dog bite compensation: ನಾಯಿ ಕಚ್ಚಿ ಗಾಯಗೊಂಡಿದ್ದರಿಂದ ಮಹಿಳೆಯೊಬ್ಬಳು ಕೋರ್ಟ್ ಮೆಟ್ಟಿಲೇರಿದ್ದಾರೆ. ನಾಯಿ ಕಚ್ಚಿದ್ದರಿಂದ ಮಾನಸಿಕ ಹಾಗೂ ದೈಹಿಕ ಹಾಗೂ ಆರ್ಥಿಕ ಹಾನಿಯಾಗಿದೆ ಎಂದು ಹೇಳಿ ದೆಹಲಿ ಮುನ್ಸಿಪಾಲ್ ಕಾರ್ಪೋರೇಷನ್‌ನಿಂದ 20 ಲಕ್ಷ ರೂಪಾಯಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ನಾಯಿ ಕಚ್ಚಿದ್ದಕ್ಕೆ 20 ಲಕ್ಷ ರೂಪಾಯಿ ಪರಿಹಾರ ಕೋರಿದ ಮಹಿಳೆ
ನಾಯಿ ಕಚ್ಚಿ ಗಾಯಗೊಂಡಿದ್ದರಿಂದ ತನಗೆ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳೆಯೊಬ್ಬಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಿಯಾಂಕಾ ರೈ ಎಂಬ ಮಹಿಳೆ ತನಗೆ ನಾಯಿ ಕಚ್ಚಿದ್ದರಿಂದ ಮಾನಸಿಕ ಹಾಗೂ ದೈಹಿಕ ಹಾಗೂ ಆರ್ಥಿಕ ಹಾನಿಯಾಗಿದೆ ಎಂದು ಹೇಳಿ ದೆಹಲಿ ಮುನ್ಸಿಪಾಲ್ ಕಾರ್ಪೋರೇಷನ್‌ನಿಂದ 20 ಲಕ್ಷ ರೂಪಾಯಿ ಪರಿಹಾರ ಕೊಡಿಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ದೆಹಲಿ ಮಹಿಳೆಯಿಂದ ಹೈಕೋರ್ಟ್‌ಗೆ ಅರ್ಜಿ
ಹೈಕೋರ್ಟ್‌ಗೆ ಪ್ರಿಯಾಂಕಾ ಸಲ್ಲಿಸಿದ್ದ ಅರ್ಜಿಯ ಪ್ರಕಾರ, ಈ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರಿಯಾಂಕಾ ಅವರಿಗೆ ನಾಯಿಗಳ ಗುಂಪೊಂದು ಭೀಕರವಾಗಿ ದಾಳಿ ಮಾಡಿ ಗಾಯಗೊಳಿಸಿತ್ತು. ದಕ್ಷಿಣ ದೆಹಲಿಯ ಮಾಲ್ವಿಯಾ ನಗರದ ಖಿರ್ಕಿ ವಿಲೇಜ್ ರಸ್ತೆಯ ಬಳಿ ಬೈಕ್‌ನಲ್ಲಿ ಹಿಂಬದಿ ಸವಾರರಾಗಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.
ಹರಿಯಾಣ ಹೈಕೋರ್ಟ್ ಆಧಾರದ ಮೇಲೆ ಪರಿಹಾರಕ್ಕೆ ಮನವಿ
2023 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರೂಪಿಸಿದ ಸೂತ್ರದ ಆಧಾರದ ಮೇಲೆ ತನಗೆ ಪರಿಹಾರ ನೀಡುವಂತೆ ಪ್ರಿಯಾಂಕಾ ಕೋರಿದ್ದಾರೆ. ಪಂಜಾಬ್ ಹಾಗೂ ಹರ್ಯಾಣ ಕೋರ್ಟ್ ನಾಯಿ ಕಚ್ಚಿದರೆ ಯಾವ ರೀತಿ ಪರಿಹಾರ ನೀಡಬೇಕು ಎಂಬ ಬಗ್ಗೆ ನಿಯಮವೊಂದನ್ನು ರೂಪಿಸಿದೆ. ಸಂತ್ರಸ್ತೆಯನ್ನು ನಾಯಿ ಎಷ್ಟು ಹಲ್ಲುಗಳಿಂದ ಗಾಯಗೊಳಿಸಿವೆ ಅಂದರೆ ಸಂತ್ರಸ್ತರ ಮೇಲೆ ಎಷ್ಟು ಹಲ್ಲುಗಳ ಅಚ್ಚು ಮೂಡಿದೆ ಅಥವಾ ಗಾಯವಾಗಿದೆ ಹಾಗೂ ನಾಯಿಯೂ ಮಾಂಸವನ್ನು ಕಚ್ಚಿದೆಯೇ ಎಂಬುದರ ಆಧಾರದ ಮೇಲೆ ಪರಿಹಾರ ನೀಡುವಂತೆ ಹೇಳಿದೆ.
