Asianet Suvarna News Asianet Suvarna News

ಚಿನ್ನದ ಅಂಗಡಿಯಲ್ಲಿ ಕಳ್ಳಿಯ ಕರಾಮತ್ತು: ವಿಡಿಯೋ ವೈರಲ್

  • ಬಟ್ಟೆ ಅಂಗಡಿಯಲ್ಲಿ ಕಳ್ಳರ ಕರಾಮತ್ತು
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
  • ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ
women stealing jewels in Jewellery Store watch viral video akb
Author
Bangalore, First Published May 18, 2022, 7:28 PM IST

ಚಿನ್ನದ ಅಂಗಡಿಯಲ್ಲಿ ಬಟ್ಟೆ ಅಂಗಡಿಯಲ್ಲಿ ಕಳ್ಳರು ಕರಾಮತ್ತು ತೋರುವ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವು ಈಗಾಗಲೇ ನೋಡಿರಬಹುದು. ಹಾಗೆಯೇ ಇಲ್ಲೊಂದು ಕಡೆ ಚಿನ್ನದಂಗಡಿಯಲ್ಲಿ ಮಹಿಳೆಯೊಬ್ಬರು ಉಪಾಯವಾಗಿ ಚಿನ್ನ ಕದಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಜ್ಯುವೆಲ್ಲರಿ ಶಾಪ್‌ಗೆ ಬಂದ ಇಬ್ಬರು ಮಹಿಳೆಯರು ಅಲ್ಲಿ ಕುಳಿತುಕೊಂಡಿದ್ದು, ಈ ವೇಳೆ ಚಿನ್ನದಂಗಡಿ ಮಾಲೀಕ ಅವರಿಗೆ ಚಿನ್ನವನ್ನು ತೋರಿಸುತ್ತಿದ್ದಾನೆ. ಈ ವೇಳೆ ಇಬ್ಬರು ಮಹಿಳೆಯರು ಚಿನ್ನಾಭರಣವನ್ನು ನೋಡುತ್ತಿದ್ದಾರೆ. ಈ ವೇಳೆ ಇವರಿಗೆ ಚಿನ್ನ ತೋರಿಸುತ್ತಿದ್ದಾತ ಬೇರೆನೋ ಕಾರಣಕ್ಕೆ ಅಲ್ಲಿಂದ ಎದ್ದು ಹೋಗುತ್ತಾನೆ. ಅಷ್ಟರಲ್ಲಿ ಈ ಇಬ್ಬರಲ್ಲಿ ಕಪ್ಪು ಬಟ್ಟೆ ಧರಿಸಿದ ಮಹಿಳೆ ಚಿನ್ನದ ಸಣ್ಣ ತುಂಡೊಂದನ್ನು ಬಾಯಿಗೆ ಹಾಕಿಕೊಳ್ಳುತ್ತಾಳೆ. ಆದರೆ ಮಹಿಳೆ ಚಿನ್ನಾಭರಣ ನುಂಗಿದಳೋ ಅಥವಾ ಅದನ್ನು ಬಾಯಿಯಲ್ಲೇ ಕಾಣದಂತೆ ಇರಿಸಿದಳೋ ಎಂಬುದು ಸ್ಪಷ್ಟವಾಗಿಲ್ಲ. 

 
 
 
 
 
 
 
 
 
 
 
 
 
 
 

A post shared by BKS 💕💗 (@memes.bks)

 

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಮೀಮ್ಸ್‌ ಬಿಕೆಎಸ್ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. 12,000 ಜನ ಈ ವಿಡಿಯೋವನ್ನು ಗಮನಿಸಿದ್ದು, ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಡಿಯೋ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವಾಗಿದೆ. ಆದರೆ ಇದು ಎಲ್ಲಿ ಯಾವಾಗ ನಡೆದಿದೆ ಎಂಬ ಬಗ್ಗೆ ಈ ಯಾವುದೇ ಉಲ್ಲೇಖವಿಲ್ಲ. 

