ನಾಸಿಕ್‌ನಲ್ಲಿ ಬೀದಿನಾಯಿಯೊಂದು ಚಿರತೆಯನ್ನು ಬೇಟೆಯಾಡಿ 300 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಈ ಅಪರೂಪದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾಸಿಕ್: ಬೀದಿ ನಾಯಿಯೊಂದು ಚಿರತೆಯನ್ನು ಬೇಟೆಯಾಡಿ ಎಳೆದಾಡಿದ ಘಟನೆಯೊಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಾಳಿ ಮಾಡಲು ಬಂದ ಚಿರತೆಯನ್ನು ಸೋಲಿಸಿದ ಬೀದಿನಾಯಿ ಅದನ್ನು ಸುಮಾರು 300 ಮೀಟರ್‌ವರೆಗೆ ಎಳೆದುಕೊಂಡು ಹೋದಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ನಾಸಿಕ್‌ನ ನಿಫಡ್‌ನಲ್ಲಿ ಈ ಘಟನೆ ನಡೆದಿದೆ.
ಚಿರತೆ ಮೇಲೆ ಬೀದಿನಾಯಿಯ ಪವರ್‌ಫುಲ್ ಅಟ್ಯಾಕ್
ಸಾಮಾನ್ಯವಾಗಿ ಚಿರತೆಗಳು ಸಾಕಷ್ಟು ಬಲಿಷ್ಠ ಪ್ರಾಣಿಗಳು, ಬೃಹತ್ ಗಾತ್ರದ ಮೊಸಳೆಗಳನ್ನೇ ಬೇಟೆಯಾಡುವಂತಹ ಶಕ್ತಿ ಸಾಮರ್ಥ್ಯವನ್ನು ಹೊಂದಿರುವಂತಹ ಪ್ರಾಣಿಗಳು ಬರೀ ಬೇಟೆಯಾಡುವುದಲ್ಲದೇ ತನ್ನ ಬೇಟೆಯನ್ನು ಬಾಯಿಯಿಂದ ಕಚ್ಚಿಕೊಂಡು ಮರದ ತುದಿಯವರೆಗೂ ವೇಗವಾಗಿ ಸಾಗಬಲ್ಲಂತಹ ಶಕ್ತಿ ಸಾಮರ್ಥ್ಯವನ್ನು ಹೊಂದಿರುವಂತಹ ಪ್ರಾಣಿ. ಬೀದಿನಾಯಿಗಳನ್ನು ಕೂಡ ಇದು ಕ್ಷಣಮಾತ್ರದಲ್ಲಿ ಬೇಟೆಯಾಡಿ ಎಲ್ಲೂ ಸಿಗದಂತೆ ಓಡಿ ಹೋಗಬಹುದು. ಇಂತಹ ಶಕ್ತಿಶಾಲಿ ಚಿರತೆಯನ್ನೇ ಬೀದಿನಾಯಿಯೊಂದು ಬಾಯಲ್ಲಿ ಕಚ್ಚಿ ಎಳೆದುಕೊಂಡು ಹೋಗಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ಚಿರತೆಯ 300 ಮೀಟರ್ ದೂರ ಎಳೆದೊಯ್ದ ಬೀದಿನಾಯಿ
ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ಘಟನೆ ಈ ವಾರದ ಆರಂಭದಲ್ಲಿ ನಡೆದಿದೆ. ತನ್ನ ಏರಿಯಾಗೆ ಬಂದ ಚಿರತೆಯನ್ನು ನೋಡಿ ಬೀದಿನಾಯೊಂದು ಆಕ್ರಮಣಕಾರಿಯಾದ ದಾಳಿ ಮಾಡಿದ್ದು, ಶಕ್ತಿಶಾಲಿ ಚಿರತೆಯನ್ನೇ ಕೆಳಗೆ ಬೀಳಿಸಿ ಸುಮಾರು 300 ಕಿಲೋ ಮೀಟರ್‌ವರೆಗೆ ಎಳೆದುಕೊಂಡು ಹೋಗಿದೆ. ಆದರೆ ಶ್ವಾನದ ಈ ಹಠಾತ್ ದಾಳಿಯನ್ನು ನಿರೀಕ್ಷೆ ಮಾಡದ ಚಿರತೆಗೆ ಅದೇನಾಯ್ತೋ ಏನು ನಾಯಿಯನ್ನು ಬೇಟೆಯಾಡಲಾಗದೇ ಪರಾರಿಯಾಗಿದೆ. ಆದರೆ ಅದಕ್ಕೂ ಮೊದಲು ಚಿರತೆಯನ್ನು ನಾಯಿ ಎಳೆದುಕೊಂಡು ಹೋಗಿ ಬಲವಾದ ಹೋರಾಟ ನೀಡಿದ್ದು ಅಚ್ಚರಿ ಮೂಡಿಸಿದೆ.
