Parasailing Rope Cuts Off: ತುಂಡಾದ ರೋಪ್‌... ಸಮುದ್ರಕ್ಕೆ ಬಿದ್ದ ಇಬ್ಬರು ಮಹಿಳೆಯರು

  • ಪ್ಯಾರಾಸೈಲಿಂಗ್ ರೈಡ್‌ ವೇಳೆ ತುಂಡಾದ ರೋಪ್‌
  • ಸಮುದ್ರಕ್ಕೆ ಬಿದ್ದ ಇಬ್ಬರು ಮಹಿಳೆಯರು
  • ಮುಂಬೈನ ಅಲಿಬಾಗ್‌ನಲ್ಲಿ ಅವಘಡ
Women fall into the sea after parasailing rope brake in middle of the air watch viral video akb

ಮುಂಬೈ(ಡಿ.22): ಆಕಾಶದಲ್ಲಿ ಪ್ಯಾರಾ ಸೈಲಿಂಗ್‌ ಮಾಡುತ್ತಿದ್ದ ವೇಳೆ ಪ್ಯಾರಾ ಸೈಲಿಂಗ್‌ ಉಪಕರಣದ ರೋಪ್‌( ಹಗ್ಗ) ತುಂಡಾಗಿ ಮಹಿಳೆಯರಿಬ್ಬರು ಸಮುದ್ರಕ್ಕೆ ಬಿದ್ದಂತಹ ಆಘಾತಕಾರಿ ಘಟನೆ ಮುಂಬೈನ ಅಲಿಬಾಗ್‌ (Alibaug)ನಲ್ಲಿ ನಡೆದಿದೆ. ಈ ದುರಂತದ ಭಯಾನಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯರಿಬ್ಬರು ಪ್ಯಾರಾ ಸೈಲಿಂಗ್‌ ರೈಡ್‌ಗಾಗಿ ಸಿದ್ದಗೊಂಡು, ಪ್ಯಾರಾಸೈಲಿಂಗ್ ರೈಡ್‌ (parasailing ride) ಆರಂಭಿಸುತ್ತಾರೆ. ರೈಡ್‌ ಆರಂಭವಾಗುತ್ತಿದ್ದಂತೆ ಎಲ್ಲವೂ ಸರಿ ಇದೆ ಎಂದು ಕಾಣ ಬಂತು. ಆದರೆ ತಕ್ಷಣದಲ್ಲೇ ಪ್ಯಾರಾಚೂಟ್‌ಗೆ ಜೋಡಣೆಗೊಂಡಿದ್ದ ಹಗ್ಗವೊಂದು ಕಡಿದುಕೊಂಡ ಪರಿಣಾಮ ಇಬ್ಬರು ಮಹಿಳೆಯರು ಸಮುದ್ರಕ್ಕೆ ಬಿದ್ದಿದ್ದಾರೆ. ಇದು ನೋಡುಗರಲ್ಲಿ ಭಯ ಹುಟ್ಟಿಸಿದೆ. 

ಈ ಭಯಾನಕ  ವಿಡೀಯೋವನ್ನು 4.1 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಈ ಅವಘಡದ ಬಗ್ಗೆ ಕೆಲವರು ಆಘಾತಕ್ಕೊಳಗಾಗಿದ್ದರೆ, ಮತ್ತು ಕೆಲವರು ಪ್ಯಾರಾ ಸೈಲಿಂಗ್‌ ಕ್ರೀಡೆಯನ್ನು ವ್ಯವಹಾರವಾಗಿಸಿಕೊಂಡವರು ತಮ್ಮ ಸೇವೆಗಳನ್ನು ಪ್ರವಾಸಿಗರಿಗೆ ನೀಡುವ ಮೊದಲು ಅದರಲ್ಲಿ ಪ್ರವಾಸಿಗರ ಭದ್ರತೆಗೆ ಸಂಬಂಧಿಸಿದಂತೆ  ಪರಿಶೀಲನೆಗಳನ್ನು ಏಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇತ್ತ ಸಮುದ್ರಕ್ಕೆ ಬಿದ್ದ ಮಹಿಳೆಯರನ್ನು ನಂತರ ರಕ್ಷಿಸಲಾಗಿದ್ದು, ಅವರಿಬ್ಬರು ಮುಂಬೈನ (Mumbai) ಸಾಕಿ ನಾಕಾ (Saki Naka) ನಿವಾಸಿಗಳಾಗಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ವಿಹಾರಕ್ಕಾಗಿ ಅಲಿಬಾಗ್‌ಗೆ ಬಂದಿದ್ದರು ಎಂದು ತಿಳಿದು ಬಂದಿದೆ. 

