ಅಕ್ರಮ ಸಂಬಂಧ ಬಯಲಿಗೆಳೆದ ಮಹಿಳೆಗೆ ಎಂಜಲು ನೆಕ್ಕಿಸಿದ ಗ್ರಾಮಸ್ಥರು; ಮುಂದಾಗಿದ್ದು ರಣರೋಚಕ!

ಪಕ್ಕದ ಮನೆ ಮಹಿಳೆಯೊಬ್ಬಳು ತನ್ನ ಗಂಡನೊಂದಿಗೆ ಪಕ್ಕದ ಮನೆಯವಳು ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪ ಮಾಡಿದ್ದಕ್ಕೆ, ಆಕೆಗೆ ಗ್ರಾಮಸ್ಥರು ಪಂಚಾಯಿತಿ ಸೇರಿಸಿ ಬೇರೆಯವರ ಎಂಜಲು ನೆಕ್ಕಿಸಿದ್ದರು. ಮುಂದೆ ನಡೆದಿದ್ದೇ ರಣರೋಚಕ..

Woman Found Murdered in Begusarai Pond After Spat Over Spitting Incident sat

ಬಿಹಾರ (ಡಿ. 24): ಮಹಿಳೆಯೊಬ್ಬಳು ತನ್ನ ಗಂಡನೊಂದಿಗೆ ಪಕ್ಕದ ಮನೆಯವಳು ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪ ಮಾಡಿದ್ದಕ್ಕೆ, ಆಕೆಗೆ ಗ್ರಾಮಸ್ಥರು ಪಂಚಾಯಿತಿ ಸೇರಿಸಿ ಬೇರೆಯವರ ಎಂಜಲು ನೆಕ್ಕಿಸಿದ್ದರು. ಈ ಘಟನೆಗೆ ಸೇಡು ಸಾಧಿಸಿದ ಮಹಿಳೆ ಮುಂದೆ ಮಾಡಿದ್ದೇ ರಣರೋಚಕವಾಗಿದೆ.

ಬಿಹಾರದ ಸೀತಾರಾಮ್‌ಪುರ ಗ್ರಾಮದ ದಿಯಾರ ಪ್ರದೇಶದಲ್ಲಿರುವ ಕೆರೆಯೊಂದರಲ್ಲಿ ಚೀಲದಲ್ಲಿ ಹಾಸಿಗೆಯಲ್ಲಿ ಸುತ್ತಿ ಬೆತ್ತಲೆ ಸ್ಥಿತಿಯಲ್ಲಿರುವ 35 ವರ್ಷದ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಶವದ ಜೊತೆಗೆ ಚೀಲದಲ್ಲಿ ಇಟ್ಟಿಗೆ-ಕಲ್ಲುಗಳನ್ನು ತುಂಬಿ ನೀರಿಗೆ ಎಸೆಯಲಾಗಿತ್ತು. ಈ ಪ್ರಕರಣ ಮತಿಹಾನಿ ಠಾಣಾ ವ್ಯಾಪ್ತಿಯ ಸೀತಾರಾಮ್‌ಪುರ ಗ್ರಾಮದ ದಿಯಾರ ಪ್ರದೇಶದ್ದಾಗಿದೆ.

ಮೃತ ಮಹಿಳೆ ಸೀತಾರಾಮ್‌ಪುರ ಗ್ರಾಮದ 10ನೇ ವಾರ್ಡ್ ನಿವಾಸಿ ಜಂಗಿ ಮಹತೋ ಅವರ ಪತ್ನಿ ಸೀತಾ ದೇವಿ (35) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಗಂಡ ಪಕ್ಕದ ಮನೆಯ ಶಂಕರ್ ಮಹತೋ ಮತ್ತು ಆತನ ಪತ್ನಿ ತಬ್ಬು ದೇವಿ ಮೇಲೆ ಕೊಲೆಯ ಆರೋಪ ಹೊರಿಸಿದ್ದಾನೆ. ಶಂಕರ್ ಮಹತೋ ಜೊತೆ ನನ್ನ ಪತ್ನಿ ಸೀತಾ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದಾನೆ. ಇದರ ಬಗ್ಗೆ ಕಳೆದ ಒಂದು ತಿಂಗಳಿನಿಂದ ಜಗಳ ನಡೆಯುತ್ತಿತ್ತು. ಒಂದು ತಿಂಗಳ ಹಿಂದೆ ಶಂಕರ್ ಮಹತೋನ ಪತ್ನಿ ಇವರಿಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಳು. ಹೀಗಾಗಿ, ಟಬುದೇವಿ ತನ್ನ ಗಂಡ  ಶಂಕರ್ ಮಹತೋ ಜೊತೆಗೆ ಜಗಳ ಮಾಡಿದ್ದಳು.

ಇದಾದ ನಂತರ ಟಬು ದೇವಿ, ಜಂಗೀ ಮಹತೋನ ಹೆಂಡತಿ ಸೀತಾ ದೇವಿ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿದ್ದರು. ಇದಾದ ನಂತರ ಎರಡು ಕುಟುಂಬಗಳ ನಡುವಿನ ಜಗಳದ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಪಂಚಾಯಿತಿ ನಡೆದಿತ್ತು. ಈ ವೇಳೆ ಸೀತಾದೇವಿ ವಿರುದ್ಧ ಟಬು ದೇವಿ ಸುಳ್ಳು ಆರೋಪ ಮಾಡುತ್ತಿದ್ದಾಳೆಂದು ಗ್ರಾಮಸ್ಥರು ಛೀಮಾರಿ ಹಾಕಿಸಿದ್ದರು. ಜೊತೆಗೆ, ನೀನು ತಪ್ಪು ಮಾಡಿದ್ದೀಯ, ಹೀಗಾಗಿ ಸೀತಾ ದೇವಿ ಉಗುಳಿದ ಎಂಜಲನ್ನು ನೆಕ್ಕಬೇಕು ಎಂದು ಟಬು ದೇವಿಯಿಂದ ಸೀತಾದೇವಿ ಎಂಜಲನ್ನು ನೆಕ್ಕಿಸಿದ್ದರು. ಈ ಘಟನೆಯ ಬಗ್ಗೆ ತೀವ್ರ ಕುಪಿತಗೊಂಡಿದ್ದ ಟಬುದೇವಿ ನಿನ್ನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಳು.

