ತೃಣಮೂಲ ಕಾಂಗ್ರೆಸ್‌ನಿಂದ ಗೋವಾ ಚುನಾವಣೆಯಲ್ಲಿ ಸ್ಪರ್ಧೆ ಇಂಗಿತ
- ಮುಂದಿನ ವರ್ಷದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ
- ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲು ಸಿದ್ಧ ಎಂದು ಇತ್ತೀಚೆಗಷ್ಟೇ ಪಕ್ಷದ ಬಾವುಟ ಹಿಡಿದ ಟೆನಿಸ್ ಸ್ಟಾರ್ ಲಿಯಾಂಡರ್ ಪೇಸ್ ಹೇಳಿಕೆ
ಪಣಜಿ (ನ.17): ಮುಂದಿನ ವರ್ಷದ ಗೋವಾ (goa) ವಿಧಾನಸಭೆ ಚುನಾವಣೆಯಲ್ಲಿ (Assembly election) ತೃಣಮೂಲ ಕಾಂಗ್ರೆಸ್ ( TMC) ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲು ಸಿದ್ಧ ಎಂದು ಇತ್ತೀಚೆಗಷ್ಟೇ ಪಕ್ಷದ ಬಾವುಟ ಹಿಡಿದ ಟೆನಿಸ್ ಸ್ಟಾರ್ ಲಿಯಾಂಡರ್ ಪೇಸ್ (leander paes ) ಹೇಳಿದ್ದಾರೆ. ಅಲ್ಲದೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಯಾವುದೇ ಹಿಂಜರಿಕೆ ಇಲ್ಲ ಎಂದೂ ಇದೇ ವೇಳೆ ತಿಳಿಸಿದ್ದಾರೆ.
ಮಂಗಳವಾರ ಖಾಸಗಿ ಸುದ್ದಿ ಸಂಸ್ಥೆ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಪೇಸ್ ಅವರು, ‘ಟೆನಿಸ್‌ನಿಂದ (Tennis) ರಾಜಕೀಯ (politics) ಅಖಾಡಕ್ಕೆ ಇಳಿದಿರುವುದು ಖುಷಿ ಕೊಟ್ಟಿದೆ. ನಾಗರಿಕರ ಬಳಿಗೆ ನೇರವಾಗಿ ತೆರಳುತ್ತಿರುವ ನಾನು, ಗೋವಾದ ಸಮಸ್ಯೆಗಳು ಏನು ಎಂಬುದರ ಬಗ್ಗೆ ಅರಿಯುತ್ತಿದ್ದೇನೆ. ಟೆನಿಸ್ ಆಟದಲ್ಲಿ 30 ವರ್ಷಗಳ ಕಾಲ ಭಾರತವನ್ನು (india) ಪ್ರತಿನಿಧಿಸಿದ್ದೇನೆ. ಇದೀಗ ಅದೇ ಉತ್ಸಾಹದಲ್ಲಿ ಜನತಾ ನ್ಯಾಯಾಲಯದಲ್ಲೂ ಕಠಿಣ ಪರಿಶ್ರಮಪಡುತ್ತೇನೆ. ಜನತೆಗೆ ಸಾಮಾಜಿಕ ಸಾಮರಸ್ಯ ಮತ್ತು ಶಾಂತಿಗೆ ಅಗತ್ಯವಾಗಿರುವ ಉತ್ತಮ ಜೀವನ ನೀಡುವುದು ತಮ್ಮ ಬದ್ಧತೆ’ ಎಂದರು.
