Asianet Suvarna News Asianet Suvarna News

ಈವೊಂದು ವಿಷಯ ಯಾರಾದರೂ ಸ್ಪಷ್ಟಪಡಿಸಿದರೆ ಪದ್ಮಶ್ರೀ ಹಿಂದಿರುಗಿಸುತ್ತಾರಂತೆ ಕಂಗನಾ!

*1857 ಹೋರಾಟದ ಬಗ್ಗೆ ನನಗೆ ತಿಳಿದಿದೆ!
*ಸಿನಿಮಾ ಶೂಟಿಂಗ್‌ ವೇಳೆ ಸಾಕಷ್ಟು ತಿಳಿದುಕೊಂಡಿದ್ದೆನೆ 
*ಆದರೆ 1947ರ ಹೋರಾಟದ ಬಗ್ಗೆ ನನಗೆ ತಿಳಿದಿಲ್ಲ
* Instagram Story ಮೂಲಕ ಕಾಂಗ್ರೇಸ್‌ 'ಭಿಕ್ಷುಕ' ಎಂದ ಕಂಗನಾ

Will Return Padma Shri if someone clarifies me about 1947 freedom war said Kangana Ranaut mnj
Author
Bengaluru, First Published Nov 13, 2021, 5:48 PM IST
  • Facebook
  • Twitter
  • Whatsapp

ನವದೆಹಲಿ(ನ.13): ಪದ್ಮಶ್ರೀ ಪುರಸ್ಕೃತ (Padma Shri) ನಟಿ ಕಂಗನಾ ರಾಣಾವತ್‌ (Kangana Ranaut) ಅವರ ‘ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪಕ್ಷಬೇಧವಿಲ್ಲದೆ ರಾಜಕೀಯ ನಾಯಕರು ಕಂಗಾನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಲು ಮತ್ತು ನಟಿಯನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಲು ಆಗ್ರಹಿಸುತ್ತಿದ್ದಾರೆ. 

1947ರ ಹೋರಾಟದ ಬಗ್ಗೆ ನನಗೆ ತಿಳಿದಿಲ್ಲ!

ಈ ಬಗ್ಗೆ ಕಂಗನಾ ತಮ್ಮ ಇನ್ಸ್ಟಾಗ್ರಾಮ್‌ (Instagram) ಸ್ಟೇಟಸ್‌ನಲ್ಲಿ ಪ್ರತಿಕ್ರಿಯೆ ನಿಡಿದ್ದಾರೆ.  1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು ನನಗೆ ತಿಳಿದೆ.  ಸ್ವಾತಂತ್ರ್ಯ ಹೋರಾಟದಲ್ಲಿ  ಸುಭಾಷ್ ಚಂದ್ರ ಬೋಸ್ (Subhash Chandra Bose) , ರಾಣಿ ಲಕ್ಷ್ಮೀಬಾಯಿ (Rani Laxmi Bai) ಮತ್ತು ವೀರ್ ಸಾವರ್ಕರ್ ಜಿ (Veer Savarkar) ಅವರಂತಹ ದಿಗ್ಗಜರ ತ್ಯಾಗ ಮಾಡಿದ್ದಾರೆ. ಆದರೆ 1947 ರಲ್ಲಿ ಯಾವ ಯುದ್ಧ ನಡೆಯಿತು ಎಂದು ತಮಗೆ ತಿಳಿದಿಲ್ಲ ಎಂದು ಕಂಗನಾ ಹೇಳಿದ್ದಾರೆ. 1947 ರಲ್ಲಿ ನಡೆದ ಯುದ್ಧದ ಬಗ್ಗೆ ಯಾರಾದರೂ ಸ್ಪಷ್ಟಪಡಿಸಿದರೆ ತಮಗೆ ಸಂದಿರುವ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುವುದಾಗಿ ಬಾಲಿವುಡ್‌ ಬೆಡಗಿ ಕಂಗನಾ ಹೇಳಿದ್ದಾರೆ.

"ನಾನು ನೀಡಿದ ಸಂದರ್ಶನದಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ. 1857 ರಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟ ನಡೆದಿದೆ (First war of Independence). ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾವರ್ಕರ್ ಜಿ ಅವರಂತಹ ದಿಗ್ಗಜರು ತ್ಯಾಗ ಮಾಡಿದ್ದಾರೆ... 1857ರ ಹೋರಾಟದ ಬಗ್ಗೆ ನನಗೆ ತಿಳಿದಿದೆ ಆದರೆ 1947 ರಲ್ಲಿ ಯಾವ ಯುದ್ಧ ನಡೆಯಿತು ಎಂಬುದು ನನಗೆ ತಿಳಿದಿಲ್ಲ. , ಯಾರಾದರೂ ನನ್ನ ಅರಿವಿಗೆ ತರಲು ಸಾಧ್ಯವಾದರೆ ನಾನು ನನ್ನ ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ... ದಯವಿಟ್ಟು ನನಗೆ ಸಹಾಯ ಮಾಡಿ, ”ಎಂದು ಕಂಗನಾ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.

