Asianet Suvarna News Asianet Suvarna News

ರೈಲ್ವೆ ಸ್ಟೇಷನ್‌ನಲ್ಲಿ ಹೊಯ್‌ ಕೈ : ಪೊಲೀಸ್‌ಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ

  • ಅಸಭ್ಯ ವರ್ತನೆ ಆರೋಪ
  • ಪೊಲೀಸ್ ಪೇದೆಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ
  • ಲಕ್ನೋದ ಚಾರ್‌ಬಾಗ್ ರೈಲ್ವೆ ನಿಲ್ದಾಣದಲ್ಲಿ ಘಟನೆ
Women Beats Up Police Constable With Slipper At Railway Station in Lucknow akb
Author
Bangalore, First Published Mar 19, 2022, 4:57 PM IST

ಲಕ್ನೋ(ಮಾ.19): ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದನೆಂದು ಆರೋಪಿ ಮಹಿಳೆಯೊಬ್ಬಳು ಪೊಲೀಸ್ ಪೇದೆಗೆ ಚಪ್ಪಲಿಯಿಂದ ಥಳಿಸಿದ ಘಟನೆ ಉತ್ತರಪ್ರದೇಶದ ಲಕ್ನೋದ ರೈಲ್ವೆ ಸ್ಟೇಷನ್‌ನೊಂದರಲ್ಲಿ ನಡೆದಿದೆ. ಅಲ್ಲದೇ ಪೊಲೀಸ್ ಪೇದೆ ಕೂಡ ಮಹಿಳೆಯನ್ನು ದೂರ ತಳ್ಳಿದ್ದಲ್ಲದೇ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿಯ ಮೇಲೆ ಕೂಡ ಲಾಠಿಯಿಂದ ಹಲ್ಲೆ ಮಾಡಿದ್ದಾನೆ. ಲಕ್ನೋದ ಚಾರ್‌ಬಾಗ್‌ (Char Bhag) ರೈಲ್ವೆ ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದ್ದು, ಪರಸ್ಪರ ಹೊಡೆದಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಈ ವಿಡಿಯೋದಲ್ಲಿ ಪೊಲೀಸ್ ಪೇದೆ (Police Constable), ಒಬ್ಬ ಮಹಿಳೆ ಹಾಗೂ ಪುರುಷ ಪ್ರಯಾಣಿಕನ (Passenger) ಮಧ್ಯೆ ಹೊಡೆದಾಟ ನಡೆಯುತ್ತಿದೆ. ಮಹಿಳೆ ಪೊಲೀಸ್‌ ಪೇದೆಗೆ ಚಪ್ಪಲಿಯಿಂದ ಹೊಡೆಯುತ್ತಿರುವುದು ಕೂಡ ವಿಡಿಯೋದಲ್ಲಿ ಸರೆಯಾಗಿದೆ. ಅಲ್ಲದೇ ಪೊಲೀಸ್ ಪೇದೆಯೂ ಕೂಡ ಆಕೆಯನ್ನು ದೂರ ತಳ್ಳಿದ್ದಾನೆ. ಅಲ್ಲದೇ ಪೊಲೀಸ್‌ ಪೇದೆ ವ್ಯಕ್ತಿಗೆ ಲಾಠಿಯಿಂದ ಹೊಡೆಯುತ್ತಿರುವುದು ಕಾಣಿಸುತ್ತಿದೆ. ಈ ದೃಶ್ಯವನ್ನು ಘಟನೆಯನ್ನು ನೋಡುತ್ತಿದ್ದವರು ರೆಕಾರ್ಡ್(record) ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಯ ಬಿಟ್ಟಿದ್ದು ವಿಡಿಯೋ ವೈರಲ್ ಆಗಿದೆ. 

 

ಕಳೆದ ತಿಂಗಳು ಅಸ್ಸಾಂನಲ್ಲಿ ಪೊಲೀಸರಿಬ್ಬರು ಹೆಲ್ಮೆಟ್ ಧರಿಸದಿರುವುದನ್ನು ಪ್ರಶ್ನೆ ಮಾಡಿದ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಅಸ್ಸಾಂನ ಬಸುಗಾಂವ್‌ನಲ್ಲಿ ಪತ್ರಕರ್ತರೊಬ್ಬರು ಹೆಲ್ಮೆಟ್ (Helmet) ಧರಿಸದ ಬೈಕ್‌ನಲ್ಲಿ ಬಂದ  ಪೊಲೀಸರಿಬ್ಬರನ್ನು ಪ್ರಶ್ನಿಸಿದ್ದು, ಕೋಪಗೊಂಡ ಆರಕ್ಷಕರು ಪತ್ರಕರ್ತನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ.

