Asianet Suvarna News Asianet Suvarna News

ಕರ್ನಾಟಕದಲ್ಲಿ ಹೊತ್ತಿದ ಹಿಜಾಬ್ ಕಿಡಿ ಯುಪಿ ಚುನಾವಣೆ ಮೇಲೆ ಪ್ರಭಾವ ಬೀರುತ್ತಾ?

* ಕರ್ನಾಟಕದಲ್ಲಿ ಹುಟ್ಟಿಕೊಂಡ ಹಿಜಾಬ್ ವಿವಾದ

* ಅಂತರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ ಹಿಜಾಬ್- ಕೇಸರಿ ಶಾಲು ವಿವಾದ

* ಕರ್ನಾಟಕದಲ್ಲಿ ಹೊತ್ತಿದ ಕಿಡಿಯಿಂದ ಯುಪಿ ಚುನಾವಣೆ ಮೇಲೆ ಪ್ರಭಾವ?

Will Karnataka Hijab Row Show Its Effect On Uttar Pradesh Elections pod
Author
Bangalore, First Published Feb 9, 2022, 2:51 PM IST

ಪ್ರಶಾಂತ್ ನಾಥು, ಇಂಡಿಯಾ ಗೇಟ್

ಲಕ್ನೋ(ಫೆ.09): ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದ ಕಿಡಿ ಇಂದ ಬೆಂಕಿ ಆಗಿದ್ದೇ 2022 ರ ಕರ್ನಾಟಕದ ವಿಧಾನಸಭಾ ಚುನಾವನೆಯ ಮೇಲೆ ಕಣ್ಣಿಟ್ಟು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ.ಇತ್ತೀಚಿನ ಸೋಶಿಯಲ್ ಮೀಡಿಯಾ  ದಿನಗಳಲ್ಲಿ ಯಾವುದೋ ಹಳ್ಳಿ ಯಲ್ಲಿ ನಡೆದ ಘಟನೆ ಕೂಡ ದಿಲ್ಲಿ ಮೇಲೆ ಪರಿಣಾಮ ಬೀರುತ್ತದೆ.ಹೀಗಾಗಿ ನಿನ್ನೆ ಕರ್ನಾಟಕದ ಕ್ಯಾಂಪಸ್ ಗಳಲ್ಲಿ ನಡೆದ ತಿಕ್ಕಾಟ ಗಳು ಯುಪಿಯ ಚುನಾವಣೆ ಮೇಲು ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

ಹಿಜಾಬ್ ಮತ್ತು ಕೇಸರಿ ಶಾಲಿನ ಕಾರಣದಿಂದ ಕರ್ನಾಟಕದ ಮಂಡ್ಯ ಶಿವಮೊಗ್ಗ ಮುಧೋಳ ಸಿಂದಗಿ ಗಳ ಕಾಲೇಜು ಪರಿಸರಗಳು ರಣಾಂಗಣ ಗಳಾದ ದ್ರಶ್ಯಗಳು ಬಹುತೇಕ ಈಡೀ ದೇಶದಲ್ಲಿ ಚರ್ಚಾ ವಸ್ತು.ಇದು ಸಹಜವಾಗಿ ಯು ಪಿಯ  ಮುಸ್ಲಿಂ ಬಾಹುಳ್ಯ ಕ್ಷೇತ್ರಗಳಲ್ಲಿ  ಪರಿಣಾಮ ಬೀರಲಿದ್ದು ಆದರೆ ಇದರಿಂದ ಎಷ್ಟು ಧ್ರುವೀಕರಣ ಆಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ.

UP Elections: ಜಾಟ್ ಬಾಹುಳ್ಯದ 58 ಕ್ಷೇತ್ರಗಳಿಗೆ ಮತದಾನ, ಕೃಷಿ ಕಾಯಿದೆ ವಿಚಾರ ಪ್ರಭಾವ ಬೀರುತ್ತಾ?

ಪಶ್ಚಿಮ ಯು ಪಿ ಯ ನಾಳೆ ಚುನಾವಣೆ ನಡೆಯುವ ಕ್ಷೇತ್ರಗಳಾದ ಕೈರಾಣಾ ಬಾಘಪತ್ ಮೆರಥ ಮೊರಾದಾಬಾದ್ ಗಳಲ್ಲಿ ಮುಸ್ಲಿಮರ ಜನಸಂಖ್ಯೆ 25 ಶೇಕಡಾ ಗಿಂತ ಹೆಚ್ಚು.ಹೀಗಾಗಿ ಹಿಂದೂ ಮುಸ್ಲಿಂ ತಿಕ್ಕಾಟದ ದ್ರಶ್ಯಗಳು ಎಲ್ಲಿಯವೇ ಇದ್ದರು ಕೂಡ ಈ ಭಾಗದ ಮತ ಧ್ರುವೀಕರಣ ಆಗಿಯೇ ಆಗುತ್ತದೆ.