ನಾಯಿ ದಾಳಿಯಿಂದ ಗಾಯಗೊಂಡಿದ್ದ ಚಿರತೆ ನಂತರ ಸಮೀಪದ ಹೊಲವೊಂದರಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಈ ಚಿರತೆಗೆ ವೈದ್ಯಕೀಯ ಚಿಕಿತ್ಸೆ ಬೇಕೆ ಎಂಬ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳು ಖಚಿತಪಡಿಸಿಲ್ಲ. ಆದರೆ ಅಲ್ಲಿನ ಸ್ಥಳೀಯ ಸಾಕುಪ್ರಾಣಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ.
ಶ್ವಾನ ಪ್ರಿಯರೇ, ನಾಯಿಗಾಗಿ ಠೇವಣಿ ಇಡಿ: ಸುಪ್ರೀಂ ಆದೇಶ
ಈ ನಡುವೆ ಬೀದಿನಾಯಿಗಳ ಸಮಸ್ಯೆಯನ್ನು ಇಡೀ ದೇಶಕ್ಕೆ ಅನ್ವಯವಾಗುವಂತೆ ಇತ್ಯರ್ಥಪಡಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಈ ಮೂಲಕ, ಸಮಸ್ಯೆಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಅನ್ವಯಿಸುವಂತೆ ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಬೀದಿ ನಾಯಿಗಳು ಮತ್ತು ಅವುಗಳಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಹಾಗೂ ವಿಚಾರಣೆ ಬಾಕಿ ಇರುವ ದೂರುಗಳನ್ನು ಸುಪ್ರೀಂಕೋರ್ಟ್‌ಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಶುಕ್ರವಾರ ಸೂಚಿಸಿದೆ.
ಮತ್ತೊಂದೆಡೆ ಬೀದಿ ನಾಯಿಗಳ ವಿಚಾರದಲ್ಲಿ ಕೋರ್ಟ್ ಬಾಗಿಲು ತಟ್ಟಿದ್ದ ಎಲ್ಲಾ ಶ್ವಾನಪ್ರಿಯರು ಮತ್ತು ನಾಯಿಗಳ ಬಗ್ಗೆ ಕಾಳಜಿ ಹೊಂದಿರುವ ಎನ್‌ಜಿಒಗಳು ಕ್ರಮವಾಗಿ 25,000 ರು. ಮತ್ತು 2 ಲಕ್ಷ ರು. ಠೇವಣಿ ಇಡಬೇಕು. ಆ ಮೊತ್ತವನ್ನು ನಾಯಿಗಳಿಗಾಗಿ ಮೂಲಸೌಕರ್ಯ ನಿರ್ಮಾಣಕ್ಕೆ ಬಳಸಲಾಗುವುದು. ಹಣ ಜಮೆ ಮಾಡದೇ ಇದ್ದರೆ ಈ ವಿಷಯದಲ್ಲಿ ವಾದಿಸುವ ಯಾವುದೇ ಅಧಿಕಾರ ಇರುವುದಿಲ್ಲ ಅವರಿಗೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಹೇಳಿದೆ.
ಪ್ರಾಣಿ ಪ್ರಿಯರು ಇಚ್ಛಿಸಿದರೆ ಬೀದಿನಾಯಿಗಳನ್ನು ದತ್ತು ಪಡೆಯಬಹುದು ಎಂದ ಕೋರ್ಟ್, ಅಂತಹವರು ಸಂಬಂಧಪಟ್ಟ ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಒಮ್ಮೆ ದತ್ತು ಪಡೆದ ನಾಯಿಗಳು ಬೀದಿಗಳಿಗೆ ಹಿಂತಿರುಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯ ಎಂದು ಹೇಳಿತು. ನಮ್ಮಆದೇಶದಂತೆ, ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಕ್ಕೆ ಯಾರಾದರು ಅಡ್ಡಿ ಮಾಡಿದಲ್ಲಿ, ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಕ್ಕಾಗಿ ಅಂತಹವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದೂ ಪೀಠ ಎಚ್ಚರಿಸಿತು.
ಇದನ್ನೂ ಓದಿ: ತಮ್ಮನ ಬೆಂಬಲಕ್ಕೆ ನಿಂತ ಪುಟ್ಟ ಬಾಲಕಿ: ಈ ಅಕ್ಕ ತಮ್ಮನ ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಬೇರೆಯವರ ಮಕ್ಕಳ ಬಾವಿಗೆ ತಳ್ಳಿ ಐಷಾರಾಮಿ ಮನೆ ಕಟ್ಕೊಂಡಿದ್ದ ಡ್ರಗ್ ಪೆಡ್ಲರ್ ಮನೆ ಧ್ವಂಸ
