾರಣ
ನವದೆಹಲಿ(ಮೇ.23): ದೇಶದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆ ಆಗುತ್ತಿರುವಾಗಲೇ, ಶುಚಿತ್ವ ಇಲ್ಲದ ಅಥವಾ ತೊಳೆಯದೇ ಇರುವ ಮಾಸ್ಕ್ಗಳನ್ನು 2-3 ವಾರಗಳ ಕಾಲ ಬಳಕೆ ಮಾಡುವುದು, ಗಾಳಿ ಆಡದ ಕೋಣೆಯಲ್ಲಿರುವುದು ಬ್ಲ್ಯಾಕ್ ಫಂಗಸ್ ಉಗಮಕ್ಕೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು
ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡುಬಂದ ರೋಗಿಗಳು ಶುಚಿತ್ವ ಕಾಪಾಡಿಕೊಳ್ಳದೇ ಇರುವುದು ಹಾಗೂ ತೊಳೆಯದೇ ಇರುವ ಮಾಸ್ಕ್ಗಳನ್ನು ಬಳಕೆ ಮಾಡುತ್ತಿರುವುದೇ ಸೋಂಕು ತಗುಲುವುದಕ್ಕೆ ಪ್ರಮುಖ ಕಾರಣ. ಒಂದೇ ಮಾಸ್ಕ್ ಅನ್ನು 2-3 ವಾರಗಳ ಕಾಲ ಬಳಕೆ ಮಾಡುವುದು ಬ್ಲ್ಯಾಕ್ ಫಂಗಸ್ ಅಭಿವೃದ್ಧಿ ಆಗಲು ದಾರಿ ಮಾಡಿಕೊಡಬಹುದು ಎಂದು ಏಮ್ಸ್ ಆಸ್ಪತ್ರೆ ವೈದ್ಯ ಡಾ. ಪಿ. ಶರತ್ ಚಂದ್ರ ಎಚ್ಚರಿಸಿದ್ದಾರೆ.
ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!
ಆದರೆ, ಇದಕ್ಕೆ ಯಾವುದೇ ಕ್ಲಿನಿಕಲ್ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಹಲವು ಮಂದಿ ವೈದ್ಯಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅನೇಕ ಪ್ರಕರಣಗಲ್ಲಿ ಬ್ಲ್ಯಾಕ್ ಫಂಗಸ್‌ಗೆ ತುತ್ತಾದ ರೋಗಿಗಳು, ಕೊರೋನಾ ಚಿಕಿತ್ಸೆಯ ವೇಳೆ ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ಗಳನ್ನು ಪಡೆದಕೊಳ್ಳುವ ಮೂಲಕ ತಾವಾಗಿಯೇ ಅಪಾಯವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಹೀಗಾಗಿ ಕೊರೋನಾದಿಂದ ಚೇತರಿಸಿಕೊಂಡವರಲ್ಲಿಯೂ ಬ್ಲ್ಯಾಕ್ ಫಂಗಸ್ ಕಂಡುಬರುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯ ಡಾ| ಸುರೇಶ್ ಸಿಂಗ್ ನಾರುಕಾ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona