Asianet Suvarna News Asianet Suvarna News

Goa Assembly Election ಟಿಕೆಟ್‌ ನೀಡದಿದ್ದರೆ ಕಠಿಣ ನಿರ್ಧಾರ : ಮನೋಹರ್‌ ಪರಿಕ್ಕರ್‌ ಪುತ್ರ ಎಚ್ಚರಿಕೆ!

*ಮುಂದಿನ ವರ್ಷ ಗೋವಾ ವಿಧಾನಸಭೆ ಚುನಾವಣೆ
*ಪಣಜಿಯಿಂದ ಟಿಕೇಟ್‌ ನೀಡದಿದ್ದರೆ ಕಠಿಣ ನಿರ್ಧಾರ
*ಸಮಯ ಬಂದಾಗ, ನಾನು ಜನರ ಮಾತನ್ನು ಕೇಳುತ್ತೇನೆ
*ಪಕ್ಷವು ನನಗೆ ಟಿಕೆಟ್ ನೀಡುತ್ತದೆ. ನನಗೆ ವಿಶ್ವಾಸವಿದೆ
*ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪುತ್ರನ ಹೇಳಿಕೆ

will take Hard decisions if denied Panaji BJP ticket in Goa assembly election said  Manohar Parrikar son Utpal Parrikar mnj
Author
Bengaluru, First Published Nov 18, 2021, 4:14 PM IST

ಗೋವಾ(ನ.18): ಮುಂದಿನ ವರ್ಷದ ಗೋವಾ ವಿಧಾನಸಭೆ ಚುನಾವಣೆ (Goa Assembly Elections) ನಡೆಯಲಿವೆ. ಈ ಬೆನ್ನಲ್ಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿಯನ್ನು ಆರಂಭಿಸಿವೆ. ಈ ಮಧ್ಯೆ ಚುನಾವಣೆ ಟಿಕೇಟ್‌ ನೀಡದಿದ್ದರೆ ಕಠಿಣ  ನಿರ್ಧಾರ ಕೈಗೊಳ್ಳುತ್ತೇನೆ ಎಂದು ಗೋವಾ ಬಿಜೆಪಿ (Goa BJP) ನಾಯಕರೊಬ್ಬರು ಎಚ್ಚರಿಸಿದ್ದಾರೆ. ಪಣಜಿಯಿಂದ  (Panaji) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಡಳಿತಾರೂಢ ಬಿಜೆಪಿ (BJP) ಟಿಕೆಟ್ ನಿರಾಕರಿಸಿದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ (Manohar Parrikar) ಅವರ ಪುತ್ರ ಉತ್ಪಲ್ ಪರಿಕ್ಕರ್ (Utpal Parrikar) ಅವರು ಗುರುವಾರ (ನ.18) ಎಚ್ಚರಿಸಿದ್ದಾರೆ. ವಿಧಾನಸಭೆ ಟಿಕೆಟ್‌ (Ticket) ಸಿಗುತ್ತದೆ ಎಂಬ ವಿಶ್ವಾಸವದ್ದರೂ ಉತ್ಪಲ್‌ ಈ  ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮನೋಹರ್ ಪರಿಕ್ಕರ್ 25 ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಪಕ್ಷವು ನನಗೆ ಟಿಕೆಟ್ ನೀಡುತ್ತದೆ ಎಂದು ವಿಶ್ವಾಸವಿದೆ!

"ನಾನು ಪಣಜಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಯಸುತ್ತೇನೆ ಎಂದು ಈಗಾಗಲೇ ಪಕ್ಷಕ್ಕೆ (Party) ಹೇಳಿದ್ದೇನೆ ಮತ್ತು ಪಕ್ಷವು ನನಗೆ ಟಿಕೆಟ್ ನೀಡುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಉತ್ಪಲ್ ಪರಿಕ್ಕರ್ ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ  ಕಾಂಗ್ರೆಸ್‌ (Congress) ಟಿಕೇಟ್‌ನಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿ ಜಯ ಸಾಧಿಸಿದ್ದ ಅಟಾನಾಸಿಯೊ ಮಾನ್ಸೆರೆಟ್ (Atanasio Monserrate),  ಇತರ ಒಂಬತ್ತು ಶಾಸಕರೊಂದಿಗೆ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು (Defected). 