 

ಕೆಲವು ತಿಂಗಳ ಹಿಂದೆ ದಿಯು (Diu)ವಿನಲ್ಲಿ ಇಂತಹದೇ ಭಯಾನಕ ಘಟನೆಯೊಂದು ನಡೆದಿತ್ತು.  ಆಕಾಶದಲ್ಲಿ ಹಾರುತ್ತಿದ್ದಾಗಲೇ ಪ್ಯಾರಾಚೂಟ್‌ನ ಹಗ್ಗವೂ ತುಂಡಾಗಿ ದಂಪತಿಗಳಿಬ್ಬರು ಕೆಳಗೆ ಬಿದ್ದಿದ್ದರು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿತ್ತಲ್ಲದೇ. ಪ್ಯಾರಾಸೈಲಿಂಗ್‌ ನಡೆಸುವ ವೇಳೆ ಕೈಗೊಳ್ಳುವ ಭದ್ರತಾ ಕ್ರಮಗಳ ಪರಿಶೀಲನೆ ಬಗ್ಗೆ ಜನ ಪ್ರಶ್ನಿಸುವಂತಾಗಿತ್ತು. ಜುನಾಗಢ (Junagadh)ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತ ಅಜಿತ್‌ ಕ್ಯಾತಡ್‌ ( Ajit Kathad) ಹಾಗೂ ಅವರ ಪತ್ನಿ, ಶಿಕ್ಷಕಿಯಾಗಿರುವ ಸರಳಾ (Sarla) ಅವರು ದಿಯುಗೆ ಪ್ಯಾರಾಸೈಲಿಂಗ್ ರೈಡ್‌ಗೆ ತೆರಳಿದ್ದರು. 

ಜಾಲಿಯಾಗಿ ಪಾರಾಗ್ಲೈಡಿಂಗ್ ಮಾಡಿದ ನಾಯಿ: ವಿಡಿಯೋ ವೈರಲ್

ಮಾಧ್ಯಮ ವರ್ಗದ ಜನರ ಬದುಕಿನಲ್ಲಿ ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗುವ ಈ ರೋಚಕ ಅನುಭವದ ಬಗ್ಗೆ ಅವರು ತುಂಬಾ ಉತ್ಸುಕರಾಗಿದ್ದರು. ಆದರೆ ದಿಯುವಿನ ನಾಗೋವಾ ಬೀಚ್‌ (Nagoa beach)ನಿಂದ ಪ್ಯಾರಾಸೈಲಿಂಗ್ ರೈಡ್‌ ಮಾಡಲು ಏರಿದ್ದ ಅವರು ಪ್ಯಾರಾಚೂಟ್‌ನ ಹಗ್ಗ ತುಂಡಾದ ಪರಿಣಾಮ ಕೆಲವೇ ಕ್ಷಣಗಳಲ್ಲಿ ಕೆಳಗೆ ಬಿದ್ದಿದ್ದರು. ಈ ಅವಘಡದಲ್ಲಿ ಅದೃಷ್ಟವಶಾತ್ ಅಜಿತ್ ಅಥವಾ ಅವರ ಪತ್ನಿ ಸರಳಾ ಅವರಿಗೆ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದರು.  ಅವರು ಪ್ಯಾರಾಸೈಲಿಂಗ್‌ಗೂ ಮೊದಲು ಜೀವರಕ್ಷಕ ಜಾಕೆಟ್‌ಗಳನ್ನು ಧರಿಸಿದ್ದರು.  ಬೀಚ್‌ನಲ್ಲಿ ನಿಯೋಜಿಸಲಾದ ಜೀವರಕ್ಷಕರು ಈ ದಂಪತಿಯ  ರಕ್ಷಣೆ ಮಾಡಿದ್ದರು. ಜೀವನದಲ್ಲಿ ಒಮ್ಮೆ ಮಾತ್ರ ಅನೂಭವಿಸುವ ಈ ಖುಷಿಯ ಕ್ಷಣವನ್ನು ಸೆರೆ ಹಿಡಿಯುವ ಸಲುವಾಗಿ ಅಜಿತ್ ಕಥಾಡ್ ಅವರ ಹಿರಿಯ ಸಹೋದರ ರಾಕೇಶ್ (Rakesh) ಅವರು ಈ ದೃಶ್ಯವನ್ನು ರೆಕಾರ್ಡ್‌ ಮಾಡುತ್ತಿದ್ದು, ಪ್ಯಾರಾಚೂಟ್‌ನ ರೋಪ್‌ ಕಟ್ಟಾಗುತ್ತಿದ್ದಂತೆ ಭಯದಿಂದ ಜೋರಾಗಿ ಕಿರುಚಿದ್ದರು ಎಂದು ತಿಳಿದು ಬಂದಿದೆ. 

ಸ್ಕೀಯಿಂಗ್ ನಲ್ಲಿ ಇತಿಹಾಸ ಬರೆದ ಅಂಚಲ್ ತಂದೆಯಿಂದ ಮೋದಿಗೆ ಪ್ಯಾರಾಗ್ಲೈಡಿಂಗ್ ಪಾಠ

Latest Videos
Follow Us:
Download App:
  • android
  • ios