ನನ್ನಂಥವರು ರಾಜಕೀಯಕ್ಕೆ (politics) ಬರಲ್ಲ. ಆದರೆ ನಾವು ಹೊರಗೆ ಉಳಿದರೆ, ಬದಲಾವಣೆ ಹೇಗೆ ಸಾಧ್ಯ? ಕೆಲವರ ರಾಜಕೀಯ 3 ತಿಂಗಳ ಪ್ರಚಾರಕ್ಕೆ ಸೀಮಿತವಾಗಿರುತ್ತದೆ. ಆದರೆ ನಮಗೆ ನಿಜವಾದ ಬದಲಾವಣೆ ಬೇಕಿದ್ದರೆ, ನಾವು ವ್ಯವಸ್ಥೆಯ ಜತೆಗಿದ್ದುಕೊಂಡೇ ಹೋರಾಡಬೇಕು. ಹಾಗಿದ್ದಾಗ ಮಾತ್ರವೇ ಜೀವನದ ಗುಣ ಮಟ್ಟ ಬದಲಾವಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಟಿಎಂಸಿ ಸೇರಿದ್ದರು : ಹಿರಿಯ ಟೆನ್ನಿಸ್ ಆಟಗಾರ (Tennis Star ) ಲಿಯಾಂಡರ್ ಪೇಸ್ (Tennis Star Leander Paes) ಹಾಗೂ ನಟಿ ನಫೀಸಾ ಅಲಿ (Nafisa Ali) ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಅವರ ಉಪಸ್ಥಿತಿಯಲ್ಲಿ ಶುಕ್ರವಾರ ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ, ಪೇಸ್ ಒಲಿಂಪಿಕ್ಸ್‌ನಲ್ಲಿ (Olympic) ಕಂಚಿನ ಪದಕವನ್ನು ಗೆದ್ದಿದ್ದನ್ನು ಸ್ಮರಿಸಿಕೊಂಡರು. ‘ನಾನು ಪೇಸ್‌ನ್ನು ಮೊದಲ ಬಾರಿ ಭೇಟಿಯಾದ ಸಂದರ್ಭದಲ್ಲಿ ಕ್ರೀಡಾ ಮಂತ್ರಿಯಾಗಿದ್ದೆ (Sports Minister), ನಾನು ಟಿಎಂಸಿಯಲ್ಲಿ (TMC) ನನ್ನ ಕಿರಿಯ ಸಹೋದರನನ್ನು ಸ್ವಾಗತಿಸುತ್ತೇನೆ’ ಎಂದರು.
ಬಳಿಕ ಮಾತನಾಡಿದ ಲಿಯಾಂಡರ್, ‘ನಾನು ಟೆನ್ನಿಸ್ ನಿಂದ ನಿವೃತ್ತಿ ಪಡೆದಿದ್ದೇನೆ. ಜನರ ಸೇವೆ ಮಾಡುವ ಉದ್ದೇಶದಿಂದ ರಾಜಕೀಯವನ್ನು(Politics) ಪ್ರವೇಶಿಸುತ್ತಿದ್ದು ದೇಶದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತೇನೆ’ ಎಂದಿದ್ದರು.
ಕೇಂದ್ರದಕ್ಕೆ ದಾದಾಗಿರಿಗೆ ಬಿಡಲ್ಲ : ಗೋವಾ ರಾಜ್ಯಕ್ಕೆ ಮೂರು ದಿನ ಪ್ರವಾಸ ಕೈಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ "ನಾನು ಸಿಎಂ ಆಗಲು ಇಲ್ಲಿ ಬಂದಿಲ್ಲ, ಆದರೆ ಕೇಂದ್ರಕ್ಕೆ ದಾದಾಗಿರಿ ಮಾಡಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ. ಗುರುವಾರ ಸಂಜೆ ಮಮತಾ ಬ್ಯಾನರ್ಜಿ ಗೋವಾ ತಲುಪಿದ್ದರು.