ಹೀಗಾಗಿ ಪ್ರಿಯಾಂಕಾ ರೈ ಅವರು ನಾಯಿ ಕಚ್ಚಿದ ನಂತರ ಆದ 12 ಸೆಂ.ಮೀ.ನಷ್ಟು ಒಟ್ಟು ಗಾಯದ ಪ್ರದೇಶಕ್ಕೆ 12 ಲಕ್ಷ ರೂ.ಗಳ ಪರಿಹಾರವನ್ನು ರೈ ಕೋರಿದ್ದಾರೆ. ಹೈಕೋರ್ಟ್ ನಿಯಮದ ಪ್ರಕಾರ 0.2 ಸೆಂ.ಮೀ. ಗಾಯಕ್ಕೆ 20,000 ರೂ ಪರಿಹಾರ ನೀಡಲಾಗುತ್ತದೆ. ಹೀಗಾಗಿ ಹೈಕೋರ್ಟ್ ನಿಗದಿಪಡಿಸಿದಂತೆ ಪ್ರತಿ ಹಲ್ಲಿನ ಗುರುತಿಗೆ 10,000 ರೂ.ಗಳಂತೆ ಹೆಚ್ಚುವರಿಯಾಗಿ 4.2 ಲಕ್ಷ ರೂ.ಗಳನ್ನು ನೀಡುವಂತೆ ಅವರು ಕೇಳಿದ್ದಾರೆ. ಏಕೆಂದರೆ ನಾಯಿಯೂ ತನ್ನ ಎಲ್ಲಾ 42 ಹಲ್ಲುಗಳನ್ನು ಬಳಸಿ ದಾಳಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ನಾಯಿ ದಾಳಿಯಿಂದ ತಾವು ಅನುಭವಿಸಿದ ಮಾನಸಿಕ ಆಘಾತಕ್ಕೆ 3.8 ಲಕ್ಷ ರೂ. ಪರಿಹಾರ ನೀಡಬೇಕೆಂದು ಅವರು ಕೇಳಿದ್ದು, ಹೀಗಾಗಿ ಅವರ ಒಟ್ಟು ಪರಿಹಾರ ಮೊತ್ತ 20 ಲಕ್ಷ ರೂ.ಗಳಿಗೆ ತಲುಪಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಏನು ಮಾಡಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಪ್ರಿಯಾಂಕಾ ಅವರ ಅರ್ಜಿಗೆ ಸಂಬಂಧಿಸಿದಂತೆ ಮೇ ತಿಂಗಳಲ್ಲಿ ಮೊದಲು ಎಂಸಿಡಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್, ಅಕ್ಟೋಬರ್ 29 ರಂದು ಈ ಬಗ್ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನಿಗಮಕ್ಕೆ ಹೆಚ್ಚಿನ ಸಮಯ ನೀಡಿತು. 2023 ರಲ್ಲಿ, ಹೈಕೋರ್ಟ್ ನ್ಯಾಯಮೂರ್ತಿ ವಿನೋದ್ ಎಸ್ ಭಾರದ್ವಾಜ್ ಅವರು ನಾಯಿ ಕಡಿತ ಪ್ರಕರಣಗಳಲ್ಲಿ ಪರಿಹಾರವನ್ನು ಲೆಕ್ಕಾಚಾರ ಮಾಡಲು ಈ ಸೂತ್ರದೊಂದಿಗೆ ಆದೇಶವನ್ನು ಅಂಗೀಕರಿಸಿದ್ದರು.
ನಾಯಿ ಕಡಿತ ಮತ್ತು ಇತರ ಪ್ರಾಣಿಗಳ ದಾಳಿಗೆ ಸಂಬಂಧಿಸಿದ 193 ರಿಟ್ ಅರ್ಜಿಗಳ ಬ್ಯಾಚ್‌ನಲ್ಲಿ ಈ ಆದೇಶವನ್ನು ನೀಡಲಾಗಿದೆ. ಹಸುಗಳು, ಹೋರಿಗಳು, ಎತ್ತುಗಳು, ಕತ್ತೆಗಳು, ನಾಯಿಗಳು, ನೀಲ್‌ಗೈ ಮತ್ತು ಎಮ್ಮೆಗಳು ಹಾಗೂ ಕಾಡು ಹಾಗೂ ಸಾಕುಪ್ರಾಣಿಗಳು ಮತ್ತು ಬೀದಿ ಪ್ರಾಣಿಗಳಂತಹ ಬೀದಿ ದನಗಳಿಂದ ಉಂಟಾಗುವ ಅಪಘಾತಗಳಿಗೆ ಪರಿಹಾರವನ್ನು ಲೆಕ್ಕಹಾಕುವಂತೆ ಹೈಕೋರ್ಟ್ ಪಂಜಾಬ್, ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೇ ಸಂತ್ರಸ್ತರು ಅರ್ಜಿ ಸಲ್ಲಿಸಿದ್ದ ನಾಲ್ಕು ತಿಂಗಳ ಒಳಗೆ ತೀರ್ಪು ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಹೆಂಡ್ತಿ ಹಾಗೂ ಗೆಳತಿ : ಒಂದೇ ಕಡೆ ಇಬ್ಬರ ಕತೆ ಮುಗಿಸಿದ ಫೈಸಲ್
ಇದನ್ನೂ ಓದಿ: ಬಿಹಾರ ಚುನಾವಣೆ: ಆರ್‌ಜೆಡಿ ಕಾರ್ಯಕರ್ತರ ಗೂಂಡಾಗಿರಿ: ಡಿಸಿಎಂ ಬೆಂಗಾವಲು ಪಡೆ ಮೇಲೆ ದಾಳಿ
