ರಾಯಚೂರಿನ ಮಂಡಲಗೇರಾ ಗ್ರಾಮದ ಭಾಗ್ಯಮ್ಮ ಎಂಬುವವರಿಗೆ 'ಸೌಭಾಗ್ಯ ಯೋಜನೆ' ಅಡಿ ಪ್ರತಿ ತಿಂಗಳು ₹250 ಬರುತ್ತಿದ್ದ ವಿದ್ಯುತ್ ಬಿಲ್, ಇದೀಗ ₹9,855 ಬಂದಿದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳು, ಹಿಂದಿನ ಬಾಕಿ ಅಥವಾ ಅಂದಾಜು ಲೆಕ್ಕಾಚಾರ ಕಾರಣವಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ರಾಯಚೂರು (ನ.15): ಗ್ರಾಮೀಣ ಜನರಿಗೆ ವಿದ್ಯುತ್ ಸಂಪರ್ಕ ನೀಡುವ 'ಸೌಭಾಗ್ಯ ಯೋಜನೆ'ಯ ಅನುಗ್ರಹದಿಂದ ಪ್ರತಿ ತಿಂಗಳು ಕೇವಲ ₹250 ಬಿಲ್ ಬರುತ್ತಿದ್ದ ಭಾಗ್ಯಮ್ಮ ಬಸನಗೌಡ್ ಅವರ ಮನೆಗೆ ಇದೀಗ ₹9,855ರ ದೊಡ್ಡ ಮೊತ್ತದ ಬಿಲ್ ಬಂದಿದ್ದು, ಅವರು ಆಘಾತಕ್ಕೊಳಗಾಗಿದ್ದಾರೆ.
ಸೌಭಾಗ್ಯ ಯೋಜನೆ'ಯಡಿ ತಿಂಗಳ 250 ಬರುತ್ತಿದ್ದ ಬಿಲ್:
ರಾಯಚೂರು ತಾಲೂಕಿನ ಮಂಡಲಗೇರಾ ಗ್ರಾಮದ ನಿವಾಸಿಯಾದ ಭಾಗ್ಯಮ್ಮ, ಈ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆದು ಸಣ್ಣ ಆದಾಯದಿಂದ 250 ರೂಪಾಯಿ ಬಿಲ್ ಪಾವತಿಸುತ್ತಿದ್ದರು. ಆದರೆ ಈ ತಿಂಗಳು ಬಂದ ಬಿಲ್ ಕಂಡು ಶಾಕ್ ಆಗಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಬಿಲ್ ಬಂದಿದ್ದು ಹೇಗೆ? ಎಂಬ ಪ್ರಶ್ನೆ ಎದ್ದಿದೆ.
ಬಿಲ್ ಹೆಚ್ಚಾಗಲು ಕಾರಣವೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಸ್ಕಾಂ ಗ್ರಾಮೀಣ ಭಾಗದ ಇಇ ನಟರಾಜ್ ಹಿಂದೆ ಅನೇಕ ಗ್ರಾಹಕರು ಈ ರೀತಿ ಸಂಪರ್ಕ ಪಡೆದಿದ್ದು, ಬಿಲ್ ಪಾವತಿಸಿಲ್ಲ. ಅಂತಹ ಪ್ರಕರಣಗಳಲ್ಲಿ ಹೆಚ್ಚು ಬಿಲ್ ಬಂದಿರುವ ಸಾಧ್ಯಗಳಿರುತ್ತವೆ ಎಂದಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ದೂರುಗಳು ಹೆಚ್ಚಾಗುತ್ತಿವೆ, ಏಕೆಂದರೆ ಗ್ರಾಹಕರು ಮೆಟರ್ ರೀಡಿಂಗ್‌ಗೆ ಸಹಕರಿಸದಿದ್ದರೆ ಅಂದಾಜು ಲೆಕ್ಕಾಚಾರದಿಂದ ಬಿಲ್ ಹೆಚ್ಚಾಗುತ್ತದೆ. ಈ ಘಟನೆಯಿಂದ ಗ್ರಾಮೀಣ ಗ್ರಾಹಕರಲ್ಲಿ ಆತಂಕ ಹರಡಿದೆ. ಸರ್ಕಾರಿ ಯೋಜನೆಗಳು ಬಡವರಿಗೆ ಆಸರೆಯಾಗಬೇಕು, ಆದರೆ ತಪ್ಪು ಲೆಕ್ಕಾಚಾರದಿಂದ ಅವರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ತ್ವರಿತ ಪರಿಶೀಲನೆ ಮಾಡಿ, ಬಿಲ್‌ನ್ನು ಸರಿಪಡಿಸುವುದು ಅಗತ್ಯ.