"ಮೀನು ಮತ್ತು ಫುಟ್ಬಾಲ್" ಬಂಗಾಳ ಮತ್ತು ಗೋವಾವನ್ನು ಸಂಪರ್ಕಿಸುವ ಎರಡು ವಿಷಯಗಳಾಗಿವೆ ಎಂದು ಹೇಳಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಕೇಂದ್ರದ "ದಾದಾಗಿರಿ" ನಡೆಯಲು ಬಿಡುವುದಿಲ್ಲ ಎಂದು ಹೇಳಿದರು. ಆದಾಗ್ಯೂ, ಅಧಿಕಾರ ಹಿಡಿಯಲು ಅಥವಾ ಗೋವಾದ ಮುಖ್ಯಮಂತ್ರಿಯಾಗಲು ರಾಜ್ಯಕ್ಕೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. "ದೆಲ್ಲಿಚಿ ದಾದಾಗಿರಿ ಅನಿಕ್ ನಾಕಾ (ಇನ್ನು ಮುಂದೆ ದೆಹಲಿಯಿಂದ ದಬ್ಬಾಳಿಕೆ ಬೇಡ). ನಾನು ಹೊರಗಿನವಳಲ್ಲ, ಗೋವಾದ ಸಿಎಂ ಆಗಲು ಬಯಸುವುದಿಲ್ಲ" ಎಂದು ಕೊಂಕಣ ಭಾಷೆಯಲ್ಲಿ ಪಣಜಿಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ.
ಮಮತಾಗೆ ಬಿಜೆಪಿ ವಿರೋಧ!
"ನಾನು ಭಾರತೀಯಳು, ನಾನು ಎಲ್ಲಿ ಬೇಕಾದರೂ ಹೋಗಬಹುದು, ಬಂಗಾಳ ನನ್ನ ತಾಯಿನಾಡು, ಗೋವಾ ಕೂಡ ನನ್ನ ತಾಯಿನಾಡು, ನಾನು ಗೋವಾಕ್ಕೆ ಬರುತ್ತೇನೆ, ಅವರು ನನ್ನ ಪೋಸ್ಟರ್‌ಗಳನ್ನು ಹಾಳು ಮಾಡುತ್ತಾರೆ, ಅವರು (ಬಿಜೆಪಿ) ಮಾನಸಿಕ ಅರೋಗ್ಯ ಸರಿಯಿಲ್ಲ, ಅವರು ನನಗೆ ಕಪ್ಪು ಬಾವುಟ ತೋರಿಸಿದರು ಆದರೆ ನಾನು ನಮಸ್ತೆ ಹೇಳಿದೆ," ಎಂದು ಮಮತಾ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರ ಭೇಟಿಗೆ ಮುನ್ನ ಗೋವಾದಲ್ಲಿ ಅವರ ಚಿತ್ರಗಳನ್ನು ಹೊಂದಿರುವ ಹಲವಾರು ಹೋರ್ಡಿಂಗ್‌ಗಳನ್ನು ವಿರೂಪಗೊಳಿಸಲಾಗಿತ್ತು. ಇದು ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.
ಬಿಜೆಪಿ ಸರ್ಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ: ಮಾಜಿ ರಾಜ್ಯಪಾಲರ ಆರೋಪ
ಮಮತಾ ಬ್ಯಾನರ್ಜಿ ಅವರೊಂದಿಗೆ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ, ಟಿಎಂಸಿ ಸಂಸದ ಡೆರೆಕ್ ಒಬ್ರೇನ್ ಮತ್ತು ಸ್ಥಳೀಯ ನಾಯಕರು ಮಮತಾ ಜತೆಯಾಗಿದ್ದಾರೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಗೋವಾದಲ್ಲಿ 40 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಟಿ ನಫೀಸಾ ಅಲಿ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರ್ಪಡೆ ಗೋವಾದಲ್ಲಿ ಮುಂದಿನ ವರ್ಷದ ಚುನಾವಣೆಗೆ ಮುನ್ನ ಪಕ್ಷಕ್ಕೆ ಉತ್ತಮ ಬೆಳವಣಿಯಾಗಿದೆ. ಈ ಬಗ್ಗೆ ತೃಣಮೂಲ ಕಾಂಗ್ರೇಸ್ ಟ್ವೀಟ್ ಕೂಡ ಮಾಡಿತ್ತು.