Asianet Suvarna News Asianet Suvarna News

UP Election ಲವ್ ಜಿಹಾದ್‌ಗೆ 10 ವರ್ಷ ಜೈಲು, ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್; ಯುಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ!

- ಯುಪಿಯಲ್ಲಿ ಲವ್‌ ಜಿಹಾದ್‌ಗೆ 10 ವರ್ಷ ಜೈಲು, 1 ಲಕ್ಷ ದಂಡ
- ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್‌ ಶಾ
- ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್‌, ರೈತರಿಗೆ ಉಚಿತ ವಿದ್ಯುತ್‌

Amit Shah release Bjp Manifesto for Uttar Pradesh Election promise 10 year jail term for Love Jihad ckm
Author
Bengaluru, First Published Feb 9, 2022, 5:11 AM IST

ಲಖನೌ(ಫೆ.09): ಉತ್ತರ ಪ್ರದೇಶದಲ್ಲಿ(Uttar Pradesh Election) ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಲವ್‌ ಜಿಹಾದ್‌(Love Jihad) ನಡೆಸುವವರಿಗೆ 10 ವರ್ಷ ಜೈಲುಶಿಕ್ಷೆ ಹಾಗೂ 1 ಲಕ್ಷ ರು. ದಂಡ ವಿಧಿಸುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ(Assemly Election) ಫೆ.10ರಿಂದ ವಿವಿಧ ಹಂತಗಳಲ್ಲಿ ಮತದಾನ ಆರಂಭವಾಗಲಿದೆ. ಅದಕ್ಕೆ ಎರಡು ದಿನ ಇರುವಾಗ ಕೇಂದ್ರ ಗೃಹ ಸಚಿವ ಅಮಿತ್‌(Amit Shah) ಶಾ ಮಂಗಳವಾರ ಪ್ರಣಾಳಿಕೆ(Manifesto) ಬಿಡುಗಡೆ ಮಾಡಿದ್ದು, ಅದರಲ್ಲಿ ಲವ್‌ ಜಿಹಾದ್‌ಗೆ ಜೈಲುಶಿಕ್ಷೆ ವಿಧಿಸುವ ಪ್ರಸ್ತಾಪವಿದೆ.

‘ಲೋಕ ಕಲ್ಯಾಣ ಸಂಕಲ್ಪ ಪತ್ರ-2022’ ಹೆಸರಿನ ಈ ಪ್ರಣಾಳಿಕೆಯಲ್ಲಿ ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ(BJP) ಪ್ರಕಟಿಸಿದ್ದ 212 ಸಂಕಲ್ಪಗಳಲ್ಲಿ ಶೇ.92ನ್ನು ಈಡೇರಿಸಿರುವುದಾಗಿ ಹೇಳಲಾಗಿದೆ. ಈ ಬಾರಿ ಮರಳಿ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಲಾಗುವುದು, 14 ದಿನದೊಳಗೆ ರೈತರಿಗೆ ಕಬ್ಬಿನ ಬಾಕಿ ಪಾವತಿಸದಿದ್ದರೆ ಸಕ್ಕರೆ ಕಾರ್ಖಾನೆಗಳು ಬಡ್ಡಿ ಸಮೇತ ಬಾಕಿ ಪಾವತಿಸಬೇಕು, ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಿಸಲಾಗುವುದು, ಮುಂದಿನ ಐದು ವರ್ಷಗಳಲ್ಲಿ ರೈತರಿಂದ ಅಕ್ಕಿ ಖರೀದಿಸಲು ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲಾಗುವುದು, ರಾಣಿ ಲಕ್ಷ್ಮೇಬಾಯಿ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್‌, ಸ್ವಾಮಿ ವಿವೇಕಾನಂದ ಯುವ ಸಶಕ್ತೀಕರಣ ಯೋಜನೆಯಡಿ ವಿದ್ಯಾರ್ಥಿಗಳಿಗೆ ಎರಡು ಕೋಟಿ ಟ್ಯಾಬ್ಲೆಟ್‌ ಹಾಗೂ ಸ್ಮಾರ್ಟ್‌ಫೋನ್‌ ನೀಡಲಾಗುವುದು. ದಾಖಲೆಯ ಸಮಯದಲ್ಲಿ ಬುಂದೇಲ್‌ಖಂಡದಲ್ಲಿ ಜನರಲ್‌ ಬಿಪಿನ್‌ ರಾವತ್‌ ಡಿಫೆನ್ಸ್‌ ಇಂಡಸ್ಟ್ರಿಯಲ್‌ ಕಾರಿಡಾರ್‌ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಲಾಗಿದೆ.

