Asianet Suvarna News Asianet Suvarna News

Kangana Ranaut| ಕಂಗನಾ ವಿವಾದಿತ ಹೇಳಿಕೆ: ಪದ್ಮಶ್ರೀ ವಾಪಸ್‌ಗೆ ಮತ್ತಷ್ಟುಆಗ್ರಹ!

* ಇದು ಸ್ವಾತಂತ್ರ್ಯವೀರರಿಗೆ ಅವಮಾನ: ಕಾಂಗ್ರೆಸ್‌

* ಕಂಗನಾ ವಿವಾದಿತ ಹೇಳಿಕೆ: ಪದ್ಮಶ್ರೀ ವಾಪಸ್‌ಗೆ ಮತ್ತಷ್ಟುಆಗ್ರಹ

* ಡ್ರಗ್ಸ್‌ ಅಮಲಿನಲ್ಲಿ ಕಂಗನಾ ಹೇಳಿಕೆ: ಎನ್‌ಸಿಪಿ

Withdraw Padma Shri Chorus grows after Kangana freedom was bheek remark pod
Author
Bangalore, First Published Nov 13, 2021, 8:17 AM IST
  • Facebook
  • Twitter
  • Whatsapp

ನವದೆಹಲಿ(ನ. 13): ಪದ್ಮಶ್ರೀ ಪುರಸ್ಕೃತ (Padma Shri) ನಟಿ ಕಂಗನಾ ರಾಣಾವತ್‌ (Kangana Ranaut) ಅವರ ‘ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪಕ್ಷಬೇಧವಿಲ್ಲದೆ ರಾಜಕೀಯ ನಾಯಕರು ಕಂಗಾನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಲು ಮತ್ತು ನಟಿಯನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಲು ಆಗ್ರಹಿಸುತ್ತಿದ್ದಾರೆ.

ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ (Congress Leader Anand Sharma), ಕಂಗನಾ ಹೇಳಿಕೆ ಮಹಾತ್ಮ ಗಾಂಧಿ, ನೆಹರು ಸರ್ದಾರ್‌ ಪಟೇಲ್‌ ನೇತೃತ್ವದ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರು ಮಾಡಿರುವ ತ್ಯಾಗಕ್ಕೆ ಮಾಡಿರುವ ಅಪಮಾನ. ಇಂಥ ಆಘಾತಕಾರಿ ಹೇಳಿಕೆ ನೀಡಿರುವ ಕಂಗನಾ ಅವರಿಂದ ಪದ್ಮಶ್ರೀಯನ್ನು ಹಿಂಪಡೆಯಬೇಕು ಎಂದು ಸರಣಿ ಟ್ವೀಟ್‌ ಮೂಲಕ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (President Ra Nath kovins) ಅವರಿಗೆ ಮನವಿ ಮಾಡಿದ್ದಾರೆ. ದಿಲ್ಲಿ ಬಿಜೆಪಿ ಕೂಡ ಕಂಗನಾ ಹೇಳಿಕೆ ವಿರೋಧಿಸಿದೆ.

ಮಹಾರಾಷ್ಟ್ರ ಎನ್‌ಸಿಪಿ ಸಚಿವ ನವಾಬ್‌ ಮಲಿಕ್‌ (nawab Malik) ಅವರು, ‘ಕಂಗನಾ ಡ್ರಗ್ಸ್‌ ಅಮಲಿನಲ್ಲಿ ಈ ಹೇಳಿಕೆ ನೀಡಿರಬಹುದು’ ಎಂದು ಕುಟುಕಿದ್ದಾರೆ.

ಅಲ್ಲದೆ, ಹರಾರ‍ಯಣ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ, ಹಿಂದುಸ್ತಾನಿ ಆವಂ ಮೋರ್ಚಾ ಅಧ್ಯಕ್ಷ ಜಿತನ್‌ ರಾಮ್‌ ಮಾಂಝಿ, ಶಿವಸೇನ ನಾಯಕ ನೀಲಂ ಗೋರೆ ಸೇರಿದಂತೆ ಅನೇಕರು ಕಂಗನಾ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ (Arvind Kejriwal_ ನೇತೃತ್ವದ ಎಎಪಿ ಮುಂಬೈನಲ್ಲಿ ಕಂಗನಾ ವಿರುದ್ಧ ಪ್ರಕರಣ ದಾಖಲಿಸಿದೆ.