ತೃಣಮೂಲ ಕಾಂಗ್ರೆಸ್‌ನಿಂದ ಗೋವಾ ಚುನಾವಣೆಯಲ್ಲಿ ಸ್ಪರ್ಧೆ ಇಂಗಿತ

ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಟಿಕೆಟ್ ನಿರಾಕರಿಸಿದರೆ ಏನು ಮಾಡುತ್ತೀರಿ  ಎಂದು ವಿವರಿಸಲು ಕೇಳಿದಾಗ ಅದರ ಬಗ್ಗೆ ಮಾತನಾಡಲು ಇದು ಸಮಯವಲ್ಲ ಎಂದು ಉತ್ಪಲ್ ಪರಿಕ್ಕರ್ ಹೇಳಿದರು. "ನಾನು ಈಗ ಅದರ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಮನೋಹರ್ ಪರಿಕ್ಕರ್ ಅವರ ಜೀವನದಲ್ಲಿ ಯಾವುದೂ ಸುಲಭವಾಗಿ ಸಿಗಲಿಲ್ಲ. ಅದೇ ರೀತಿ ನಾನು ಕೂಡ ನನಗೆ ಬೇಕಾದ್ದಕ್ಕೆ ಕೆಲಸ ಮಾಡಬೇಕು. ನಾನು ಕೆಲವು ಕಠಿಣ ನಿರ್ಧಾರಗಳನ್ನು (Hard Decesions) ತೆಗೆದುಕೊಳ್ಳುವಂತೆ ಪರಿಸ್ಥಿತಿ ಒತ್ತಾಯಿಸಬಹುದು ಮತ್ತು ಈ ನಿರ್ಧಾರಗಳನ್ನು ತೆಗೆದುಕೊಳ್ಳಲು ನನಗೆ ಅಗತ್ಯವಿರುವ ಶಕ್ತಿಗಾಗಿ ಪ್ರಾರ್ಥಿಸುತ್ತೇನೆ! ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಾಗ, ನಾನು ಜನರ (People) ಮಾತನ್ನು ಕೇಳುತ್ತೇನೆ. ನಾನು ಪಕ್ಷಕ್ಕೆ ಹೇಳಿದ್ದೇನೆ ಮತ್ತು ಪಕ್ಷವು ನನಗೆ ಟಿಕೆಟ್ ನೀಡುತ್ತದೆ. ನನಗೆ ವಿಶ್ವಾಸವಿದೆ." ಎಂದು ಹೇಳಿದ್ದಾರೆ.

ಉಪಚುನಾವಣೆಯ ಬಿಜೆಪಿ ಟಿಕೆಟ್‌ಗಾಗಿ ಒತ್ತಾಯಿಸಿದ್ದ ಬೆಂಬಲಿಗರು!

2019 ರಲ್ಲಿ ಅವರ ತಂದೆ ನಿಧನರಾದಾಗ ಉಪಚುನಾವಣೆಯ (By election) ಬಿಜೆಪಿ ಟಿಕೆಟ್‌ಗಾಗಿ  ಅವರ ಬೆಂಬಲಿಗರು ಒತ್ತಾಯಿಸಿದ್ದರು. ಆದರೆ ಟಿಕೆಟ್ ಅಂತಿಮವಾಗಿ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದ ಪರಿಕ್ಕರ್ ಅವರು ಮತ್ತೆ ಗೋವಾ ಮುಖ್ಯಮಂತ್ರಿಯಾಗಿ (cheif Minister) ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಮರಳಿದಾಗ ಮನೋಹರ್‌ಗೆ ಅವಕಾಶ ನೀಡಲು ರಾಜೀನಾಮೆ ನೀಡಿದ್ದ ಸಿದ್ಧಾರ್ಥ್ ಕುಂಕಾಲಿಯನ್ಕರ್ (Siddharth Kuncalienkar) ಅವರಿಗೆ ನೀಡಲಾಗಿತ್ತು. ಸರ್ಕಾರ ರಚನೆಯಲ್ಲಿ ಬಿಜೆಪಿಗೆ ಬೆಂಬಲ ನೀಡಲು ಬಿಜೆಪಿ ಮಿತ್ರಪಕ್ಷಗಳು ಮನೋಹರ್ ಪರಿಕ್ಕರ್ ಹಿಂದಿರಗಬೇಕೆಂದು ಹೇಳಿದ್ದವು.

ಗೋವಾಗೆ ರಾಹುಲ್‌, ದೀದಿ ‘ರಾಜಕೀಯ ಟೂರಿಸಂ’: ತೇಜಸ್ವಿ ವ್ಯಂಗ್ಯ!

ಸಚಿವ ಫ್ರಾನ್ಸಿಸ್ ಡಿಸೋಜಾ (Francis D’Souza ) ನಿಧನದ ನಂತರ ಬಿಜೆಪಿಯು ಜೋಶುವಾ ಅವರಿಗೆ ಮಾಪುಸಾದಿಂದ (Mapusa) ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಪಕ್ಷದ ಟಿಕೆಟ್ ಬಗ್ಗೆ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಡೆ (Sadanand Shet Tanavade) ಹೇಳಿದ್ದಾರೆ. ಪಕ್ಷದ ಟಿಕೆಟ್‌ಗಾಗಿ ಯಾರು ಬೇಕಾದರೂ ಹಕ್ಕು ಚಲಾಯಿಸಬಹುದು. ನಿರ್ಧಾರವನ್ನು ಅಂತಿಮವಾಗಿ ಪಕ್ಷದ ಸಂಸದೀಯ ಮಂಡಳಿ (Parliamentary board) ತೆಗೆದುಕೊಳ್ಳುತ್ತದೆ ಮತ್ತು. ಇತ್ತೀಚೆಗೆ ನಾನು ಅವರನ್ನು (ಉತ್ಪಲ್ ಪರಿಕ್ಕರ್) ಭೇಟಿಯಾಗಿದ್ದೆ, ನಾವು ಟಿಕೆಟ್ ಬಗ್ಗೆ ಏನನ್ನೂ ಚರ್ಚಿಸಲಿಲ್ಲ ಎಂದು ತನವಡೆ ಹೇಳಿದರು.

Follow Us:
Download App:
  • android
  • ios