2013 ರಲ್ಲಿ ಒಬ್ಬ ಜಾಟ್ ಯುವತಿ ಮುಸ್ಲಿಂ ಯುವಕ ನೊಂದಿಗೆ ಓಡಿ ಹೋದಳು ಎಂಬ ಸುದ್ದಿಯೇ ಮುಜಫರ್ ನಗರ ಆಸು ಪಾಸಿನ 60 ಕಡೆ ಕೋಮು ಗಲಭೆಗೆ ನಾಂದಿ ಹಾಡಿತ್ತು. ಅದರ ಜೊತೆಗೆ ಯು ಪಿ ವಿಧಾನ ಸಭೆಗೆ ರೆಕೋರ್ಡ್ 65 ಮುಸ್ಲಿಂ ಶಾಸಕರು 2012 ರಲ್ಲಿ ಆರಿಸಿ ಬಂದಿದ್ದು 2014 ರಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ದೊಡ್ಡ ಲಾಭ ತಂದಿತ್ತು.ಮುಸ್ಲಿಂ ಮತಗಳ ಧ್ರುವೀಕರಣ ದಿಂದ ಸಹಜ ವಾಗಿ ಸಮಾಜವಾದಿ ಪಕ್ಷ ಕ್ಕೆ ವೋಟಿನ ಲಾಭ ತರುತ್ತದೆ ಆದರೂ ಅದಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಹಿಂದೂ ಗಳ ಧ್ರುವೀಕರಣ ದಿಂದ ಮೋದಿ ಮತ್ತು ಬಿಜೆಪಿಗೆ ಆದ ವೋಟು ಮತ್ತು ಸೀಟಿನ ಲಾಭವೇ ಹೆಚ್ಚು.

Hijab Row: ಬಿಕಿನಿ, ಶಾಲು, ಜೀನ್ಸ್, ಹಿಜಾಬ್: ಮಹಿಳೆಯರಿಗೆ ತಮ್ಮಿಷ್ಟದ ಬಟ್ಟೆ ಧರಿಸುವ ಹಕ್ಕಿದೆ: ಪ್ರಿಯಾಂಕಾ!

ಹೀಗಾಗಿ ಈಗ ಯು ಪಿ ಯಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿರುವ 58 ಕ್ಷೇತ್ರಗಳಲ್ಲಿ ಹಿಜಾಬ್ ವಿಶಯ ಮತದಾರನ ಮಸ್ತಿಷ್ಕದ ಮೇಲೆ ಪರಿಣಾಮ ಮಾಡಲಿದೆ ಎಂದು ರಾಜಕೀಯ ಪಕ್ಶಗಳು ಲೆಕ್ಕಾಚಾರ ಹಾಕುತ್ತಿವೆ.ಒಂದು ವೇಳೆ ಇದರಿಂದ ಮುಸ್ಲಿಂ ಮತಗಳ ಧ್ರುವೀಕರಣ ಆದರೆ ಅಖಿಲೇಶ್ ಯಾದವ್ ಗೆ ಹೇಗೆ ಲಾಭ ಹೆಚ್ಹೋ ಅದೇ ರೀತಿ ಜಾಟ್ ಸಹಿತ ಹಿಂದೂ ಮತಗಳ ಧ್ರುವೀಕರಣ ಆದರೆ ಕಳೆದ 2014 2017 ಮತ್ತು 2019 ರಲ್ಲಿ ಆದಂತೆ ಈ ಬಾರಿಯೂ ಬಿಜೆಪಿಗೆ ಲಾಭ ಆಗಲಿದೆ.ಕಳೆದ 2017 ರಲ್ಲಿ ಈ 58 ಕ್ಷೇತ್ರಗಳಲ್ಲಿ ಬಿಜೆಪಿ 53 ಗೆದ್ದಿದ್ದರೆ ಜಾಟ್ ಬಾಹುಳ್ಯ ಕ್ಷೇತ್ರಗಳಾದರು ಕೂಡ ಆರ್ ಎಲ್ ಡಿ ಗೆದ್ದಿದ್ದು ಒಂದು ಸೀಟು ಮಾತ್ರ.

ಈ ಬಾರಿ ಜಾಟ್ ರು ಬಿಜೆಪಿ ಮೇಲೆ ಕೃಷಿ ಕಾಯಿದೆ ಇಂದ ಬೇಸತ್ತಿದ್ದಾರೆ.ಆದರೆ ಇಲ್ಲಿ ಹಿಂದೂ ಮುಸ್ಲಿಂ ನಡುವಿನ ಕಂದಕ ಪೂರ್ತಿ ಮುಚ್ಚಿಲ್ಲ.ಅದು ಬೂದಿ ಮುಚ್ಚಿದ ಕೆಂಡದಂತೆ ಇದ್ದೇ ಇದೆ.ಹೀಗಾಗಿ ದೂರದ ಉಡುಪಿ ಯ ತಿಕ್ಕಾಟದ ದ್ರಶ್ಯಗಳು ಕೂಡ ಯು ಪಿ ಯಂಥ ಧರ್ಮ ಸೂಕ್ಷಮ್ಯ ರಾಜ್ಯದಲ್ಲಿ ಜ್ವಾಲೆ ರೂಪ ತಾಳಬಹುದು.

UP Election ಲವ್ ಜಿಹಾದ್‌ಗೆ 10 ವರ್ಷ ಜೈಲು, ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್; ಯುಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ!

ಇದೇ ಕಾರಣದಿಂದ ದಿಲ್ಲಿ ಬಿಜೆಪಿ ನಾಯಕರ ಸೂಚನೆ ಮೇರೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 3 ದಿನ ಕಾಲೇಜು ಗಳಿಗೆ ರಜೆ ಘೋಷಿಸಿದ್ದಾರೆ ಎನ್ನಲಾಗುತ್ತಿದೆ.

ಏನೇ ಆಗಲಿ ಪಶ್ಚಿಮ ಯು ಪಿ ಯ ಈ 58 ಕ್ಷೇತ್ರಗಳ ಚುನಾವಣೆ ಯು ಪಿ ಯ 403 ಸೀಟಿನಲ್ಲಿ ಯಾರು ಎಷ್ಟು ಪಡೆಯುತ್ತಾರೆ ಅನ್ನೋದನ್ನು ನಿರ್ಧರಿಸಲಿವೆ

Follow Us:
Download App:
  • android
  • ios