ಇದನ್ನೂ ಓದಿ: ಏನೇ ಚಿನ್ನ ನಿನ್ನ ಗುನ್ನಾ: ಶ್ವೇತಾ ಗೌಡ ಕೊಟ್ಟ ಹಣ, ಚಿನ್ನಾಭರಣ ವಾಪಸ್ ಕೊಟ್ಟ ವರ್ತೂರು ಪ್ರಕಾಶ್!

ಇದಾದ ನಂತರ ಡಿ.9ರಂದು ರಾತ್ರಿ ಶೌಚಕ್ಕೆಂದು ಹೊರಗೆ ಹೋದ ಹೆಂಡತಿ ವಾಪಸ್ ಬರಲಿಲ್ಲ. ಎಲ್ಲೆಡೆ ಹುಡುಜಿದರೂ ಪತ್ತೆಯಾಗದ ಕಾರಣ ಮತಿಹಾನಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದನು. ಈ ಘಟನೆಯ ಬೆನ್ನಲ್ಲಿಯೇ ಸೀತಾ ದೇವಿ ಸ್ಥಳೀಯ ಕೆರೆಯ ದಡದಲ್ಲಿ ಶವವಾಗಿ ಪತ್ತೆ ಆಗಿದ್ದಾಳೆ. ಆಕೆಯನ್ನು ಯಾರೋ ದುಷ್ಕರ್ಮಿಗಳು ಬೆತ್ತೆಲೆಗೊಳಿಸಿ ಭೀಕರವಾಗಿ ಹತ್ಯೆ ಮಾಡಿ, ಗೋಣಿ ಚೀಲದಲ್ಲಿ ತುಂಬಿ ಅದರೊಳಗೆ ಕಲ್ಲು ಹಾಗೂ ಮಣ್ಣು ತುಂಬಿ ಕೆರೆಗೆ ಎಸೆದಿದ್ದರು. ಆದರೂ, ಶವದೊಳಗೆ ಗಾಳಿ ತುಂಬಿಕೊಂಡು ಕೆರೆಯ ದಡಕ್ಕೆ ಬಂದಿದೆ.  ಎಲ್ಲ ಘಟನೆಯ ಹಿನ್ನೆಲೆಯಲ್ಲಿ ಶಂಕರ್ ಮಹತೋ ಮತ್ತು ಆತನ ಪತ್ನಿ ಟಬುದೇವಿ ಇಬ್ಬರೂ ಸೇರಿ ನನ್ನ ಹೆಂಡತಿ ಸೀತಾದೇವಿಯನ್ನು ಕೊಲೆ ಮಾಡಿ ಕೆರೆಗೆ ಎಸೆದಿದ್ದಾರೆ ಎಂದು ಮೃತ ಮಹಿಳೆಯ ಪತಿ ಜಂಗೀ ಮಹತೋ ಆರೋಪ ಮಾಡಿದ್ದಾನೆ. 

ಇದನ್ನೂ ಓದಿ: ಹೆಂಡತಿಯನ್ನು ಓದಿಸಿ ಕೆಲಸಕ್ಕೆ ಕಳುಹಿಸಿದ್ದೇ ತಪ್ಪಾಯ್ತು; ಜೀವ ತೊರೆದ ಬೆಂಗಳೂರು ಲಾರಿ ಉದ್ಯಮಿ!

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಎಸ್ಪಿ ಮನೀಶ್ ಅವರ ನಿರ್ದೇಶನದಂತೆ ಸದರ್ ಡಿಎಸ್ಪಿ-2 ಭಾಸ್ಕರ್ ರಂಜನ್ ನೇತೃತ್ವದಲ್ಲಿ ಮತಿಹಾನಿ ಠಾಣೆಯ ಪೊಲೀಸ್ ತಂಡ ಘಟನೆಯ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದೆ. ಪೊಲೀಸ್ ತಂಡ ಘಟನಾ ಸ್ಥಳದಲ್ಲಿ ಎಫ್‌ಎಸ್‌ಎಲ್ ತಂಡದಿಂದ ತನಿಖೆ ನಡೆಸಿದೆ. ಮಹಿಳೆಯನ್ನು ಕೊಲೆ ಮಾಡಿ ಶವವನ್ನು ಮರೆಮಾಚುವ ಉದ್ದೇಶದಿಂದ ದಿಯಾರ ಪ್ರದೇಶದ ಕೆರೆಯಲ್ಲಿ ಎಸೆಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಆದರೆ, ಮಹಿಳೆಯ ಕೊಲೆ ಏಕೆ ನಡೆಯಿತು ಎಂಬುದು ತನಿಖೆಯ ನಂತರವೇ ತಿಳಿಯುತ್ತದೆ.

Latest Videos
Follow Us:
Download App:
  • android
  • ios