Asianet Suvarna News Asianet Suvarna News

ಜಾಲಿಯಾಗಿ ಪಾರಾಗ್ಲೈಡಿಂಗ್ ಮಾಡಿದ ನಾಯಿ: ವಿಡಿಯೋ ವೈರಲ್

  • ಒಂಚೂರು ಭಯ ಇಲ್ಲ, ಮಾಲೀಕನ ಜೊತೆ ಜಾಲಿ ಪಾರಾಗ್ಲೈಡಿಂಗ್
  • ಮುದ್ದಾದ ನಾಯಿ ಆಕಾಶದಲ್ಲಿ ಜಾಲಿಯಾಗಿ ಸುತ್ತೋ ವಿಡಿಯೋ ಎಲ್ಲೆಡೆ ವೈರಲ್
Cute dogs paragliding journey over French slopes goes viral dpl
Author
Bangalore, First Published Sep 11, 2021, 2:15 PM IST
  • Facebook
  • Twitter
  • Whatsapp

ಪ್ಯಾರಾಗ್ಲೈಡಿಂಗ್‌ನಂತಹ ಸಾಹಸ ಕ್ರೀಡೆಗಳನ್ನು ಪ್ರಯತ್ನಿಸಲು ಎಲ್ಲರಿಗೂ ಧೈರ್ಯವಿರುವುದಿಲ್ಲ. ಒಂದಷ್ಟು ಜನ ಥ್ರಿಲ್‌ನಿಂದ ಹೊರಟರೆ ಇನ್ನೊಂದಷ್ಟು ಜನ ಜೀವಮಾನದಲ್ಲಿ ಒಂದು ಸಲ ಟ್ರೈ ಮಾಡುವ ಎಂದು ಹೋಗುತ್ತಾರೆ. ಇನ್ನೂ ಕೆಲವರು ರಿಸ್ಕ್ ಬೇಡಪ್ಪಾ ಅಂತ ಸುಮ್ಮನಾಗುತ್ತಾರೆ. ಏನೇ ಆದರೂ ಮೊದಲ ಬಾರಿಗೆ ಭಯ ಅಗೋದು ಸಹಜ. ಆದರೆ ಇಲ್ಲೊಂದು ಶ್ವಾನದ ಧೈರ್ಯ ನೋಡಿ, ಮಾಲೀಕನ ಮೇಲಿನ ನಂಬಿಕೆ ನೋಡಿ.

ನಾಯಿ ತನ್ನ ಮಾಲೀಕನ ಜೊತೆ ಪಾರಾಗ್ಲೈಡಿಂಗ್ ರೋಮಾಂಚನವನ್ನು ಆನಂದಿಸುತ್ತಿದ್ದಂತೆ ನೆಟ್ಟಿಗರು ವಿಡಿಯೋ ವೈರಲ್ ಮಾಡಿದ್ದಾರೆ. ಜಾಲಿಯಾಗಿ ಗಾಳಿಯಲ್ಲಿ ಹಾರೋ ಖುಷಿ ಅನುಭವಿಸುತ್ತಿರುವ ನಾಯಿಯ ವಿಡಿಯೋ ವೈರಲ್ ಅಗಿದೆ. ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ದೊಡ್ಡದಾದ ಸಮೋಯ್ಡ್ ಗಾಳಿಯ ಮೂಲಕ ಚಲಿಸುತ್ತಿರುವುದನ್ನು ಕಾಣಬಹುದು. ಅದರ ಮಾಲೀಕರೊಂದಿಗಿನ ಅಸಾಮಾನ್ಯ ಅನುಭವದ ಪ್ರತಿ ಕ್ಷಣವನ್ನು ಎಂಜಾಯ್ ಮಾಡೋದನ್ನು ಕಾಣಬಹುದು.

ಹೊಸ ಬಟ್ಟೆ ಧರಿಸಿ ಹಬ್ಬದೂಟ ಮಾಡಿದ ಶ್ವಾನ, ವಿಡಿಯೋ ವೈರಲ್

ತನ್ನ ದೇಹದ ಸುತ್ತಲೂ ಸರಂಜಾಮುಗಳನ್ನು ಜೋಡಿಸಿ, ನಾಯಿಯು ಮನುಷ್ಯನ ಕೆಳಗೆ ಸವಾರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಫ್ರಾನ್ಸ್‌ನ ಪ್ರಸಿದ್ಧ ಪರ್ವತ ಮಾರ್ಗವಾದ ಕೋಲ್ ಡು ಗ್ರಾನನ್‌ನ ಮೇಲೆ ಹಾರುವ ಸಾಹಸ ಚಲನಚಿತ್ರ ನಿರ್ದೇಶಕ ಶಾಮ್ಸ್ ಇತ್ತೀಚೆಗೆ ತನ್ನ ನಾಯಿ ಔಕಾದೊಂದಿಗೆ ಹಾರಾಟ ನಡೆಸಿದ್ದಾರೆ. ಲಿಮಾಹ್ಲ್ ಅವರ 'ನೆವರ್ ಎಂಡಿಂಗ್ ಸ್ಟೋರಿ' ಸಂಗೀತದೊಂದಿಗೆ ಸಾಹಸಮಯ ಜೋಡಿಯ ವಿಡಿಯೊವನ್ನು ನೆಟ್ಟಿಗರು ಆನ್‌ಲೈನ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

 
 
 
 
 
 
 
 
 
 
 
 
 
 
 

A post shared by Shams (@shamsfilmmaker)

ಅವರು ಒಟ್ಟಿಗೆ ಹಾರಲು ಹೇಗೆ ಸಿದ್ಧತೆ ನಡೆಸಿದ್ದಾರೆ ಎಂಬುದನ್ನು ವಿವರಿಸಲಾಗಿದೆ. ಕೇವಲ ಒಂದು ತಿಂಗಳ ತರಬೇತಿಯ ನಂತರ ಸವಾರಿ  ಮಾಡಿದ್ದಾರೆ. ತನ್ನ ಪ್ರೊಫೈಲ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಶ್ವಾನ ಮಾಲೀಕರು. ಔಕಾಗೆ ತನ್ನ ಅತ್ಯುತ್ತಮ ಜೀವನವನ್ನು ನೀಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. ನನ್ನನ್ನು ಮತ್ತೊಮ್ಮೆ ನಗಿಸಲು ಅವನು ನನಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾನೆ. ಧನ್ಯವಾದಗಳು ಗೆಳೆಯ! ಎಂದು ಅವರು ಬರೆದಿದ್ದಾರೆ. ನಾಯಿಯ ಪ್ರೊಫೈಲ್ ಅನ್ನು ಆಧರಿಸಿ, ಆತ ಕೇವಲ ಪ್ಯಾರಾಗ್ಲೈಡಿಂಗ್‌ ಮಾತ್ರವಲ್ಲ ಇತರ ಅನೇಕ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Follow Us:
Download App:
  • android
  • ios