ಗೆಳತಿಯ ಹುಟ್ಟುಹಬ್ಬಕ್ಕೆ ಜೊಮ್ಯಾಟೋದಲ್ಲಿ ಕೇಕ್ ಆರ್ಡರ್ ಮಾಡಿದ ಯುವತಿಗೆ ಶಾಕ್ ಕಾದಿತ್ತು. ಡೆಲಿವರಿ ಸೂಚನೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಸಿಬ್ಬಂದಿ, 'ಸೆಕ್ಯುರಿಟಿ ಬಳಿ ಬಿಡಿ' ಎಂಬ ಸಂದೇಶವನ್ನೇ ಕೇಕ್ ಮೇಲೆ ಬರೆದಿದ್ದಾರೆ. ಈ ತಮಾಷೆಯ ಘಟನೆಯ ವೀಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.
ಆನ್‌ಲೈನ್ ಗ್ರಾಹಕನ ಸೂಚನೆಯನ್ನು ತಪ್ಪಾಗಿ ಅರ್ಥೈಸಿದ ಜೊಮ್ಯಾಟೋ: ಕೇಕ್ ಮೇಲೆ ಬರೆದಿದ್ದೇನು?
ಇದು ಆನ್‌ಲೈನ್ ಯುಗ ಮಹಾನಗರಗಳಲ್ಲಿ ಸೂಜಿ ದಾರಗಳಿಂದ ಹಿಡಿದು ತಿನ್ನುವ ಆಹಾರ ಸೋಪು ಶ್ಯಾಂಪುವಿನವರೆಗೂ ಪ್ರತಿಯೊಂದು ವಸ್ತುಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಕೈಯಲ್ಲೊಂದು ಮೊಬೈಲ್ ಖಾತೆಯಲ್ಲಿ ಹಣವೊಂದಿದ್ದರೆ ಎಲ್ಲವೂ ಕಾಲ್ಬುಡಕ್ಕೆ ಬಂದು ಬೀಳುತ್ತದೆ. ಅದರೆ ಈ ಆನ್‌ಲೈನ್ ಖರೀದಿ ವೇಳೆ ಹಲವೊಂದು ಎಡವಟ್ಟುಗಳು ನಡೆಯುತ್ತವೆ. ಕೆಲವೊಮ್ಮೆ ನೀವು ಬಯಸಿದ ವಸ್ತು ನೀವು ಬಯಸಿದಂತೆಯೇ ನೋಡುವುದಕ್ಕೆ ಇರುವುದಿಲ್ಲ, ಅಥವಾ ಬೇರಾವುದೋ ಬಂದು ಬಿಡುತ್ತದೆ. ಹೀಗೆಲ್ಲಾ ಆನ್‌ಲೈನ್ ಶಾಪಿಂಗ್ ಮಾಡುವಾಗ ಹಲವು ಎಡವಟ್ಟುಗಳು ಆಗುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಒಬ್ಬರು ಯುವತಿ ತಮ್ಮ ಗೆಳತಿಯ ಹುಟ್ಟುಹಬ್ಬಕ್ಕಾಗಿ ಆನ್‌ಲೈನ್‌ನಲ್ಲಿ ಬರ್ತ್‌ಡೇ ಕೇಕ್ ಆರ್ಡರ್ ಮಾಡಿದ್ದಾರೆ. ಹೀಗೆ ಆನ್‌ಲೈನ್‌ನಲ್ಲಿ ಬರ್ತ್‌ಡೇ ಕೇಕ್ ಆರ್ಡರ್ ಮಾಡುವಾಗ ಗ್ರಾಹಕರು ಹಲವು ಸೂಚನೆಗಳನ್ನು ನೀಡುತ್ತಾರೆ ಕೇಕ್ ಹಾಗಿರಲಿ. ಹೀಗಿರಲಿ, ಹೆಸರು ಹೀಗಿರಬೇಕು, ಕೇಕ್ ಜೊತೆ ಅಲಂಕಾರಿಕ ವಸ್ತುಗಳು ಬೇಕು, ಕ್ಯಾಂಡಲ್ ಬೇಕು ಮ್ಯಾಚ್‌ಬಾಕ್ಸ್ ಬೇಕು ಹೀಗೆ ಗ್ರಾಹಕರು ಬರ್ತ್‌ಡೇಗೆ ಸೆಲೆಬ್ರೇಷನ್‌ಗೆ ಬೇಕಾಗುವ ಎಲ್ಲಾ ವಸ್ತುಗಳನ್ನು ಆನ್‌ಲೈನ್ ಮೂಲಕವೇ ಆರ್ಡರ್ ಮಾಡಿ ಪಡೆಯುತ್ತಾರೆ. ಹಾಗೆಯೇ ಇಲ್ಲಿ ಕೇಕ್ ಆರ್ಡರ್ ಮಾಡುವ ವೇಳೆ ಕೇಕ್ ಡೆಲಿವರಿ ವೇಳೆ ಅದನ್ನು ಗೇಟ್ ಸೆಕ್ಯೂರಿಟಿ ಬಳಿ ಇಟ್ಟು ಹೋಗುವಂತೆ ಗ್ರಾಹಕರು ಸೂಚಿಸಿದ್ದಾರೆ.
