ಪಾಕ್ ಪ್ರಜೆಗೆ ಭಾರತದ ಸರ್ಕಾರಿ ಶಾಲೆಯಲ್ಲಿ ಉದ್ಯೋಗ, ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿದೆ ಈಕೆ ಭಾರತೀಯ ಪ್ರಜೆಯಲ್ಲ, ಪಾಕಿಸ್ತಾನಿ ಪ್ರಜೆ ಅನ್ನೋದು ಬಯಲಾಗುತ್ತಿದ್ದಂತೆ ಅಮಾನತುಗೊಂಡಿದ್ದಾರೆ.

ಲಖನೌ (ಜ.09) ಕಳೆದ ಮೂರ ದಶಕಗಳಿಗೂ ಹೆಚ್ಚು ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆ ಇನ್ನೇನು ನಿವೃತ್ತಿಯಾಗಬೇಕು ಅನ್ನೋವಷ್ಟರಲ್ಲಿ ಅಮಾನತುಗೊಂಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿಯಾಗಿದೆ. ಕಾರಣ ಮೂರುವರೇ ದಶಕಗಳ ಕಾಲ ಸೇವೆ ಸಲ್ಲಿಸಿದ ಈಕೆ ಭಾರತದ ಪ್ರಜೆ ಅಲ್ಲ, ಪಾಕಿಸ್ತಾನ ಪ್ರಜೆ ಅನ್ನೋ ಅಸಲಿ ಮಾಹಿತಿ ಬಯಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಈ ಮಹಿಳೆ ಇದೀಗ ನಿವೃತ್ತಿ ಅಂಚಿನಲ್ಲಿ ಅಮಾನತುಗೊಂಡು ಘಟನೆ ಉತ್ತರ ಪ್ರದೇಶದ ರಾಂಪುರದ ಅಜೀಮ್ ನಗರದಲ್ಲಿ ನಡೆದಿದೆ.

ಮಹಿರಾ ಅಕ್ತರ್ ಅಲಿಯಾಸ ಫರ್ಜಾನಾ

ಈಕೆಯ ಹೆಸರು ಮಹಿರಾ ಅಕ್ತರ್ ಅಲಿಯಾಸ್ ಫರ್ಜಾನಾ. ಉತ್ತರ ಪ್ರದೇಶದ ಅಜೀಮ್ ನಗರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿರಾ ಅಕ್ತರ್ ಇದೀಗ ತನಿಖೆ ಎದುರಿಸುತ್ತಿದ್ದಾರೆ. ಈಕೆ 1979 ರಲ್ಲಿ ಪಾಕಿಸ್ತಾನ ವ್ಯಕ್ತಿಯನ್ನು ಮದುವೆಯಾಗಿ ಲಾಹೋರ್‌ಗೆ ಸ್ಥಳಾಂತರಗೊಂಡದ್ದರು. ಅದೇ ವರ್ಷ ಪಾಕಿಸ್ತಾನ ನಾಗರೀಕತ್ವ ಪಡೆದಿದ್ದಾರೆ. ಸರಿಸುಮಾರು 6 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ನೆಲೆಸಿದ್ದ ಈಕೆ ಪಾಕಿಸ್ತಾನ ಗಂಡನಿಗೆ ಡಿವೋರ್ಸ್ ನೀಡಿ ಭಾರತಕ್ಕೆ ಮರಳಿದ್ದಾಳೆ. 1985ರಲ್ಲಿ ಭಾರತಕ್ಕೆ ಮರಳಿದ ಮಹಿರಾ ಅಕ್ತರ್ ಫರ್ಜನಾ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಬಳಿಕ ಕೆಲ ವರ್ಷದಲ್ಲೇ ಉತ್ತರ ಪ್ರದೇಶದ ಕುಮ್ಹಾರಿಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.

ಮಹಿರಾ ಅಕ್ತರ್‌ಗೆ ಭಾರತದ ಅದಿಕೃತ ನಾಗರೀಕತ್ವ ಸಿಕ್ಕಿಲ್ಲ. ಆದರೆ ಈಕೆಯ ಬಳಿಕ ನಕಲಿ ಮತದಾನದ ಚೀಟಿ, ರೇಶನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳು ಇವೆ. ಜೊತೆಗೆ ಪಾಕಿಸ್ತಾನಗ ನಾಗರೀಕತ್ವ ಕೂಡ ಇದೆ. ಭಾರತದ ದಾಖಲೆಗಳನ್ನು ನಕಲಿ ಸೃಷ್ಟಿಸಿ ಉತ್ತರ ಪ್ರದೇಶದ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾಳೆ. ಕಳೆದ ಮೂರೆವರೆ ದಶಕಗಳಿಂದ ಅಜಿಮ್ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ತನಿಖೆ ನಡೆಸಿದಾಗ ಸ್ಫೋಟಕ ಮಾಹಿತಿ ಬಯಲು

ಅಜೀಮ್ ನಗರ ಪೊಲೀಸ್ ಠಾಣೆಯಲ್ಲಿ ಮಹಿರಾ ಅಕ್ತರ್ ವಿರುದ್ದ ದೂರು ದಾಖಲಾಗಿತ್ತು. ಹೀಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮಹಿರಾ ಅಕ್ತರ್ ಹಲವು ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಗಿಟ್ಟಿಸಿಕೊಂಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಪೊಲೀಸರ ಭಾರತೀಯ ನ್ಯಾಯ ಸಂಹಿತೆ 318(4), 336, 338 ಹಾಗೂ 340ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಾಲೆಯಿಂದ ಅಮಾನತು

ನಿವೃತ್ತಿ ಅಂಚಿನಲ್ಲಿದ್ದ ಮಹಿರಾ ಅಕ್ತರ್ ಅಲಿಯಾಸ ಫರ್ಜಾನ ವಿರುದ್ದ ತನಿಖೆ ತೀವ್ರಗೊಲ್ಳುತ್ತಿದ್ದಂತೆ ಶಾಲೆಯಿಂದ ಅಮಾನತುಗೊಂಡಿದ್ದಾರೆ. ಇದೀಗ ಹೆಚ್ಚಿನ ತನಿಖೆ ಮುಂದುವರಿದಿದೆ. ಇಷ್ಟೇ ಅಲ್ಲ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಹಲವರ ಮೇಲು ಅನುಮಾನ ಮೂಡಿದೆ. ಹೀಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಲು ಮುಂದಾಗಿದ್ದಾರೆ.