Will Return Padma Shri if someone clarifies me about 1947 freedom war said Kangana Ranaut mnj

ಕಂಗನಾ ಇಂದು ತಮ್ಮ ಇನ್ಸ್ಟಾಗ್ರಾಮ ಸ್ಟೋರಿಯಲ್ಲಿ ಕಾಂಗ್ರೆಸ್ ಅನ್ನು "ಭಿಕ್ಷುಕ" ಎಂದು ಕರೆದಿದ್ದಾರೆ ಮತ್ತು ಇತಿಹಾಸದ (History) ಪಠ್ಯಪುಸ್ತಕದಿಂದ ಪಕ್ಷದ ಬಗ್ಗೆ ಕೆಲವು ಆಯ್ದ ಅಭಿಪ್ರಾಯಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಅದು ಯಾವ ಪಠ್ಯಪುಸ್ತಕವನ್ನು ಎಂದು ಹೆಸರಿಸಿಲ್ಲ."ಕೇಲವು ದಾಖಲೆಗಳನ್ನು ಕೂಡ ಪರೀಶಿಲಿಸಿ... ನಾನು ಮಾತ್ರ ಕಾಂಗ್ರೆಸ್ ಭಿಕ್ಷುಕ ಎಂದು ಕರೆದಿಲ್ಲ," ಎಂದು ಬರೆಯಲಾಗಿರುವ ಪುಸ್ತಕವನ್ನು ಉಲ್ಲೇಖಿಸಿದ್ದಾರೆ.

ಸಿನಿಮಾ ಶೂಟಿಂಗ್‌ ವೇಳೆ ಸಾಕಷ್ಟು ತಿಳಿದುಕೊಂಡಿದ್ದೆನೆ!

ಅವರ 2019 ರ ಅವಧಿಯ ಚಲನಚಿತ್ರ "ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ" ಅನ್ನು ಉಲ್ಲೇಖಿಸಿ, ಇದರಲ್ಲಿ ಅವರು ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮಿ ಬಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಹಾಗೂ ಅವರು 1857 ರ ಹೋರಾಟದ ಬಗ್ಗೆ ವ್ಯಾಪಕವಾದ ಸಂಶೋಧನೆಯನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. 

Kangana Ranaut| ಕಂಗನಾ ವಿವಾದಿತ ಹೇಳಿಕೆ: ಪದ್ಮಶ್ರೀ ವಾಪಸ್‌ಗೆ ಮತ್ತಷ್ಟುಆಗ್ರಹ!

ಸುದ್ದಿವಾಹಿನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಮಾತನಾಡಿದ ಕಂಗನಾ, ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಈ ಮಾತುಗಳನ್ನು ಒಳಗೊಂಡ 24 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಕಂಗನಾ ಈ ಮಾತು ಆಡುವಾಗ ಸಭಾಂಗಣದಲ್ಲಿದ್ದ ಹಲವರು ಚಪ್ಪಾಳೆ ತಟ್ಟಿಹುರಿದುಂಬಿಸಿದ್ದಾರೆ. ಕಂಗನಾರ ಹೇಳಿಕೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ವಿರೊಧ  ವ್ಯಕ್ತವಾಗಿದೆ. ಈ ಬಗ್ಗೆ ಚರ್ಚೆಗಳು ಕಾವೇರುತ್ತಿದ್ದಂತೆಯೇ ಕಂಗನಾ ಈಗ ಇನ್ಸ್ಟಾಗಾಮ್‌ ಮೂಲಕ ಈ ಹೇಳಿಕೆ ನೀಡಿದ್ದಾರೆ. ಈಗಾಗಲೇ ತಮ್ಮ ವಿವಾದಾತ್ಮಕ ಟ್ವೀಟ್‌ಗಳಿಂದಾಗಿ ಟ್ವೀಟರ್‌ನಲ್ಲಿ ಕಂಗನಾ ಖಾತೆ ಬ್ಯಾನ್‌ ಮಾಡಲಾಗಿದೆ.

Follow Us:
Download App:
  • android
  • ios