ಕೇರಳ(ಮೇ.24): ಕೊರೋನ ವೈರಸ್ ಸೋಂಕಿತರ ಚಿಕಿತ್ಸೆ ಅತ್ಯಂತ ಸವಾಲಾಗಿ ಪರಿಣಮಿಸಿರುವ ಈ ಪರಿಸ್ಥಿತಿಯಲ್ಲಿ ಬ್ಲಾಕ್ ಫಂಗಸ್ ತೀವ್ರ ಆತಂಕ ತಂದಿದೆ. ಬ್ಲಾಕ್ ಫಂಗಸ್ ಏರಿಕೆಗೆ ಸೋಂಕಿತರ ಚಿಕಿತ್ಸೆಗೆ ಬಳಸುವ ಸ್ಟಿರಾಯ್ಡ್ ಕೂಡ ಕಾರಣವಾಗುತ್ತಿದೆ ಎಂದು ನೀತಿ ಆಯೋಗ ಸದಸ್ಯ ವಿಕೆ ಪೌಲ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಕೇರಳದ ವೈದ್ಯ ರಾಜೀವ್ ಜಯದೇವನ್ ಬ್ಲಾಕ್ ಫಂಗಸ್ ಕಾಟ ತಡೆಯಲು ಚಿಕಿತ್ಸೆಗೆ ಮೂರು ಸೂತ್ರ ಹೇಳಿದ್ದಾರೆ.

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಡಾ. ಸುಧಾಕರ್.

ಇಂದೋರ್‌ನ ಮಹಾತ್ಮಾ ಗಾಂಧಿ ಮೆಮೋರಿಯಲ್ ಮೆಡಿಕಲ್ ಕಾಲೇಜಿನ ಡಾ ವಿಪಿ ಪಾಂಡೆ ಅಧ್ಯಯನದಲ್ಲಿ ಬ್ಲಾಕ್ ಫಂಗಸ್‌ನಿಂದ ದೂರವಿರಲು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ರಾಜೀವ್ ಜಯದೇವನ್ ಇದೇ ಅಧ್ಯಯನ ವರದಿ ಆಧರಿಸಿ ಚಿಕಿತ್ಸೆ ಭಾರತ ಮುಂದಾಗ ಬೇಕು ಎಂದು ಸಲಹೆ ನೀಡಿದ್ದಾರೆ.

 

ಕೊರೋನಾ ಸೋಂಕಿತರ ಚಿಕಿತ್ಸೆಗೆ ಸ್ಟಿರಾಯ್ಡ್ ಬಳಕೆ ಮಾಡುವ ಬದಲು ಆ್ಯಂಟಿಬಯೋಟಿಕ್, ಝಿಂಕ್ ಹಾಗೂ ಸ್ಟೀಮ್ ಚಿಕಿತ್ಸೆ ಉತ್ತಮ ಎಂದಿದ್ದಾರೆ. ಇದಕ್ಕೆ ಅಧ್ಯಯನ ವರದಿಯಲ್ಲಿನ ಫಲಿತಾಂಶವನ್ನು ನೀಡಿದ್ದಾರೆ. 

ಇಂದೋರ್‌ನ 4 ಆಸ್ಪತ್ರೆಗಳಲ್ಲಿ 210 ಬ್ಲಾಕ್‌ಫಂಗಸ್ ಪ್ರಕರಣಗಳನ್ನು ಡಾ.ಪಾಂಡೆ ವಿಶ್ಲೇಷಿಸಿದ್ದಾರೆ - ಮಹಾರಾಜ ಯಶ್ವಂತರಾವ್ ಆಸ್ಪತ್ರೆ, ಶ್ರೀ ಅರಬಿಂದೋ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಾಯ್ತ್ರಮ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಬಾಂಬೆ ಆಸ್ಪತ್ರೆ ಗಳಲ್ಲಿ ಬ್ಲಾಕ್‌ಫಂಗಸ್ ಪ್ರಕರಣ ಅಧ್ಯಯನ ನಡೆಸಲಾಗಿದೆ.  ಈ ಪೈಕಿ, ಶೇಕಡಾ 14 ರಷ್ಟು ರೋಗಿಗಳ ಮೇಲೆ ಸ್ಟೀರಾಯ್ಡ್‌ ಬಳಸಿದ್ದರೆ,  ಶೇಕಡಾ 100 ರಷ್ಟು ಆ್ಯಂಟಿಬಯೋಟಿಕೆ ಬಳಸಲಾಗಿದೆ. ಇದು ಉತ್ತಮ ಫಲಿತಾಂಶ ನೀಡಿದೆ ಎಂದು ಜಯದೇವನ್ ಹೇಳಿದ್ದಾರೆ.

ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ?

ಇಟೆಲಿಯಲ್ಲಿ ನಡೆದಿರುವ ಸಂಶೋಧನೆ ಫಲಿತಾಂಶಗಳನ್ನು ಉಲ್ಲೇಖಿಸಿರುವ ಡಾ.ಜಯದೇವನ್, ಕೊರೋನಾ ವೈರಸ್ ಸೋಂಕಿತರ ಚಿಕಿತ್ಸೆ ಹಾಗೂ ಬ್ಲಾಕ್‌ಫಂಗಸ್ ಮುಕ್ತ ಆರೋಗ್ಯಕ್ಕೆ ಭಾರತ ಕೂಡ  ಕೆಲ ಅಧ್ಯಯನ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  ಇಲ್ಲಿ, ಅಜಿಥ್ರೊಮೈಸಿನ್, ಡಾಕ್ಸಿಸೈಕ್ಲಿನ್, ಕಾರ್ಬಪೆನೆಮ್‌ಗಳನ್ನು  ಆ್ಯಂಟಿಬಯೋಟಿಕ್ ಬ್ಲಾಕ್ ಫಂಗಸ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಾ ಜಯದೇವನ್ ಹೇಳಿದ್ದಾರೆ.