ವಿಜ್ಞಾನದ ಅದ್ಭುತವೆಂದೇ ಪರಿಗಣಿಸಲಾಗುವ ವಿದ್ಯುತ್ ಅನ್ನು ತಂತಿಯಿಲ್ಲದೆ ಬರೀ ಗಾಳಿಯಲ್ಲಿ ಪ್ರವಹಿಸುವ ಇನ್ನೊಂದು ಅದ್ಭುತ ತಂತ್ರಜ್ಞಾನವನ್ನು ಫಿನ್ಲೆಂಡ್ ಅವಿಷ್ಕರಿಸಿದೆ. ಇದರಡಿಯಲ್ಲಿ ಅಲ್ಟ್ರಾಸೌಂಡ್‌ನಿಂದ ವಿದ್ಯುತ್ ಸಂಚಾರಕ್ಕೆ ಮಾರ್ಗವನ್ನು ಸೃಷ್ಟಿಸಲಾಗುವುದು
ಹೆಲ್ಸಿಂಕಿ: ವಿಜ್ಞಾನದ ಅದ್ಭುತವೆಂದೇ ಪರಿಗಣಿಸಲಾಗುವ ವಿದ್ಯುತ್ ಅನ್ನು ತಂತಿಯಿಲ್ಲದೆ ಬರೀ ಗಾಳಿಯಲ್ಲಿ ಪ್ರವಹಿಸುವ ಇನ್ನೊಂದು ಅದ್ಭುತ ತಂತ್ರಜ್ಞಾನವನ್ನು ಫಿನ್ಲೆಂಡ್ ಅವಿಷ್ಕರಿಸಿದೆ.
ಇದರಡಿಯಲ್ಲಿ ಅಲ್ಟ್ರಾಸೌಂಡ್‌ನಿಂದ ವಿದ್ಯುತ್ ಸಂಚಾರಕ್ಕೆ ಮಾರ್ಗವನ್ನು ಸೃಷ್ಟಿಸಲಾಗುವುದು. ಬಳಿಕ ಕರೆಂಟ್ ಅನ್ನು ಲೇಸರ್ ಬೆಳಕಿನ ರೂಪಕ್ಕೆ ಪರಿವರ್ತಿಸಿ ಅದರ ಮೂಲಕ ಸರಬರಾಜು ಮಾಡಲಾಗುತ್ತದೆ. ಈ ತಂತ್ರಜ್ಞಾನವನ್ನು ಹೆಲ್ಸಿಂಕಿ ಮತ್ತು ಔಲು ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ್ದು, ಇದಿನ್ನೂ ಪರೀಕ್ಷಾ ಹಂತದಲ್ಲಿದೆ.
ಕೆಲಸ ಹೇಗೆ?:
ಅಲ್ಟ್ರಾಸೌಂಡ್ (ಮಾನವ ಬರಿ ಕಿವಿಯಿಂದ ಕೇಳಲಾರದ ಸದ್ದು) ತರಂಗಗಳ ಮೂಲಕ ಗಾಳಿಯಲ್ಲಿ ಅದೃಷ್ಯ ಪಥವನ್ನು ರಚಿಸಲಾಗುತ್ತದೆ. ಅತ್ತ ವಿದ್ಯುತ್ ಅನ್ನು ಲೇಸರ್ ಕಿರಣವಾಗಿ ಪರಿವರ್ತಿಸಿ, ಅಲ್ಟ್ರಾಸೌಂಡ್ ಸೃಷ್ಟಿಸಿದ ಮಾರ್ಗದಲ್ಲಿ ಹರಿಬಿಡಲಾಗುತ್ತದೆ. ಇದನ್ನು ಇನ್ನೊಂದು ಬದಿಯಲ್ಲಿರುವ ಸಾಧನ ಅದನ್ನು ಗ್ರಹಿಸಿ, ವಿದ್ಯುತ್ ಆಗಿ ಮರುಪರಿವರ್ತಿಸುತ್ತದೆ. ಇದನ್ನು ಅಣುವಿದ್ಯುತ್ ಸ್ಥಾವರಗಳಿರುವ ಪ್ರದೇಶಗಳಲ್ಲಿ ಬಳಸಿದರೂ ಅಪಾಯವಿಲ್ಲ. ಕಾರಣ, ಇಲ್ಲಿ ವಿದ್ಯುತ್ ತನ್ನ ಅಸಲಿ ರೂಪದಲ್ಲಿ ಯಾವುದೇ ಲೋಹದ ಮೂಲಕ ಸಾಗುತ್ತಿರುವುದಿಲ್ಲ.
ತಂತ್ರಜ್ಞಾನದಿಂದಾಗಿ ತಂತಿ, ಬ್ಯಾಟರಿಗಳ ಅವಶ್ಯಕತೆಯೂ ಇಲ್ಲ
ಅತ್ತ ಈ ತಂತ್ರಜ್ಞಾನದಿಂದಾಗಿ ತಂತಿ, ಬ್ಯಾಟರಿಗಳ ಅವಶ್ಯಕತೆಯೂ ಇಲ್ಲವಾಗುತ್ತದೆ. ಆದರೆ ಸದ್ಯ ಇದು ಕಡಿಮೆ ಅಂತರದಲ್ಲಿ ಬಳಸಲಷ್ಟೇ ಸೂಕ್ತವಾಗಿದೆ.