ಗುರುವಾರ ಬಿಜೆಪಿ ಸಂದಸ ವರುಣ್‌ ಗಾಂಧಿ ಸೇರಿದಂತೆ ಅನೇಕರು ಜಾಲತಾಣಗಳಲ್ಲಿ ಕಂಗನಾ ಹೇಳಿಕೆಯನ್ನು ಖಂಡಿಸಿದ್ದರು.

1947ರಲ್ಲಿ ದೊರಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ!

ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ ಎಂದು ಪದ್ಮಶ್ರೀ ಪುರಸ್ಕೃತ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಗುರಿಯಾಗಿದೆ.

ಕಂಗನಾ ಹೇಳಿಕೆಗೆ ಬಿಜೆಪಿ ಸಂಸದ ವರುಣ್‌ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು, ಸಿನಿಮಾ ರಂಗದ ಪ್ರಮುಖರು, ಕ್ರೀಡಾ ಕ್ಷೇತ್ರದ ತಾರೆಯರು ಹಾಗೂ ಶ್ರೀಸಾಮಾನ್ಯರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಇನ್ನು ಹಲವು ಕಡೆ ಕಂಗನಾ ವಿರುದ್ಧ ಪ್ರಕರಣ ಕೂಡಾ ದಾಖಲಿಸಲಾಗಿದೆ.

ಸುದ್ದಿವಾಹಿನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಮಾತನಾಡಿದ ಕಂಗನಾ, ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಈ ಮಾತುಗಳನ್ನು ಒಳಗೊಂಡ 24 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಕಂಗನಾ ಈ ಮಾತು ಆಡುವಾಗ ಸಭಾಂಗಣದಲ್ಲಿದ್ದ ಹಲವರು ಚಪ್ಪಾಳೆ ತಟ್ಟಿಹುರಿದುಂಬಿಸಿದ್ದಾರೆ.

ತಮ್ಮ ಹೇಳಿಕೆ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿರುವ ಕಂಗನಾ, 1857ರ ದಂಗೆ ಮೊದಲ ಸ್ವಾತಂತ್ರ್ಯ ಹೋರಾಟ. ಆದರೆ ಅದನ್ನು ಹತ್ತಿಕ್ಕಲಾಯಿತು. ಅದಾದ ನಂತರ ಬ್ರಿಟಿಷರ ದೌರ್ಜನ್ಯ ಹಾಗೂ ಕ್ರೂರತೆ ಹೆಚ್ಚಾಯಿತು. ಅದಾದ ಒಂದು ಶತಮಾನದ ಬಳಿಕ ಗಾಂಧಿ ಅವರ ಭಿಕ್ಷಾ ಪಾತ್ರೆಯಲ್ಲಿ ಸ್ವಾತಂತ್ರ್ಯವನ್ನು ನಮಗೆ ನೀಡಲಾಯಿತು. ಸ್ವಾತಂತ್ರ್ಯವನ್ನು ನಾವು ಭಿಕ್ಷೆಯಾಗಿ ಪಡೆದರೆ ಅದು ಸ್ವಾತಂತ್ರ್ಯವಾಗುತ್ತದೆಯೇ? ಬ್ರಿಟಿಷರು ಕಾಂಗ್ರೆಸ್‌ ಎಂಬ ಹೆಸರನ್ನು ಬಿಟ್ಟುಹೋದರು. ಅವರು ಬ್ರಿಟಿಷರ ಮುಂದುವರಿದ ಭಾಗ ಎಂದು ವಾಗ್ದಾಳಿ ನಡೆಸಿದ್ದಾರೆ.

Follow Us:
Download App:
  • android
  • ios