ಆದರೆ ಆಗಿದ್ದೇನು?
ಆದರೆ ಗ್ರಾಹಕರ ಈ ಸೂಚನೆಯನ್ನು ಆನ್‌ಲೈನ್ ಕೇಕ್ ಡೆಲಿವರಿ ಸಂಸ್ಥೆ ತಪ್ಪಾಗಿ ಅರ್ಥೈಸಿಕೊಂಡಿದ್ದು, ಕೇಕ್ ಮೇಲೆ ಬರ್ತ್‌ಡೇ ಗರ್ಲ್ ಹೆಸರು ಹಾಕುವ ಬದಲು ಈ ಸೂಚನೆಯನ್ನೇ ಕೇಕ್ ಮೇಲೆ ಬರೆಯಲಾಗಿದೆ. leave at security ಎಂದು ಕೇಕ್ ಮೇಲೆ ಬರೆಯಲಾಗಿದೆ. ಇತ್ತ ಮನೆಗೆ ಕೇಕ್ ತಂದು ಇನ್ನೇನು ಬರ್ತ್‌ಡೇ ಆಚರಿಸುವ ಹುಡುಗಿಯ ಕರೆಸಿ ಕೇಕ್‌ನ್ನು ಬಾಕ್ಸ್‌ನಿಂದ ತೆರೆಯಬೇಕು ಅಷ್ಟರಲ್ಲಿ ಕೇಕ್ ಮೇಲೆ ಇದ್ದ ಬರಹವನ್ನು ನೋಡಿ ಕೇಕ್ ತರಿಸಿದವರು ಶಾಕ್ ಆಗಿದ್ದಾರೆ. ಈ ಘಟನೆಯ ವೀಡಿಯೋವನ್ನು ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ.
nakshatra_4844 ಎಂಬ ಇನ್ಸ್ಟಾ ಖಾತೆಯನ್ನು ಹೊಂದಿರುವ ಯುವತಿಯೊಬ್ಬರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಹೀಗೆ ಬರೆದುಕೊಂಡಿದ್ದಾರೆ. ನನ್ನ ಬರ್ತ್‌ಡೇಗಾಗಿ ನನ್ನ ಗೆಳೆಯ ಝೋಮ್ಯಾಟೋದಿಂದ ಕೇಕ್ ಆರ್ಡರ್ ಮಾಡಿದ್ದರು, ಆದರೆ ಕೇಕ್ ಡೆಲಿವರಿ ಬಾಯ್ ಕೇಕ್ ಮೇಲೆ ಹೀಗೆ ಬರೆದಿದ್ದರು ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಅವರ ಸ್ನೇಹಿತರೆಲ್ಲರೂ ಕೇಕ್ ಮೇಲೆ ಬರೆದಿರುವುದನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಇದನ್ನೂ ಓದಿ: 8 ಕೋಟಿ ಮೌಲ್ಯದ ಆನ್‌ಲೈನ್ ವಂಚನೆ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಾಜಿ ಐಜಿ
ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಅನೇಕರು ನಗುತ್ತಲೇ ಅವರಿಗೆ ಶುಭ ಹಾರೈಸಿದ್ದರೆ ಮತ್ತೆ ಕೆಲವರು ಝೋಮ್ಯಾಟೋದ ಈ ಹಿಂದಿನ ಎಡವಟ್ಟನ್ನು ಒಬ್ಬರು ನೆನಪಿಸಿಕೊಂಡಿದ್ದಾರೆ. ನಾನು ಹ್ಯಾಪಿ ಬರ್ತ್‌ಡೇ ಮಾಮ್ ಎಂದು ಬರೆದಿದ್ದೆ. ಅವರು ರೈಟ್ ಹ್ಯಾಪಿ ಬರ್ತ್‌ಡೇ ಎಂದು ಕೇಕ್ ಮೇಲೆ ಬರೆದಿದ್ದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಹ್ಯಾಂಡಲ್ ವಿತ್ ಕೇರ್ ಎಂದು ಬರೆದರೆ ಅವರು ಕೇಕ್ ಮೇಲೆ ಹಾಗೆಯೇ ಬರೆದಿದ್ದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: ಬೆಡ್ ಮೇಲೆ ಮಲಗಿದ್ದ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ: ವೀಡಿಯೋ ವೈರಲ್: ಆಸ್ಪತ್ರೆ ಮುಂದೆ ಪ್ರತಿಭಟನೆ