ಭಗವದ್ಗೀತೆ ಸುಟ್ಟು,ದೇವರ ಫೋಟೋಗಳಿಗೆ ಚಪ್ಪಲಿಯೇಟು

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪತ್ರಕರ್ತ ಜಯಂತ್ ದೇಬನಾಥ್,(Jayanth Devanath) 'ಬೈಕ್‌ನಲ್ಲಿ ಬಂದ ಇಬ್ಬರು ಪೊಲೀಸರು ಹೆಲ್ಮೆಟ್ ಧರಿಸಿರಲಿಲ್ಲ, ನನ್ನ ಏಕೈಕ ತಪ್ಪು ಎಂದರೆ ಇದು ಸಾರ್ವಜನಿಕರಿಗೆ ಏನು ಸಂದೇಶ ನೀಡುತ್ತದೆ ಎಂದು ನಾನು ಅವರನ್ನು ಕೇಳಿದೆ? ಕೂಡಲೇ ಅವರು ನನ್ನನ್ನು ನಿಂದಿಸಿದರು ಮತ್ತು ನನ್ನನ್ನು ಥಳಿಸಲಾರಂಭಿಸಿದರು. ನಾನು ಪತ್ರಕರ್ತ (Journalist) ಎಂದು ಅವರಿಗೆ ಹೇಳಿದಾಗ, ಕೋಪಗೊಂಡರು ಎಂದಿದ್ದಾರೆ.

ಅಸ್ಸಾಂ (Assam) ನಲ್ಲಿ ಪೊಲೀಸರಿಗೆ ಬಹಳಷ್ಟು ಸ್ವಾತಂತ್ರ್ಯ ನೀಡಲಾಗಿದೆ. ಅವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನೀವು ಕಾನೂನುಗಳನ್ನು ರಚಿಸುತ್ತೀರಿ ಮತ್ತು ನಿಮ್ಮ ಸ್ವಂತ ಜನರು ಅದನ್ನು ಉಲ್ಲಂಘಿಸುತ್ತಾರೆ ಎಂದು ನಾನು ಅಸ್ಸಾಂ ಸರ್ಕಾರಕ್ಕೆ ಹೇಳಲು ಬಯಸುತ್ತೇನೆ . ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದರು. ಒಂದು ವೇಳೆ ರಾತ್ರಿ  ಹೀಗಾಗಿದ್ದರೆ, ಅವರು ನನಗೆ ಗುಂಡು ಹಾರಿಸಿ ಹತ್ಯೆಗೈಯ್ಯುತ್ತಿದ್ದರು. ಪೊಲೀಸರ ವರ್ತನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಪತ್ರಕರ್ತ ತಿಳಿಸಿದ್ದಾರೆ.

ಎರಡು ಸಾಕಾಗಲ್ಲ ಅಂತಾ ಮೂರನೇ ಮದ್ವೆಗೆ ಸಜ್ಜಾದ: ಪತ್ನಿಯರ ಚಪ್ಪಲಿಯೇಟಿಗೆ ಮಂಕಾದ! 

ಏತನ್ಮಧ್ಯೆ, ಚಿರಾಂಗ್‌ನ (chirang) ಉಪ ಪೊಲೀಸ್ ಅಧೀಕ್ಷಕ (ಡಿಎಸ್‌ಪಿ) ಲಾಬಾ ಕ್ರಿ ದೇಕಾ (Laba Kri Deka) ಅವರು ಈ ವಿಷಯದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಖಚಿತಪಡಿಸಿದ್ದರು. ಇಬ್ಬರು ಕಾನ್‌ಸ್ಟೇಬಲ್‌ಗಳ ವಿರುದ್ಧ ಜಯಂತ್‌ ದೇಬನಾಥ್‌ ಅವರು ನೀಡಿರುವ ಎಫ್‌ಐಆರ್‌ ಆಧರಿಸಿ, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ, ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಬಂಧಿಸಿದ್ದೇವೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

Follow Us:
Download App:
  • android
  • ios