ಮೆಜೆಸ್ಟಿಕ್‌ನಲ್ಲಿ ಕಲಬುರಗಿಯ ಲ್ಯಾಪ್‌ಟಾಪ್‌ ಕಳ್ಳನ ಕರಾಮತ್ತು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದ ಲಾಕರ್‌ನಲ್ಲಿ ಇಟ್ಟಿದ್ದ 2.80 ಕಿಲೋಗ್ರಾಂ ಚಿನ್ನಾಭರಣ ಕಳ್ಳತನವಾದ ಘಟನೆ ಇತ್ತೀಚೆಗೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಗುತ್ತಿಗೆ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಬೈಜನಾಥಪುರ (Baijnathpur) ಶಾಖೆಯಲ್ಲಿ ಈ ಕಳವು ಪ್ರಕರಣ ನಡೆದಿದೆ. ಬೈಜನಾಥಪುರ ಶಾಖೆಯಲ್ಲಿ 1.25 ಕೋಟಿ ರೂ. ಮೌಲ್ಯದ ಬಂಗಾರ ಏಪ್ರಿಲ್ 23 ರಂದೇ ಕಳವಾಗಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬ್ಯಾಂಕ್ ಉದ್ಯೋಗಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. 

ಹಿಂದೂಸ್ತಾನ್‌ ಟೈಮ್ಸ್ ವರದಿ ಪ್ರಕಾರ ಘಟನೆಗೆ ಸಂಬಂಧಿಸಿದ ಉಮೇಶ್ ಮಲ್ಲಿಕ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು  ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ (Santosh Kumar) ಹೇಳಿದ್ದಾರೆ. ಬ್ಯಾಂಕಿನಿಂದ ಕದ್ದ ಚಿನ್ನದ ಒಂದು ಭಾಗವನ್ನು ನೇಪಾಳದಲ್ಲಿ ಮಾರಾಟ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಹರ್ಸಾ ಪೊಲೀಸರು(Saharsa police) ನೇಪಾಳದ (nepal) ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಲಾಕರ್‌ನ ಕೀಗಳನ್ನು ಗುತ್ತಿಗೆ ನೌಕರರಿಗೆ ಹೇಗೆ ಹಸ್ತಾಂತರಿಸಲಾಯಿತು ಎಂಬುದು ತಿಳಿದು ಬಂದಿಲ್ಲ. ಇಬ್ಬರು ಬ್ಯಾಂಕ್ ಉದ್ಯೋಗಿಗಳು, ಕ್ಯಾಷಿಯರ್ ಮತ್ತು ಅಕೌಂಟೆಂಟ್, ಕೀಲಿಗಳನ್ನು ಇಟ್ಟುಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದರು, ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ  ಹೇಳಿದರು.

Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ  ನಮಸ್ಕಾರ ಮಾಡಿಕೊಂಡ! ವಿಡಿಯೋ

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉದ್ಯೋಗಿಗಳಾದ ಕ್ಯಾಷಿಯರ್ ಪ್ರತ್ಯುಷ್ ಕುಮಾರ್ (Pratyush Kumar)  ಮತ್ತು ಅಕೌಂಟೆಂಟ್ ಅಶೋಕ್ ಓರಾನ್  (Ashok Oraon) ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಮತ್ತು ವಿಷಯ ಬೆಳಕಿಗೆ ಬಂದ ತಕ್ಷಣ ಅವರ ವಿರುದ್ಧ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ. 

ವಿಚಿತ್ರ ಎಂದರೆ ಬ್ಯಾಂಕಿನಲ್ಲಿಟ್ಟ ಬಂಗಾರವೂ ಏಪ್ರಿಲ್ 23 ರಂದು ಕಾಣೆಯಾಗಿದೆ. ಆದರೆ  ಮೇ 9 ರಂದು ಈ ಕಳವು ಪ್ರಕರಣ ಬಯಲಾಗಿದೆ. ನಂತರ ಶಾಖೆಯ ಮ್ಯಾನೇಜರ್ ಲಲಿತ್ ಕುಮಾರ್ ಸಿನ್ಹಾ (Lalit Kumar Sinha) ಮೇ 10 ರಂದು ಬೈಜನಾಥಪುರ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಕದ್ದ ಚಿನ್ನವನ್ನು ಆರೋಪಿಗಳು ಚಿನ್ನದ ಸಾಲ ಯೋಜನೆಯಡಿಯಲ್ಲಿ ಅಡಮಾನವಿಟ್ಟಿದ್ದರು. ಕಳ್ಳತನ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಏಪ್ರಿಲ್ 23ರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಆರೋಪಿ ಮಲಿಕ್ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ. 

Follow Us:
Download App:
  • android
  • ios