5 States Election: ಯೋಗಿ ಪ್ರಚಾರದಲ್ಲಿ ಮುಜಫ್ಫರ್‌ನಗರ ಗಲಭೆ ಪ್ರತಿಧ್ವನಿ, ಗೋವಾದಲ್ಲಿ ಫೋಟೋ ಫಿನಿಶ್‌

ಪಂಜಾಬ್‌: ಬಿಜೆಪಿ ಮೈತ್ರಿಕೂಟದ 11 ಅಂಶಗಳ ಪ್ರಣಾಳಿಕೆ ಬಿಡುಗಡೆ
ಪಂಜಾಬ್‌ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ನವೀಕರಿಸಬಹುದಾದ ಕೃಷಿ ಮತ್ತು ನೈಸರ್ಗಿಕ ಕಷಿಗಾಗಿ ಬಜೆಟ್‌ನಲ್ಲಿ 5000 ಕೋಟಿ ರು., ಅಂತರ್ಜಲ ಕ್ಷೀಣತೆ ನಿಯಂತ್ರಣಕ್ಕೆ ಮಳೆನೀರು ಕೊಯ್ಲು ಮತ್ತು ಕೃಷಿ ವಲಯಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು 11 ಅಂಶಗಳುಳ್ಳ ಈ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಅಲ್ಲದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶಕ್ಕೆ ಪದಕ ತಂದುಕೊಡುವ ಕ್ರೀಡಾಪಟುಗಳಿಗೆ ಧನಸಹಾಯ ಹಾಗೂ ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಗಣಿಗಾರಿಕೆ ಮರುಸ್ಥಾಪನೆ, 3 ಉಚಿತ ಸಿಲಿಂಡರ್‌ ಗೋವಾಕ್ಕೆ ಬಿಜೆಪಿ ಪ್ರಣಾಳಿಕೆ
 ಗೋವಾ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. 10 ವರ್ಷದಲ್ಲಿ ಗೋವಾ ರಾಜ್ಯವನ್ನು 37.37 ಲಕ್ಷ ಕೋಟಿ (50 ಬಿಲಿಯನ್‌ ಡಾಲರ್‌) ಆರ್ಥಿಕತೆಯನ್ನಾಗಿ ಮಾಡಲಾಗುವುದು, ವರ್ಷಕ್ಕೆ ಉಚಿತವಾಗಿ 3 ಗ್ಯಾಸ್‌ ಸಿಲಿಂಡರ್‌ ವಿತರಣೆ, ಎಲ್ಲರಿಗೂ ವಸತಿ, ರಾಜ್ಯದಲ್ಲಿ ಗಣಿಗಾರಿಕೆ ಮರುಸ್ಥಾಪನೆ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ನಿಯಂತ್ರಣ, ಪ್ರವಾಸೋದ್ಯಮ ಚಟುವಟಿಕೆಗಳ ಹೆಚ್ಚಳ, ಬಡತನ ನಿರ್ಮೂಲನೆ, ವೃದ್ಧಾಪ್ಯ ವೇತನ 3 ಸಾವಿರಕ್ಕೆ ಹೆಚ್ಚಳ ಮತ್ತು ಅಭಿವೃದ್ಧಿಗಾಗಿ ಪ್ರತಿ ಮುನ್ಸಿಪಾಲಿಟಿಗೆ 5 ಕೋಟಿ ರು. ನೀಡುವ ಭರವಸೆಗಳನ್ನು ಪಕ್ಷ ನೀಡಿದೆ.

PM Modi UP Virtual Rally: ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವುದು ಪ್ರತಿಪಕ್ಷಗಳ ಏಕೈಕ ಅಜೆಂಡಾ: ಪ್ರಧಾನಿ!

ಉತ್ತರಾಖಂಡ: ಆಪ್‌ನಿಂದ ಪ್ರಣಾಳಿಕೆ ಘೋಷಣೆ
ಉತ್ತರಾಖಂಡ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಕೊನೆಗೊಳಿಸುವುದರ ಜೊತೆಗೆ ಎಲ್ಲರಿಗೂ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವುದಾಗಿ 11 ಅಂಶಗಳ ಪ್ರಣಾಳಿಕೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೋಮವಾರ ಘೋಷಿಸಿದ್ದಾರೆ. ಗುಣಮಟ್ಟದ ರಸ್ತೆ, ಶಾಲೆ, ಉದ್ಯೋಗ, ಆರೋಗ್ಯ ಸೇವೆ, ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ, ಉಚಿತ ವಿದ್ಯುತ್‌ ಸೇವೆ, ಅಯೋಧ್ಯೆ, ಅಜ್ಮೀರ್‌ ಶಾರೀಫ್‌ ಮತ್ತು ಕರ್ತಾರ್‌ಪುರ ಸಾಹಿಬ್‌ಗೆ ಉಚಿತ ಪ್ರಯಾಣ ಸೌಲಭ್ಯ, ನಿವೃತ್ತ ಸೈನಿಕರಿಗೆ ಸರ್ಕಾರಿ ಉದ್ಯೋಗ, ಹುತಾತ್ಮರಾದ ಯೋಧರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Follow Us:
Download App:
  • android
  • ios