ಪ್ರಯಾಣದ ವೇಳೆ ನಿದ್ದೆಗೆ ಜಾರಿದ್ದೆ, ನನ್ನ ತೊಡೆಯ ಮೇಲೆ ಕೈಗಳ ಚಲಿಸುತ್ತಿರುವ ಅನುಭವಾಯಿತು. ತಕ್ಷಣ ಎಚ್ಚರವಾಗಿ ನೋಡುವಾಗ, ಆತನ ಕೈಗಳು ನನ್ನ ತೊಡೆಯ ಮೇಲಿತ್ತು. ಇದು ಮಹಿಳಾ ಟೆಕ್ಕಿ ನೀಡಿದ ದೂರಿನಲ್ಲಿರುವ ಅಂಶಗಳು. ಅಮೆರಿಕದಿಂದ ಬೆಂಗಳೂರು ಪ್ರಯಾಣಿಸಿದ ಮಹಿಳಾ ಟೆಕ್ಕಿ ತಮಗಾಗಿರುವ ಅನ್ಯಾಯವನ್ನು ಹೇಳಿಕೊಂಡಿದ್ದಾರೆ. 

ಬೆಂಗಳೂರು(ನ.09) ವಿಮಾನ ಪ್ರಯಾಣದಲ್ಲಿ ಇತ್ತೀಚೆಗೆ ಅಹಿತಕರ ಘಟನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ, ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಇದೀಗ ಫ್ರಾಂಕ್‌ಫರ್ಟ್‌-ಬೆಂಗಳೂರು ವಿಮಾನದಲ್ಲಿ ಇದೇ ರೀತಿಯ ಘಟನೆಯೊಂದು ವರದಿಯಾಗಿದೆ. ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕುರಿತು ದೂರು ಕೂಡ ದಾಖಲಾಗಿದೆ. 

ಅಮೆರಿಕ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಈ ಘಟನೆ ನಡೆದಿದೆ.ಆಂಧ್ರಪ್ರದೇಶದ ತಿರುಪತಿ ಮೂಲದ 32 ವರ್ಷದ ಮಹಿಳಾ ಟೆಕ್ಕಿ ಅಮೆರಿಕದಲ್ಲಿ ಉದ್ಯೋಗಿಯಾಗಿದ್ದಾರೆ. ರಜೆ ನಿಮಿತ್ತ ಭಾರತಕ್ಕೆ ಆಗಮಿಸಿದ್ದಾರೆ. LH0754 ಬೆಂಗಳೂರು ವಿಮಾನ ಹತ್ತಿದ ಮಹಿಳಾ ಟೆಕ್ಕಿ, 38k ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದಾರೆ. ವಿಮಾನ ಟೇಕ್ ಆಫ್ ಆದ ಕೆಲ ಹೊತ್ತಲ್ಲೇ ಮಹಿಳಾ ಟೆಕ್ಕಿ ನಿದ್ದೆಗೆ ಜಾರಿದ್ದಾರೆ.

ವಿಮಾನ ಮಿಸ್ ಆಯ್ತು ಅಂತ ರನ್‌ವೇಲಿ ಓಡಿದ ಮಹಿಳೆ: ವೀಡಿಯೋ ವೈರಲ್, ಮಹಿಳೆ ಅಂದರ್‌

ಮಹಿಳಾ ಟೆಕ್ಕಿಯ ಪಕ್ಕದಲ್ಲೇ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಶಂಕರ್‌ನಾರಾಯಣನ್ ರೆಂಗನಾಥ್, ಮಹಿಳಾ ಟೆಕ್ಕಿ ಪಕ್ಕದ 38ಜೆ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದಾರೆ. ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಮಹಿಳಾ ಟೆಕ್ಕಿ ನಿದ್ದೆಗೆ ಜಾರಿದ್ದಾರೆ. ದೂರ ಪ್ರಯಾಣದ ಕಾರಣ ಮಹಿಳಾ ಟೆಕ್ಕಿ ಗಾಢ ನಿದ್ದೆಗೆ ಜಾರಿದ್ದಾರೆ. ಆದರೆ ಗಾಢ ನಿದ್ದೆಯಲ್ಲಿ ಮಹಿಳಾ ಟೆಕ್ಕಿಗೆ ತಮ್ಮ ಮೈಯನ್ನು ಯಾರೂ ಮುಟ್ಟಿದ ಅನುಭವವಾಗಿದೆ. ತಕ್ಷಣ ನಿದ್ದೆಯಿಂದ ಎಚ್ಚರಗೊಂಡ ಮಹಿಳಾ ಟೆಕ್ಕಿಗೆ ಆಘಾತವಾಗಿದೆ. ಕಾರಣ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಶಂಕರ್‌ನಾರಾಯಣನ್ ಅವರ ಕೈಗಳು ಮಹಿಳಾ ಟೆಕ್ಕಿಯ ತೊಡೆಯ ಮೇಲಿತ್ತು. 

ನಿದ್ದೆಯಿಂದ ಎಚ್ಚೆತ್ತ ಮಹಿಳಾ ಟೆಕ್ಕಿ ಕಿರುಕುಳ ಕುರಿತು ವಾರ್ನಿಂಗ್ ನೀಡಿ ಮತ್ತೆ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಮತ್ತೆ ಇದೇ ಅನುಭವವಾಗಿದೆ. ಮತ್ತೆ ಎದ್ದು ನೋಡಿದರೆ ಶಂಕರ್‌ನಾರಾಯಣನ್ ಕೈಗಳು ಮತ್ತೆ ತೊಡೆಯ ಮೇಲಿತ್ತು. ಆಕ್ರೋಶಗೊಂಡ ಮಹಿಳಾ ಟೆಕ್ಕಿ ಕೈಗಳನ್ನು ತಳ್ಳಿ ಹಾಕಿ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾಳೆ.

ನೀಲಿ ಕಣ್ಣು ತೆಳ್ಳಗೆ ಬೆಳ್ಳಗೆ... ಆಟಗಾರರ ತಾಳಕ್ಕೆ ಕುಣಿದ ಯುನೈಟೆಡ್ ಏರ್‌ಲೈನ್ಸ್‌ : ಕೇಸ್ ಜಡಿದ ಗಗನಸಖಿಯರು..!

ವಿಮಾನ ಸಿಬ್ಬಂದಿಗಳು ಆಗಮಿಸಿ ಮಹಿಳಾ ಟೆಕ್ಕಿಗೆ ಬೇರೆ ಸೀಟಿನ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮಹಿಳಾ ಟೆಕ್ಕಿ ಲಿಖಿತ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಾಥಮಿಕ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶಂಕರ್‌ನಾರಾಯಣನ್ ಪೊಲೀಸರು ಬಂಧಿಸಿದ್ದಾರೆ. ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.